For Quick Alerts
  ALLOW NOTIFICATIONS  
  For Daily Alerts

  ಉದಯ್ ಹಿಂದಿನಿಂದ ತಬ್ಬಿಕೊಂದು ಮುತ್ತು ಕೊಡ್ತಾನೆ: ಬಿಗ್‌ಬಾಸ್ ಮನೆಯ ಹೆಣ್ಮಕ್ಳ ದೂರು

  |

  ಬಿಗ್‌ಬಾಸ್ ಮನೆಯಲ್ಲಿ ಹೈಪರ್ ಆಕ್ಟಿವ್ ಸದಸ್ಯ ಎಂದೇ ಖ್ಯಾತಿಯಾಗಿರುವ ಉದಯ್ ಸೂರ್ಯ ವಿರುದ್ದ ಗಂಭೀರ ಆರೋಪ ಮನೆಯ ಕೆಲವು ಹೆಣ್‌ ಮಕ್ಳು ಮಾಡಿದ್ದಾರೆ.

  ಉದಯ್ ಸೂರ್ಯ, ಹಿಂದಿನಿಂದ ಬಂದು ತಬ್ಬಿಕೊಳ್ಳುತ್ತಾನೆ ಕಿವಿಯ ಬಳಿ ಮುತ್ತು ಕೊಡ್ತಾನೆ ಎಂದು ಸಾನ್ಯಾ ಐಯ್ಯರ್ ಮೊದಲಿಗೆ ನಂದು ಬಳಿ ಹೇಳಿದರು. ಬಳಿಕ ನಂದು ಸಹ ಅದೇ ಅನುಭವ ನನಗೂ ಆಗಿದೆ. ಜಶ್ವಂತ್ ಎದುರು ಸಹ ನನಗೆ ಮಾಡಿದ. ನಾನಂತೂ ಕೆಲವು ಬಾರಿ ಆತನಿಂದ ತಪ್ಪಿಸಿಕೊಂಡಿದ್ದೇನೆ ಎಂದಿದ್ದಾರೆ.

  ಅಕ್ಷತಾ ಸಹ ಇದೇ ಬಗ್ಗೆ ನೇರವಾಗಿ ಉದಯ್‌ ಜೊತೆ ಮಾತನಾಡಿದ್ದಾರೆ. ಉದಯ್, ತಮ್ಮನ್ನು ಹಿಂದಿನಿಂದ ತಬ್ಬಿಕೊಂಡು ಕಿವಿಗೆ ಮುತ್ತುಕೊಟ್ಟಿದ್ದನ್ನೇ ಉದಾಹರಣೆಯಾಗಿ ಇಟ್ಟುಕೊಂಡು, ತಪ್ಪು ತಿಳಿದುಕೊಳ್ಳಬೇಡ, ನೀನು ಹೀಗೆ ಹಿಂದಿನಿಂದ ತಬ್ಬಿಕೊಳ್ಳುತ್ತೀಯಲ್ಲ ಅದನ್ನು ಮನೆಯ ಜನ ತಪ್ಪಾಗಿ ತಿಳಿದುಕೊಳ್ಳಬಹುದು. ಬೇರೆಯವರು ನಿನ್ನ ಬಗ್ಗೆ ಹಾಗೆ ಮಾತನಾಡುವುದು ಇಷ್ಟವಿಲ್ಲ ಅದಕ್ಕೆ ಇದನ್ನು ನಿನಗೆ ಹೇಳಿದೆ ಎನ್ನುತ್ತಾರೆ.

  ಇದನ್ನು ಕೇಳಿಸಿಕೊಂಡ ಉದಯ್ ಬೇಸರ ಮಾಡಿಕೊಳ್ಳುತ್ತಾರೆ. ಸಾನಿಯಾ ಸಹ ಉದಯ್‌ ಜೊತೆ ಇದರ ಬಗ್ಗೆ ನೇರವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ನಾಳೆ ಸುದೀಪ್ ಬೇರೆ ಬರಲಿದ್ದಾರೆ, ಉದಯ್‌ರ ಈ ಅಭ್ಯಾಸದ ಬಗ್ಗೆ ಸುದೀಪ್ ಏನು ಹೇಳಲಿದ್ದಾರೆ ಎಂಬುದು ಕಾದು ನೋಡಬೇಕಿದೆ.

  ಎರಡನೇ ವಾರ ಮುಗಿಯುತ್ತಾ ಬಂದಿದೆ. ಇದೀಗ ಕ್ಯಾಪ್ಟೆನ್ಸಿ ಟಾಸ್ಕ್ ಚಾಲ್ತಿಯಲ್ಲಿದೆ. ಕ್ಯಾಪ್ಟೆನ್ಸಿ ಟಾಸ್ಕ್‌ಗೆ ಕಂಟೆಸ್ಟೆಂಟ್‌ಗಳಾಗಿ ಚೈತ್ರಾ, ಜಸ್ವಂತ್ ಹಾಗೂ ಆರಾಧ್ಯ ಆಯ್ಕೆಯಾಗಿದ್ದಾರೆ. ಯಾರು ಕ್ಯಾಪ್ಟೆನ್ಸಿ ಟಾಸ್ಕ್‌ಗೆ ಆಯ್ಕೆಯಾಗುತ್ತಾರೊ ಅವರ ನಡುವೆ ಸ್ಪರ್ಧೆ ನಡೆಯಲಿದೆ.

  ಅರ್ಜುನ್‌ರ ಕ್ಯಾಪ್ಟೆನ್ಸಿ ಅವಧಿ ಮುಗಿದಿದ್ದು, ಇದೀಗ ಹೊಸ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಬೇಕಿದೆ. ಸುದೀಪ್ ಅವರು ನಾಳೆ ಸಂಜೆ ಬರುವ ವೇಳೆಗೆ ಹೊಸ ಕ್ಯಾಪ್ಟನ್ ಆಯ್ಕೆ ಆಗಿರುತ್ತದೆ. ಮತ್ತು ಈ ವಾರದ ಕಳಪೆ ಆಟಗಾರ ಯಾರು ಎಂಬುದು ನಿಶ್ಚಯ ಆಗುವ ಜೊತೆಗೆ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದು ಸಹ ನಿಶ್ಚಯ ಆಗಲಿದೆ.

  English summary
  Bigg Boss OTT Kannada: Nandu, Sanya and Akshata complaint about Uday Surya's Behavior. They felt uncomfort about Uday's hug.
  Friday, August 19, 2022, 10:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X