For Quick Alerts
  ALLOW NOTIFICATIONS  
  For Daily Alerts

  Bigg Boss OTT Kannada: ತನ್ನ ಹಾಗೂ ರೂಪೇಶ್ ನಡುವಿನ ಸಂಬಂಧ ಸ್ಪಷ್ಟಪಡಿಸಿದ ಸಾನಿಯಾ

  |

  ಬಿಗ್‌ಬಾಸ್ ಒಟಿಟಿ ಕನ್ನಡ ರಿಯಾಲಿಟಿ ಶೋ ಶುರುವಾಗಿ ಒಂದು ವಾರ ಕಳೆದಿದೆ. ಮನೆಯ ಸದಸ್ಯರ ನಡುವೆ ಬಂಧವೊಂದು ಏರ್ಪಟ್ಟಿದೆ. ಒಬ್ಬೊಬ್ಬರಿಗೆ ಒಬ್ಬೊಬ್ಬರ ಮೇಲೆ ವಿಶೇಷ ಬಾಂಧವ್ಯವಿದೆ.

  ಬಿಗ್‌ಬಾಸ್ ಮನೆಯ ಸದಸ್ಯರಲ್ಲಿ ಅತ್ಯಂತ ಸುಂದರಿ ಸ್ಪರ್ಧಿ ಎಂದು ಖ್ಯಾತಿಗಳಿಸಿರುವ ನಟಿ ಸಾನಿಯಾ ಯಾರ ಅಂಕೆಗೂ ಸಿಗದೆ ಎಲ್ಲರೊಟ್ಟಿಗೆ ಸಮಾನ ಅಂತರ ಹಾಗೂ ಸಮಾನ ಬಾಂಧವ್ಯ ನಿಭಾಯಿಸುತ್ತಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ರೂಪೇಶ್ ಹಾಗೂ ಸಾನಿಯಾ ನಡುವೆ ಏನೋ ನಡೆಯುತ್ತಿದೆ ಎಂಬ ಅನುಮಾನ ಮನೆಯ ಸದಸ್ಯರಿಗೆ ಉಂಟಾಗಿದೆ.

  ರೂಪೇಶ್ ಕೆಲವು ಸಂದರ್ಭಗಳಲ್ಲಿ ಸಾನಿಯಾ ಮೇಲೆ ತಮಗೆ ಆಸಕ್ತಿ ಇದೆ ಎಂಬುದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಆದರೆ ಸಾನಿಯಾ ಈ ಬಗ್ಗೆ ನೇರವಾಗಿ ಹೇಳಿಲ್ಲವಾದರೂ ಅವರು ಹೆಚ್ಚು ಕಾಲ ರೂಪೇಶ್ ಜೊತೆ ಕಳೆಯುತ್ತಿರುವುದು ಮನೆಯ ಸದಸ್ಯರಲ್ಲಿ ಗೊಂದಲ ಮೂಡಿಸಿದೆ.

  ನಿನ್ನೆ ರಾತ್ರಿಯಂತೂ ಎಲ್ಲರೂ ಮಲಗಿದ್ದಾಗ ರೂಪೇಶ್ ಹಾಗೂ ಸಾನಿಯಾ ಬೆಡ್‌ರೂಮ್‌ನಲ್ಲಿ ತೀರಾ ಗುಸು-ಗುಸು ಎಂದು ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ ಮುನ್ನ ನೀನು ಹೊರಗೆ ಬಂದ ಮೇಲೆ ನಿನಗೆ ಹೇಳುತ್ತೇನೆ, ಇಲ್ಲಿ ಕ್ಯಾಮೆರಾ ಇದೆ, ರೆಕಾರ್ಡ್ ಆಗುತ್ತಿರುತ್ತದೆ ಎಂದಿದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದೆ. ಬೆಡ್ ಮೇಲೆ ಕೂತಿದ್ದಾಗ ಸಹ ತೀರ ಗುಸು-ಗುಸು ಮಾತನಾಡಿದ್ದಾರೆ.

  ಆದರೆ ಇಂದು ಅಂದರೆ ಶುಕ್ರವಾರ ಮನೆಯ ಸದಸ್ಯರಿಗೆ ಟಾಸ್ಕ್ ಒಂದನ್ನು ಬಿಗ್‌ಬಾಸ್ ನೀಡಿದ್ದರು. ಬಿಗ್‌ಬಾಸ್ ಮನೆಯಿಂದ ಒಬ್ಬ ಸದಸ್ಯರು ಹೊರಗೆ ಹೋಗಲು ಕೆಲವೇ ಗಂಟೆಗಳು ಬಾಕಿ ಇದೆ. ಈ ಸಮಯದಲ್ಲಿ ಒಬ್ಬರಿಗೊಬ್ಬರು ಈ ವಾರದಲ್ಲಾದ ಅನುಭವ ಹೇಳಿಕೊಳ್ಳಿ ಹಾಗೂ ಮನೆಯಲ್ಲಿ ಯಾರಿಗಾದರೂ ಪ್ರಶ್ನೆ ಕೇಳುವುದಿದ್ದರೆ ಕೇಳಿ ಎಂದರು.

  ಆ ಅವಕಾಶ ಸದುಪಯೋಗ ಪಡಿಸಿಕೊಂಡ ಸಾನಿಯಾ, ನನ್ನ ಹಾಗೂ ರೂಪೇಶ್ ಶೆಟ್ಟಿ ನಡುವೆ ಏನೋ ನಡೆಯುತ್ತಿದೆ ಎಂದು ಹೇಳುತ್ತಿದ್ದೀರ ಅಂಥಹದ್ದು ಏನೂ ಇಲ್ಲ. ನಾವು ಗೆಳೆಯರು ಅಷ್ಟೆ ಎಂದ ಸಾನಿಯಾ, ಟಾಸ್ಕ್‌ನಲ್ಲಿರುವಂತೆ ರೂಪೇಶ್‌ಗೆ ಪ್ರಶ್ನೆ ಕೇಳಿ, 'ನಾನು ನಿಮಗೆ ಏನಾಗಬೇಕು?' ಎಂದರು. ಅದಕ್ಕೆ ಉತ್ತರಿಸಿದ ರೂಪೇಶ್, ಸಾನಿಯಾ ನನಗೆ ಒಳ್ಳೆಯ ಸ್ನೇಹಿತೆ ಮಾತ್ರವೇ ಎಂದರು.

  ಅಲ್ಲಿಗೆ ಬಿಗ್‌ಬಾಸ್‌ ಮನೆಯಲ್ಲಿ ಹುಟ್ಟುತ್ತಿದ್ದ ಹೊಸ ಪ್ರೇಮಕತೆಯೊಂದು ಆರಂಭದಲ್ಲಿಯೇ ಗೆಳೆತನ ಸ್ಟಾಪಿನಲ್ಲೇ ಉಳಿದುಕೊಂಡಿದೆ. ಇನ್ನು ರಾಕೇಶ್-ಸೋನು ಗೌಡ-ಸ್ಪೂರ್ತಿ ಗೌಡ ನಡುವಿನ ತ್ರಿಕೋನ ಪ್ರೇಮಕತೆ ಹಾಗೆಯೆ ಜಾರಿಯಲ್ಲಿದೆ.

  English summary
  Bigg Boss OTT Kannada: Sanya Iyer clarifies her relation with Roopesh Shetty. She said they both are just friends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X