ಬಿಗ್‌ ಬಾಸ್‌ 9ಕ್ಕೆ ರಾಕೇಶ್-ಗುರೂಜಿ ಮಾತ್ರ ಅರ್ಹರು: ಮತ್ತೆ ಸಾನ್ಯಳ ಕುಟುಕಿದ ಸೋನು

ಕನ್ನಡ ಬಿಗ್‌ ಬಾಸ್‌ ಓಟಿಟಿ ಮೊದಲ ಆವೃತ್ತಿ ಮುಕ್ತಾಯಗೊಂಡಿದ್ದು, ನಾಲ್ಕು ಜನ ಸ್ಫರ್ಧಿಗಳು ಈಗಾಗಲೇ ಬಿಗ್‌ ಬಾಸ್‌ ಕನ್ನಡ ಸೀಜನ್ 9ಕ್ಕೆ ಆಯ್ಕೆಯಾಗಿದ್ದಾರೆ. ಬಿಗ್‌ ಬಾಸ್‌ ಓಟಿಟಿ ನಿರೀಕ್ಷೆಗೂ ಮೀರಿ ಪ್ರೇಕ್ಷಕರನ್ನು ಗಳಿಸಿಕೊಂಡಿದೆ. ಬಿಗ್‌ ಬಾಸ್‌ ಓಟಿಟಿಯ 16 ಸ್ಫರ್ಧಿಗಳು, ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದು, ಕೇವಲ 8 ಮಂದಿ ಅಂತಿಮ ಹಂತಕ್ಕೆ ಬಂದು ತಲುಪಿದರು. ಈ ಪೈಕಿ ಸೋನು ಶ್ರೀನಿವಾಸ್‌ ಗೌಡ ಕೂಡ ಒಬ್ಬರು.

ಟಿಕ್‌ ಟಾಕ್ ಸ್ಟಾರ್‌ ಆಗಿದ್ದ ಸೋನು ಶ್ರೀನಿವಾಸ್‌ ಗೌಡ ಇತ್ತೀಚಿಗೆ ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕವೂ ಜನಪ್ರಿಯರಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದ ಸೂನು, ತಮ್ಮದೇ ಯೂಟ್ಯೂಬ್ ಚಾನೆಲ್‌ ಕೂಡ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದ್ದ ಸೋನು ಅವರನ್ನು ಈ ಬಾರಿಯ ಕನ್ನಡ ಬಿಗ್‌ ಬಾಸ್‌ ಓಟಿಟಿಯ ಸ್ಫರ್ಧಿಯಾಗಿ ಆಯ್ಕೆ ಮಾಡಲಾಗಿತ್ತು.

ಸೋನು ಬಿಗ್‌ ಬಾಸ್‌ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಇತ್ತ ಪರ ವಿರೋಧ ಚರ್ಚೆಗಳು ಕೂಡ ನಡೆದಿದ್ದವು. ಕೆಲವರು ಆಕೆ ಬಿಗ್‌ ಬಾಸ್‌ ಮನೆಗೆ ಹೋಗಿರುವುದು ಮಹಾ ಅಪರಾಧವೆಂಬಂತೆ ಕಾಮೆಂಟ್ ಮಾಡಿದ್ದರು. ಇದು ಕಿಚ್ಚ ಸುದೀಪ್‌ ಅವರಿಗೆ ಮಾಡಿದ ಅವಮಾನ ಎಂದೂ ಸಹ ಟೀಕಿಸಿದ್ದರು. ಆದರೆ ಸೋನು ಬಿಗ್‌ ಬಾಸ್‌ ಮನೆಯಲ್ಲಿ ಉತ್ತಮವಾಗಿ ಆಡಿ, ಫೈನಲಿಸ್ಟ್ ಆಗಿದ್ದರು. ಇನ್ನು ಬಿಗ್‌ ಬಾಸ್‌ ಮನೆಯೊಳಗೆ ತುಂಬಾ ಮುಕ್ತವಾಗಿ ಮಾತನಾಡಿಕೊಂಡಿದ್ದ ಸೋನು, ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಕಹಿ ಅನುಭವವನ್ನು ಸಹ ಹೇಳಿಕೊಂಡಿದ್ದರು. ಇದೀಗ ಸೋನು ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದು, ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ್ದಾರೆ.

Bigg Boss Ott Contestant Sonu Srinivas Gowda Shares Her Opinion About Bigg Boss 9 Contestants

ನಾನು ಟಿವಿ ಸೀಜನ್ 9ಕ್ಕೆ ಹೋಗುತ್ತೇನೆ ಎಂದುಕೊಂಡಿದ್ದೆ, ಆದರೆ ಅಲ್ಲಿನ ನಿಯಮಗಳಿರುತ್ತದೆ. ನನಗಿಂತ ಜಾಸ್ತಿ ಓಟ್ ಅವರಿಗೆ ಬಂದಿರುವುದರಿಂದ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ಗ್ರಾಂಡ್‌ ಫೀನಾಲೆ ದಿನ ನನಗೆ ಫಸ್ಟ್‌ ಟೈಮ್‌ ಸುದೀಪ್‌ ಸರ್‌ ಕೇಳಿದಾಗ, ನನಗೆ ಯಾವುದೇ ಚಿಂತೆ ಇಲ್ಲಾ ಎಂದು ಹೇಳಿದ್ದೆ. ಆದರೆ ಹೊರಗಿದ್ದ ಸ್ಫರ್ಧಿಗಳಲ್ಲಿ ಕೆಲವರು ನನ್ನ ಹೆಸರು ಹೇಳಿದ್ರು, ಇನ್ನು ಕೆಲವರು ಸೋನು ಇನ್ನೂ ಪ್ರಯತ್ನ ಮಾಡಬೇಕಿತ್ತು ಎಂದರು. ಆಗ ರಾಕೇಶ್ ನೀನು ಹೊರಗಡೆ ಹೀಗೆ ಕಾಣಿಸಿದ್ಯಾ ಅಂದಾ, ಅದರಿಂದ ನಾನು ಇನ್ನೂ ಕನ್ಫೂಸ್ ಆಗಿದ್ದೆ. ಬಳಿಕ ಸ್ಟೇಜ್ ಮೇಲೆ ಬಂದು ನನ್ನ ಫ್ಯಾಮಿಲಿನಾ ನೋಡ್ದಾಗ ಇರುವ ಟೆನ್ಷನ್ ಎಲ್ಲಾ ಹೋಯ್ತು ಎಂದರು.

ಇನ್ನು ಬಿಗ್‌ ಬಾಸ್‌ ಓಟಿಟಿಯಿಂದ ಬಿಗ್‌ ಬಾಸ್‌ ಸೀಜನ್ 9ಕ್ಕೆ ಆಯ್ಕೆಯಾಗಿರುವ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ ಹಾಗೂ ಸಾನ್ಯಾ ಐಯ್ಯರ್ ಬಗ್ಗೆ ಮಾತನಾಡಿದ ಸೋನು, ನನ್ನ ಪ್ರಕಾರ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ ಹೋಗಿರುವುದು ಓಕೆ. ಇನ್ನಿಬ್ಬರು ಹೋಗಲ್ಲ ಎನ್ನುವ ಭಾವನೆ ನನಗಿತ್ತು. ಆದರೆ ಹೋಗಿದ್ದಾರೆ. ಈ ಬಗ್ಗೆ ಇನ್ನು ಹೆಚ್ಚಿಗೆ ನನಗೆ ಗೊತ್ತಿಲ್ಲ. ಅವರಿಬ್ಬರ ಬದಲು ನಾನು ಹಾಗೂ ಸೋಮಣ್ಣ ಮಾಚಿಮಾಡ ಹೋಗುತ್ತೇವೆ ಅಂತಾ ಊಹಿಸಿದ್ದೆ ಎಂದು ಹೇಳಿದರು.

ಇನ್ನು ನಾನು ಬಿಗ್‌ ಬಾಸ್‌ಗೆ ಬರುವ ಆಲೋಚನೆ ಇರಲಿಲ್ಲ. ಆಸ್ಟ್ರೇಲಿಯಾಗೆ ಹೋಗಬೇಕು ಅಂತಾ ಟಿಕೆಟ್ ಕೂಡ ಬುಕ್‌ ಮಾಡಿದ್ದೆ. ಕಲರ್ಸ್ ಕನ್ನಡದವರಿಂದ ಮತ್ತೆ ಮತ್ತೆ ಕರೆ ಬರುತ್ತಿತ್ತು. ನಾನು ಅದನ್ನು ನೆಗ್ಲೆಕ್ಟ್ ಮಾಡಿದ್ದೆ. ಬಳಿಕ ಮನೆಯವರ ಜೊತೆ ಈ ವಿಚಾರ ಶೇರ್‌ ಮಾಡಿಕೊಂಡಿಕೊಂಡೆ. ಅಮ್ಮಾ ಓಕೆ ಹೋಗು, ನಿನ್ನಲ್ಲಿರುವ ನೆಗೆಟಿವಿಟಿನಾ ಪಾಸಿಟಿವ್ ಮಾಡಿಕೊಳ್ಳಲು ಒಳ್ಳೆ ವೇದಿಕೆ ಅಂದ್ರು, ಅದಾದ ಮೇಲೆ ಅವರನ್ನು ಕಾಡಿಸಿ, ಬೇಡಿಸಿ ಕೊನೆಗೂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಮೇಲೆ ಎಲ್ಲಾ ಓಕೆ ಆಯ್ತು ಎಂದು ಬಿಗ್‌ ಬಾಸ್‌ ಓಟಿಟಿಗೆ ಆಯ್ಕೆಯಾದ ಬಗ್ಗೆ ಸೋನು ಶ್ರೀನಿವಾಸ್‌ ಗೌಡ ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.

More from Filmibeat

English summary
Bigg Boss Ott Contestant Sonu Srinivas Gowda shares her opinion about Bigg Boss 9 contestants with Filmibeat Kannada,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X