Bigg Boss OTT Kannada: ಬಿಗ್‌ಬಾಸ್‌ನಿಂದ ಹೊರಗೆ ಬಂದ್ರು ಮೊದಲ ಸ್ಪರ್ಧಿ

ಬಿಗ್‌ಬಾಸ್ ಒಟಿಟಿ ಕನ್ನಡ ಶುರುವಾಗಿ ಒಂದು ವಾರವಾಗಿದೆ. ಕಿಚ್ಚ ಸುದೀಪ್ ವಾರದ ಪಂಚಾಯ್ತಿಗೆ ಬಂದಿದ್ದಾರೆ. ಸುದೀಪ್ ಬಂದರೆಂದರೆ ಸಾಕಷ್ಟು ಮನೊರಂಜನೆ ಜೊತೆಗೆ ಒಬ್ಬರನ್ನು ಮನೆಯಿಂದ ಹೊರಗೆ ಕರೆದುಕೊಂಡು ಸಹ ಹೋಗುತ್ತಾರೆ.

ಅಂತೆಯೇ ಈ ವಾರ ಬಿಗ್‌ಬಾಸ್ ಮನೆಯಿಂದ ಈ ಒಟಿಟಿ ಸೀಸನ್‌ನ ಮೊದಲ ಸ್ಪರ್ಧಿಯನ್ನು ಹೊರಗೆ ತೆಗೆದುಕೊಂಡು ಹೋಗಿದ್ದಾರೆ.

ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಲು ರಾಕೇಶ್ ಅಡಿಗ, ಕಿರಣ್, ಅರ್ಜುನ್, ಸ್ಪೂರ್ತಿ ಗೌಡ, ಜಯಶ್ರೀ, ಸೋನು ಗೌಡ, ಉದಯ್, ಅಕ್ಷತಾ, ಆರ್ಯವರ್ಧನ್ ಗುರೂಜಿ ಅವರುಗಳು ನಾಮಿನೇಟ್ ಆಗಿದ್ದರು.

ಸುದೀಪ್ ಅವರು ತಮ್ಮ ಎಂದಿನ ಶೈಲಿಯಲ್ಲಿ ಮೊದಲು ಸೇಫ್ ಆಗಿರುವವರ ಹೆಸರುಗಳನ್ನು ಹೇಳುತ್ತಾ ಬಂದರು. ಜೊತೆಗೆ ಮನೆಯಲ್ಲಿರುವ ಸದಸ್ಯರನ್ನೂ ಅವರ ಅಭಿಪ್ರಾಯ ಕೇಳುತ್ತಾ ಬಂದರು.

ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಅರ್ಜುನ್, ಸೋನು ಗೌಡ ಅವರುಗಳು ಆರಂಭದಲ್ಲಿಯೇ ಸೇಫ್ ಆಗಿಬಿಟ್ಟರು. ಸ್ಪೂರ್ತಿ, ಜಯಶ್ರೀ, ಕಿರಣ್, ಉದಯನ್ ಅವರ ನಡುವೆ ಸ್ಪರ್ಧೆ ಇತ್ತು.

Bigg Boss OTT Kannada: Kiran Yogeshwar First Contestant To Came Out From House

ಅಂತಿಮವಾಗಿ ಕಿರಣ್ ಯೋಗೀಶ್ವರ್ ಮತ್ತು ಅಕ್ಷತಾ ಉಳಿದುಕೊಂಡರು. ಅಂತಿಮವಾಗಿ ಕಿರಣ್ ಯೋಗೀಶ್ವರ್ ಅವರನ್ನು ಸುದೀಪ್ ಮನೆಯಿಂದ ಹೊರಗೆ ಕರೆದರು. ಅಲ್ಲಿಗೆ ಮೊದಲ ವಾರವೇ ಮನೆಯಿಂದ ಕಿರಣ್ ಯೋಗೀಶ್ವರ್ ಹೊರಗೆ ಬಂದಿದ್ದಾರೆ.

ಕಿರಣ್, ಮನೆಯ ಎಲ್ಲ ಸದಸ್ಯರ ಮೆಚ್ಚಿನ ಸ್ಪರ್ಧಿ ಆಗಿದ್ದರು. ಮನೆಯಲ್ಲಿ ಅಡುಗೆ ಮಾಡುವುದು, ಎಲ್ಲರಿಗೂ ಯೋಗ ಹೇಳಿಕೊಡುವುದು ಎಲ್ಲವನ್ನೂ ಮಾಡುತ್ತಾ ಇರುತ್ತಿದ್ದರು. ಆದರೆ ಅವರೇ ಎಲಿಮಿನೇಟ್ ಆಗಿರುವುದು ಮನೆಯ ಸ್ಪರ್ಧಿಗಳಿಗೂ ಆತಂಕ ತಂದಿದೆ.

ಮನೆಯಿಂದ ಯಾರು ಎಲಿಮಿನೇಟ್ ಆಗಬೇಕು ಎಂದು ಸುದೀಪ್ ಕೇಳಿದಾಗ ಬಹುತೇಕರು ಜಯಶ್ರೀ ಹೆಸರು ಹೇಳಿದ್ದರು. ಹನ್ನೆರಡು ಮಂದಿ ಸದಸ್ಯರು ಜಯಶ್ರೀ ಎಲಿಮಿನೇಟ್ ಆಗಬೇಕು ಎಂದಿದ್ದರು. ಆದರೆ ಎಲಿಮಿನೇಟ್ ಆಗಿದ್ದು ಮಾತ್ರ ಕಿರಣ್.

More from Filmibeat

English summary
Bigg Boss OTT Kannada: Kiran Yogeshwar became first contestant to came out from house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X