ನಾನು ತಪ್ಪು ಮಾಡಿದ್ದಕ್ಕೆ ಅಮ್ಮ ಪೊರಕೆ ತಗೊಂಡು ಹೊಡೆದಿದ್ರು: ಸೋನು ಶ್ರೀನಿವಾಸ್ ಗೌಡ!

By ಫಿಲ್ಮಿಬೀಟ್ ಕನ್ನಡ

ಬಿಗ್ ಬಾಸ್ ಕನ್ನಡ ಓಟಿಟಿಯ ಮೊದಲ ಸೀಸನ್ ಮುಗಿದಿದೆ. ಇನ್ನೇನು ಟಿವಿಯಲ್ಲಿ ಪ್ರಸಾರ ಆಗುವ 9ನೇ ಸೀಸನ್‌ ಬಗ್ಗೆ ಎಲ್ಲರೂ ಎದುರು ನೋಡುತ್ತಿದ್ದಾರೆ. ಸುಮಾರು 42 ದಿನ ಬಿಗ್ ಬಾಸ್ ಮನೆಯಲ್ಲಿ ಬಂದಿರೋ ಸ್ಪರ್ಧಿಗಳಲ್ಲಿ ಸೋನು ಶ್ರೀನಿವಾಸ್ ಗೌಡ ಕೂಡ ಒಬ್ಬರು.

ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಮೆಂಟ್ ಬಂದಿತ್ತು. ಬಿಗ್ ಬಾಸ್ ಮನೆಯೊಳಗೆ ಸೋನು ಶ್ರೀನಿವಾಸ್ ಗೌಡರನ್ನು ಕಳುಹಿಸಬಾರದು ಅಂತ ಕಮೆಂಟ್ ಮಾಡಿದ್ದರು. ಆದರೆ, ಸೋನು ಶ್ರೀನಿವಾಸ್ ಗೌಡ ಆ ಎಲ್ಲಾ ಚಾಲೆಂಜ್‌ಗಳನ್ನು ಮೀರಿ 42 ದಿನಗಳೂ ಕೂಡ ಬಿಗ್ ಬಾಸ್ ಮನೆಯೊಳಗೆ ಇದ್ದು ಬಂದಿದ್ದಾರೆ.

ಇದೇ ವೇಳೆ ಸೋನು ತನ್ನ ಬದುಕಿನ ಕೆಲವು ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ತನ್ನ ಸ್ನೇಹಿತರ ಬಗ್ಗೆ, ತನ್ನ ತಂದೆಯ ಬಗ್ಗೆ, ತಪ್ಪು ಮಾಡಿದ್ದಕ್ಕೆ ಅಮ್ಮ ಪೊರಕೆ ತಗೊಂಡು ಹೊಡೆದಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ತನ್ನೊಂದಿಗೆ ಬೆಂಬಲವಾಗಿ ನಿಂತಿದ್ದ ರಾಕೇಶ್‌ ಬಗ್ಗೆನೂ ಫಿಲ್ಮಿ ಬೀಟ್ ಜೊತೆ ಹಂಚಿಕೊಂಡಿದ್ದಾರೆ.

 ಸ್ಮೋಕ್ ಮಾಡೋದು ಮನೆಯವರಿಗೆ ಗೊತ್ತು

ಸ್ಮೋಕ್ ಮಾಡೋದು ಮನೆಯವರಿಗೆ ಗೊತ್ತು

" ಒಳ್ಳೆಯದಿರಬಹುದು ಕೆಟ್ಟದ್ದಿರಬಹುದು ಮನೆಯವರಿಗೆ ಹೇಳ್ತೀನಿ. ನಮ್ಮ ಮನೆಯವರಿಗೆ ಗೊತ್ತಿತ್ತು. ನಾನು ಸ್ಮೋಕ್ ಮಾಡುತ್ತೇನೆ ಅಂತ. ಅದು ಪಾರ್ಟಿಗಳಲ್ಲಿ ಅಷ್ಟೇ. ನನಗೆ ಬೇಕೇ ಬೇಕು ಅಂತೇನು ಇಲ್ಲ. ಮೂರು ದಿನ ಆಯ್ತು ನಾನು ಒಂದೇ ಒಂದು ಸ್ಮೋಕ್ ಕೂಡ ಮಾಡಿಲ್ಲ. ಕಣ್ಮುಂದೆ ಕಾಣಿಸಿದ್ರೆ, ಶೋಕಿಗೆ ಸ್ಮೋಕ್ ಮಾಡುತ್ತಿದ್ದೆ ಅಂತ ನನಗೆ ಅನಿಸುತ್ತೆ. ಕೊಟ್ರೆ ನಾನು ಹೊಡೆಯುತ್ತೇನೆ. ಆದರೆ ಬೇಕೇ ಬೇಕು ಅಂತೇನು ಇಲ್ಲ."

 ಅಮ್ಮ ಪೊರಕೆ ತಗೊಂಡು ಹೊಡೆದಿದ್ರು

ಅಮ್ಮ ಪೊರಕೆ ತಗೊಂಡು ಹೊಡೆದಿದ್ರು

"ಹಲವು ಬಾರಿ ಹೊಡೆದಿದ್ದಾರೆ. ಈಗಲೂ ದೊಡ್ಡವರೂ ಅಂತಾನೂ ನೋಡದೆ ಹೊಡೆದಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗೋಕೆ ಒಂದು ವಾರ ಮುನ್ನ ನನ್ನ ತಮ್ಮ ಮನೆಗೆ ಚಾಕಲೇಟ್ ತೆಗೆದುಕೊಂಡು ಬರುತ್ತಾನೆ. ಅಕ್ವೇರಿಯಂ ಕೈಯಲ್ಲಿ ಹಿಡಿದುಕೊಂಡಿರುತ್ತೇನೆ. ಆ ಚಾಕಲೇಟ್ ಅಂತ ಅಕ್ವೇರಿಯಂ ಕೆಳಗೆ ಬಿಟ್ಟಿದ್ದೆ. ಅದೇ ಅಡುಗೆ ಮನೆಯಲ್ಲಿದ್ದ ಪೊರಕೆಯನ್ನು ತೆಗೆದುಕೊಂಡು ಅಮ್ಮ ಪಟ ಪಟ ಅಂತಾ ಹೊಡೆದಿದ್ರು."

 ನನಗೆ ತಂದೆ ಪ್ರೀತಿನೇ ಸಿಕ್ಕಿಲ್ಲ

ನನಗೆ ತಂದೆ ಪ್ರೀತಿನೇ ಸಿಕ್ಕಿಲ್ಲ

"ನಾನು ಎರಡನೇ ಕ್ಲಾಸ್ ಓದುತ್ತಿದೆ. ಆಗ ಅವರು ತುಂಬಾನೇ ಕುಡಿಯುತ್ತಿದ್ದರು. ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡಿದ್ದರು. ಅವರ ಪ್ರೀತಿ ನನಗೆ ಸಿಕ್ಕಿರಲಿಲ್ಲ. ನನಗೆ 9 ತಿಂಗಳು ಇದ್ದಾಗಲೇ ನಾನು ನನ್ನ ಅಜ್ಜಿ ಜೊತೆ ಬೆಳೆದೋಳು. ಎಲ್ಲೋ ಆರು ತಿಂಗಳಿಗೊಮ್ಮೆ. ವರ್ಷಕ್ಕೊಮ್ಮೆ ನಮ್ಮ ಅಪ್ಪನನ್ನು ನೋಡುತ್ತಿದ್ದೆ. ನಾನು ಅವರೊಂದಿಗೆ ಆಟ ಆಡಿರೋ ನೆನೆಪು. ನೋಡಿರೋ ನೆನಪು ಇವತ್ತಿಗೂ ಇಲ್ಲ.

 ನಿಜವಾದ ಸ್ನೇಹಿತ ಯಾರು?

ನಿಜವಾದ ಸ್ನೇಹಿತ ಯಾರು?

" ಒಬ್ಬ ಫ್ರೆಂಡ್ ಬರೀ ಒಳ್ಳೆಯದ್ದೇ ಹೇಳ್ಕೊಂಡು ಹೋಗೋನು ಟ್ರೂ ಫ್ರೆಂಡ್ ಅಲ್ಲ. ಒಬ್ಬ ಫ್ರೆಂಡ್ ಅಂದ್ಮೇಲೆ ಒಳ್ಳೆಯದ್ದನ್ನೂ, ಕೆಟ್ಟದನ್ನೂ ಹೇಳಿಕೊಂಡು ಹೋಗೋನು ನಿಜವಾದ ಸ್ನೇಹಿತ. ಬೇರೆಯವರು ಮನೆಯಲ್ಲಿ ಯಾರಾದರೂ ತಪ್ಪು ಮಾಡಿದರೆ, ಹೇ ಸೋನು ತಪ್ಪು ಮಾಡಿಬಿಟ್ಟೆ ಅಂತ ಹೇಳುತ್ತಿದ್ದರು. ಟಾಸ್ಕ್‌ನಲ್ಲಿ ಏನೋ ಒಳ್ಳೆಯದು ಮಾಡಿದರೆ ಚೆನ್ನಾಗಿ ಮಾಡಿದೆ ಅಂತ ಹೇಳುತ್ತಿದ್ದರು. ಅದು ಎಲ್ಲಾ ಕಡೆ ಸಿಗುತ್ತಿರಲಿಲ್ಲ. ಬರೀ ನೆಗೆಟಿವ್ ಸಿಗುತ್ತಿತ್ತು. ರಾಕಿ ಎಲ್ಲದನ್ನೂ ಒಂದೇ ತರ ನೋಡುತ್ತಿದ್ದ. " ಎಂದು ಬಿಗ್ ಬಾಸ್ ಓಟಟಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ.

More from Filmibeat

English summary
Bigg Boss Ott Contestant Sonu Srinivas Said She Got hit By Drumstick By His Mother, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X