For Quick Alerts
  ALLOW NOTIFICATIONS  
  For Daily Alerts

  Bigg Boss OTT Kannada: ಟಾಸ್ಕ್‌ನಲ್ಲಿ ಗೆದ್ದ ನಂದು, ಸೋಮಣ್ಣಗೆ ಸೋಲು

  |

  ಬಿಗ್‌ಬಾಸ್‌ ಒಟಿಟಿ ಕನ್ನಡ ರಿಯಾಲಿಟಿ ಶೋ ಪ್ರಾರಂಭವಾಗಿ ಒಂದು ವಾರ ಕಳೆದಿದೆ. ಈಗಾಗಲೇ ಒಬ್ಬರು ಮನೆಯ ಸದಸ್ಯರು ಮನೆಯಿಂದ ಹೊರಗೆ ಹೋಗಿದ್ದು ಸಹ ಆಗಿದೆ.

  ವಾರಾಂತ್ಯದಲ್ಲಿ ತುಸು ಆರಾಮವಾಗಿದ್ದ ಮನೆಯ ಸದಸ್ಯರಿಗೆ ಸೋಮವಾರದಂದು ಸ್ವಾತಂತ್ರ್ಯದಿನೋತ್ಸವದ ಖುಷಿಯ ಜೊತೆಗೆ ಟಾಸ್ಕ್‌ನ ಬಿಸಿಯೂ ಎದುರಾಗಿದೆ.

  Bigg Boss OTT Kannada: ಸೋನುಗೆ ಖಾರವಾಗೇ ಬುದ್ಧಿವಾದ ಹೇಳಿದ ಸುದೀಪ್Bigg Boss OTT Kannada: ಸೋನುಗೆ ಖಾರವಾಗೇ ಬುದ್ಧಿವಾದ ಹೇಳಿದ ಸುದೀಪ್

  ಮೊದಲಿಗೆ ಮನೆಯ ಸದಸ್ಯರಲ್ಲಿ ಎರಡು ಗುಂಪುಗಳನ್ನಾಗಿ ಮಾಡಲಾಯಿತು. ಮನೆಯ ನಾಯಕನಾಗಿರುವ ಅರ್ಜುನ್ ಸೂಚನೆಯಂತೆ ಸೋಮಣ್ಣ ಹಾಗೂ ನಂದು ನಾಯಕರಾದರು. ಇಬ್ಬರೂ ತಮ್ಮ ತಂಡಕ್ಕೆ ಸದಸ್ಯರನ್ನು ಆಯ್ಕೆ ಮಾಡಿಕೊಂಡರು. ಆದರೆ ಗುರೂಜಿಯನ್ನು ಎರಡೂ ತಂಡದವರು ಆಯ್ಕೆ ಮಾಡಿಕೊಳ್ಳಲಿಲ್ಲ.

  ಟಾಸ್ಕ್ ನೀಡಿದ ಬಿಗ್‌ಬಾಸ್

  ಟಾಸ್ಕ್ ನೀಡಿದ ಬಿಗ್‌ಬಾಸ್

  ನಂದು ತಂಡದಲ್ಲಿ, ಚೈತ್ರಾ ಹಳ್ಳಿಕೆರೆ, ಜಶ್ವಂತ್, ಸಾನಿಯಾ, ಸೋನು ಗೌಡ, ಜಯಶ್ರೀ ಅವರುಗಳು ಇದ್ದರೆ, ಸೋಮಣ್ಣನ ಟೀಂನಲ್ಲಿ ರಾಕೇಶ್, ಉದಯ್, ರೂಪೇಶ್, ಸ್ಪೂರ್ತಿ ಹಾಗೂ ಅಕ್ಷತಾ ಇದ್ದರು. ಇಬ್ಬರಿಗೂ ಮೊದಲ ಟಾಸ್ಕ್ ಎದುರಾಯಿತು. ಅದೆಂದರೆ ಇಬ್ಬರು ಸದಸ್ಯರಿಗೆ ಕಣ್ಣಿಗೆ ಬಟ್ಟೆ ಕಟ್ಟಲಾಗುತ್ತದೆ. ಒಬ್ಬ ವ್ಯಕ್ತಿ ತನ್ನ ಮುಂದಿರುವ ವಸ್ತುವನ್ನು ಬಾಯಿಂದ ಮಾತ್ರ ಮುಟ್ಟಿ ಅಥವಾ ತಿಂದು ಅದನ್ನು ವರ್ಣಿಸಬೇಕು, ಆ ವರ್ಣನೆಯ ಆಧಾರದ ಮೇಲೆ ಎದುರಿಗೆ ಕುಳಿತಿರುವ ವ್ಯಕ್ತಿ ಆ ವಸ್ತು ಏನೆಂದು ಗುರುತು ಹಿಡಿಯಬೇಕು.

  ಎಲ್ಲ ವಸ್ತುಗಳನ್ನೂ ಗುರುತಿಸಿದ ನಂದು ತಂಡ

  ಎಲ್ಲ ವಸ್ತುಗಳನ್ನೂ ಗುರುತಿಸಿದ ನಂದು ತಂಡ

  ಮೊದಲಿಗೆ ಟಾಸ್ಕ್‌ನಲ್ಲಿ ಪಾರ್ಟಿಸಿಪೇಟ್ ಮಾಡಿದ ಸೋಮಣ್ಣ ತಂಡ 12 ವಸ್ತುಗಳಲ್ಲಿ 9 ವಸ್ತುಗಳನ್ನು ಸರಿಯಾಗಿ ಗೆಸ್ ಮಾಡಿದರು. ಸ್ಪೂರ್ತಿ ಗೌಡ ಹಾಗೂ ಅಕ್ಷತಾ ಅವರುಗಳು ಹೆಚ್ಚು ವಸ್ತುಗಳನ್ನು ಗೆಸ್ ಮಾಡಲು ವಿಫಲವಾದರು. ಆದರೆ ನಂದು ತಂಡದವರು ಸರಿಯಾದ ನಾಲ್ಕು ಜನರನ್ನು ಆರಿಸಿದ್ದರಾದ್ದರಿಂದ ಸರಿಯಾಗಿ, ಸಮಾಧಾನದಿಂದ ಆಟವಾಡಿ 12 ಕ್ಕೆ 12 ವಸ್ತುಗಳನ್ನು ಸರಿಯಾಗಿ ಗೆಸ್ ಮಾಡಿ ವಿಜೇತರಾದರು.

  ಸ್ಪೂರ್ತಿ ಗೌಡ ಸರಿಯಾಗಿ ಆಡಲಿಲ್ಲ

  ಸ್ಪೂರ್ತಿ ಗೌಡ ಸರಿಯಾಗಿ ಆಡಲಿಲ್ಲ

  ಆದರೆ ಸೋಮಣ್ಣನ ತಂಡದಲ್ಲಿ ಆಡಿದ ಸ್ಪೂರ್ತಿ ಗೌಡ, ಬಿಸಿಬೇಳೆ ಬಾತ್ ಅನ್ನು ಗೆಸ್ ಮಾಡದೇ ಇರುವುದು ಸೋಮಣ್ಣ ತಂಡಕ್ಕೆ ಅಪಮಾನವಾಗಿ ಕಾಡಿದರೆ, ಬೇರೆಯವರಿಗೆ ತಮಾಷೆಯಾಗಿತ್ತು. ಕಣ್ಣಿಗೆ ಬಟ್ಟೆಕಟ್ಟಿಕೊಂಡು ಬಿಸಿ ಬೇಳೆ ಬಾತ್ ತಿಂದ ಸ್ಪೂರ್ತಿ ಗೌಡ ಅದನ್ನು ಸರಿಯಾಗಿ ವಿವರಿಸಲು ವಿಫಲರಾದರು. ತರಕಾರಿ ಇದೆ, ಬೆಳಿಗ್ಗೆ ತಿಂಡಿಗೆ ತಿನ್ನುತ್ತೇವೆ ಖಾರ ಇದೆ ಎಂದಷ್ಟೆ ಹೇಳಿದರು. ಇಷ್ಟೇ ಮಾಹಿತಿಯಿಂದ ಅಕ್ಷತಾಗೆ ಸರಿಯಾದ ಉತ್ತರ ಗೆಸ್ ಮಾಡಲು ಸಾಧ್ಯವಾಗಲಿಲ್ಲ.

  ಹಲವು ಟಾಸ್ಕ್‌ಗಳು ಎದುರಾಗಲಿವೆ

  ಹಲವು ಟಾಸ್ಕ್‌ಗಳು ಎದುರಾಗಲಿವೆ

  ಈ ವಾರ ಸಾಕಷ್ಟು ಟಾಸ್ಕ್‌ಗಳನ್ನು ಈ ಎರಡು ತಂಡಗಳು ಆಡಬೇಕಾಗಿದೆ. ಮುಂದಿನ ದಿನಗಳಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ಸಹ ಇದೆ. ಈಗ ನಡೆದಿರುವ ಟಾಸ್ಕ್‌ನಲ್ಲಿ ಗೆದ್ದ ತಂಡ ಲಕ್ಷುರಿ ಬಜೆಟ್‌ ಪಡೆಯುವ ಸಾಧ್ಯತೆ ಇದೆ. ಕಳೆದ ವಾರ ಲಕ್ಷುರಿ ಬಜೆಟ್ ಅನ್ನು ರಾಕೇಶ್ ತಂಡ ಪಡೆದುಕೊಂಡಿತ್ತು. ನಾಲ್ಕು ಸಾವಿರ ಪಾಯಿಂಟ್ಸ್‌ನಲ್ಲಿ ಎರಡು ಸಾವಿರಕ್ಕೂ ಅವರು ಸಾಮಾನು ಖರೀದಿ ಮಾಡಲಿಲ್ಲ. ಈ ಬಾರಿ ಏನು ಮಾಡುತ್ತಾರೆ ನೋಡಬೇಕಾಗಿದೆ.

  English summary
  Bigg Boss OTT Kannada: Nandu team won in a task against Somanna team. Due to Spoorthy Gowda's poor performance Somanna team loose.
  Monday, August 15, 2022, 19:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X