Bigg Boss OTT Kannada: ಸೋನುಗೆ ಖಾರವಾಗೇ ಬುದ್ಧಿವಾದ ಹೇಳಿದ ಸುದೀಪ್
ಬಿಗ್‌ಬಾಸ್ ಮನೆಯಲ್ಲಿ ಒಂದು ವಾರ ಕಳೆದು ಒಬ್ಬರು ಸ್ಪರ್ಧಿ ಹೊರಗೆ ಹೋಗಿದ್ದಾರೆ. ಅದರ ಜೊತೆಗೆ ಇದೀಗ ಮತ್ತೊಂದು ವಾರದ ಪಂಚಾಯಿತಿಯನ್ನು ಸುದೀಪ್ ನಡೆಸಿದ್ದಾರೆ.
ನಿನ್ನೆ ಅಂದರೆ ಶನಿವಾರ ವಾರದ ಪಂಚಾಯಿತಿ ಆರಂಭಿಸಿದ್ದ ಸುದೀಪ್, ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿದ್ದವರಲ್ಲಿ ಒಬ್ಬರನ್ನು ಹೊರಗೆ ಕರೆದರು. ಅದುವೇ ಕಿರಣ್ ಯೋಗೇಶ್ವರ್. ರಾಜಸ್ಥಾನದ ಈ ಚೆಲುವೆ ಕೇವಲ ಒಂದೇ ವಾರದಲ್ಲಿ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದರು.
ಅದಾದ ಬಳಿಕ ಇಂದು (ಭಾನುವಾರ) ಸಹ ಕಿಚ್ಚನ ವಾರದ ಪಂಚಾಯಿತಿ ಮುಂದುವರೆಯಿತು. ಆದರೆ ಇಂದು ಸುದೀಪ್ ಅಂಥಹಾ ಸುದೀಪ್‌ಗೆ ಸಿಟ್ಟುಬಂದು ತುಸು ಬೇಸರದಿಂದಲೇ ಮಾತನಾಡಬೇಕಾಯಿತು ಅದಕ್ಕೆ ಕಾರಣವಾಗಿದ್ದು ಸೋನು ಗೌಡ.
ಸುದೀಪ್ ಅವರು ಎಲ್ಲರನ್ನೂ ನಗಿಸುತ್ತಾ ತಮಾಷೆಯಾಗಿ ಇಂದಿನ ಪಂಚಾಯಿತಿ ಆರಂಭಿಸಿದರು. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು, ಮನೆಯ ಸದಸ್ಯರು ಒಬ್ಬರ ಮೇಲೊಬ್ಬರು ತಮಾಷೆಯಾಗಿಯೇ ಅವರು ಹಾಗೆ ಮಾಡುತ್ತಾರೆ ಇವರು ಹೀಗೆ ಮಾಡುತ್ತಾರೆಂದು ಹೇಳುತ್ತಿದ್ದರು.
ಇದರ ನಡುವೆ ಸುದೀಪ್ ಅವರು ಎಸ್ ಆರ್ ನೋ ಆಟ ಶುರು ಮಾಡಿಸಿದರು. ಆಗ ಆರ್ಯವರ್ಧನ್ ಗುರೂಜಿ ಮಾತನಾಡಬೇಕಾದರೆ ಎಲ್ಲೋ ಮಾತು ಶುರು ಮಾಡಿ ಇನ್ನೆಲ್ಲೊ ತೆಗೆದುಕೊಂಡು ಹೋಗಿಬಿಡುತ್ತಾರೆ ಎಂಬ ಟಾಪಿಕ್ ಬಂತು. ಮುಂದೆ ಸೋನು ಗೌಡ ಕುರಿತೂ ಅದೇ ಪ್ರಶ್ನೆ ಕೇಳಿದಾದ ರಾಕೇಶ್ ಒಬ್ಬರನ್ನು ಹೊರತುಪಡಿಸಿ ಇನ್ನೆಲ್ಲರೂ ಹೌದೆಂದೇ ಉತ್ತರಿಸಿದರು.
ಸಾನಿಯಾ ಮಾತನಾಡುತ್ತಾ, ಆರ್ಯವರ್ಧನ್‌ಗೆ ಅಸಿಸ್ಟೆಂಟ್ ಅನ್ನಾಗಿ ಸೋನು ಅನ್ನು ಮಾಡಿಬಿಡಬಹುದು ಎಂದರು. ಆಗಲೇ ಸಿಟ್ಟಾದ ಸೋನು ಗೌಡ, ನನಗೆ ಇಷ್ಟ ಆಗಲ್ಲ ಹಾಗೆ ಮಾತನಾಡಬೇಡ ಎಂದರು. ಅದಕ್ಕೆ ಸಾನಿಯಾ ಸಾರಿ ಕೇಳಿ, ಸೋನು ಗೌಡ, ಕೆಲವರಿಗೆ ಕೊಡಬೇಕಾದ ಗೌರವ ಕೊಡುವುದನ್ನು ಮರೆಯುತ್ತಾರೆ ಎಂದರು. ನಂತರ ರೂಪೇಶ್ ಸಹ ಅದನ್ನೇ ಹೇಳಿದರು. ನಂತರ ಜಸ್ವಂತ್ ಸಹ ಸೋನು ಗೌಡ ಮಾತನಾಡಬೇಕಾದರೆ ಹಾದಿ ತಪ್ಪುತ್ತಾರೆ ಎಂದರು.
ಆಗ ಒಮ್ಮೆಲೆ ಸಿಟ್ಟಿಗೆದ್ದ ಸೋನು ಗೌಡ, ನಾನು ನಿಮ್ಮೊಂದಿಗೆ ಮಾತನ್ನೇ ಆಡಿಲ್ಲ ಹಾಗಿದ್ದಾಗ ಅದ್ಹೇಗೆ ನನ್ನ ಬಗ್ಗೆ ನೀನು ಹೀಗೆ ಹೇಳಿದೆ ಎಂದು ಒಮ್ಮೆಲೆ ಸಿಟ್ಟಿನಿಂದ ಮಾತನಾಡಿದರು.

ಇದರಿಂದ ಬೇಸರಗೊಂಡ ಸುದೀಪ್, ನೀವು, ಆರ್ಯವರ್ಧನ್ ಅವರಿಂದ ಕ್ರೀಡಾ ಸ್ಪೂರ್ತಿ ಕಲಿಯಬೇಕು. ಅವರನ್ನು ಎಲ್ಲರೂ ಕಾಲೆಳೆಯುತ್ತಿದ್ದಾರೆ ಆದರೆ ಅವರು ತಮಾಷೆಯಾಗಿಯೇ ತೆಗೆದುಕೊಂಡರು. ನೀವು ಬೇರೊಬ್ಬರ ಬಗ್ಗೆ ಮಾತನಾಡಿದಾಗ ಸುಮ್ಮನಿರಬೇಕು, ನಿಮ್ಮ ಬಗ್ಗೆ ಮಾತನಾಡಿದಾಗ ಎಲ್ಲರೂ ಈಡಿಯಟ್ಸ್‌ಗಳಾಗಿಬಿಡುತ್ತಾರಾ ಎಂದು ಸುದೀಪ್ ಪ್ರಶ್ನೆ ಮಾಡಿದರು.
ನೀವು ಇನ್ನು ಮುಂದೆ ತಮಾಷೆ ಮಾಡಬಾರದು, ನೀವು ಇನ್ನೊಬ್ಬರ ಬಗ್ಗೆ ವ್ಯಂಗ್ಯವಾಗಿ ಮಾತನಾಡಬಾರದು ಆಗುತ್ತ ನಿಮ್ಮ ಕೈಯಲ್ಲಿ. ನೀವು ಹೀಗೆ ಬೇರೆಯವರು ಮಾತನಾಡಿದ್ದಕ್ಕೆ ಸಿಟ್ಟು ಮಾಡಿಕೊಳ್ಳುತ್ತೀರ ಎನ್ನುವುದಾದರೆ ಈ ಶೋ ಇಲ್ಲಿಗೇ ಮುಗಿದು ಬಿಡುತ್ತದೆ ಎಂದು ಸಿಟ್ಟಿನಿಂದಲೇ ಹೇಳಿದ ಸುದೀಪ್, 'ಎಸ್ ಆರ್ ನೋ' ಆಟವನ್ನು ಅಲ್ಲಿಗೆ ಬಂದ್ ಮಾಡಿಬಿಟ್ಟರು. ಕೊನೆಗೆ ಸೋನು ಗೌಡ ಸುದೀಪ್ ಅವರ ಕ್ಷಮೆ ಕೇಳಿದರಾದರೂ. ಅದರ ಅಗತ್ಯ ಇಲ್ಲ, ನಿಮ್ಮನ್ನು ಕ್ಷಮಿಸಿದ್ದಾಗಿದೆ ಎಂದರು.
ಆದರೆ ಪಂಚಾಯಿತಿ ಮುಗಿದ ಮೇಲೂ ಸೋನು ಗೌಡ ಬಹಳ ಸಿಟ್ಟಿನಲ್ಲೇ ಇದ್ದರು. ನಾನು ಎಲ್ಲರಿಗೂ ಪಾಠ ಕಲಿಸುತ್ತೇನೆ ಎಂದು ಅಬ್ಬರಿಸುತ್ತಿದ್ದರು.


Click it and Unblock the Notifications











