ಸಿದ್ಧಾರ್ಥ್‌ ಶುಕ್ಲಾಗೆ ಬಿಗ್‌ಬಾಸ್ ಒಟಿಟಿಯಿಂದ ಶ್ರದ್ಧಾಂಜಲಿ: ಸ್ಪರ್ಧಿಗಳಿಗೆ ಮಾಹಿತಿಯೇ ಇಲ್ಲ

By ಫಿಲ್ಮಿಬೀಟ್ ಡೆಸ್ಕ್

ನಟ, ಬಿಗ್‌ಬಾಸ್ ಮಾಜಿ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಕೆಲವು ದಿನಗಳ ಹಿಂದಷ್ಟೆ ನಿಧನ ಹೊಂದಿದ್ದಾರೆ. ಬಾಲಿವುಡ್ ಹಾಗೂ ಹಿಂದಿ ಟಿವಿ ಲೋಕ ಸಿದ್ಧಾರ್ಥ್ ಶುಕ್ಲಾ ಸಾವಿಗೆ ಕಂಬನಿ ಮಿಡಿದಿದೆ.

ಬಿಗ್‌ಬಾಸ್ ವಿಜೇತರೂ ಆಗಿದ್ದ ಸಿದ್ಧಾರ್ಥ್ ಶುಕ್ಲಾಗೆ ಇದೀಗ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಒಟಿಟಿ ಕಡೆಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಬಿಗ್‌ಬಾಸ್‌ ಒಟಿಟಿ ನಿರೂಪಕ ಕರಣ್ ಜೋಹರ್ ಕಣ್ಣಹನಿ ತುಂಬಿಕೊಂಡು ಸಿದ್ಧಾರ್ಥ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

''ಸಿದ್ಧಾರ್ಥ್ ಶುಕ್ಲ ನಮ್ಮಗಳ ಜೀವನದ ಒಂದು ಭಾಗವೇ ಆಗಿಬಿಟ್ಟಿದ್ದರು. ಬಿಗ್‌ಬಾಸ್‌ನ ಈವರೆಗಿನ ಸ್ಪರ್ಧಿಗಳಲ್ಲಿ ಅತ್ಯುತ್ತಮ ಸ್ಪರ್ಧಿ ಅವರು. ಭಾರಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದ ಸಿದ್ಧಾರ್ಥ್, ತಮ್ಮ ಅಭಿಮಾನಿಗಳನ್ನು, ಬಾಲಿವುಡ್ ಉದ್ಯಮವನ್ನು ಶೋಕದಲ್ಲಿ ಬಿಟ್ಟು ಹೋಗಿದ್ದಾರೆ'' ಎಂದು ಗದ್ಗದಿತರಾಗಿ ನುಡಿದರು ಕರಣ್ ಜೋಹರ್.

Bigg Boss OTT: Karan Johar Paid Emotional Tribute To Sidharth Shukla

''ಸಿದ್ಧಾರ್ಥ್ ನನಗೆ ಮಾತ್ರವಲ್ಲ ಉದ್ಯಮದ ಹಲವರಿಗೆ ಆತ್ಮೀಯ ಗೆಳೆಯನಾಗಿದ್ದ. ಬಾಲಿವುಡ್‌ನ ಮಂದಿಗೆ, ಸಿದ್ಧಾರ್ಥ್ ಇಲ್ಲ ಎನ್ನುವುದನ್ನು ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ. ನನಗೆ ಮಾತುಗಳು ಹೊರಡುತ್ತಿಲ್ಲ, ಉಸಿರಾಡಲು ಸಹ ಕಷ್ಟವಾಗುತ್ತಿದೆ. ಸಿದ್‌ ಒಬ್ಬ ಒಳ್ಳೆಯ ಮಗ, ಒಳ್ಳೆಯ ಸ್ನೇಹಿತ ಮತ್ತು ಅದ್ಭುತ ವ್ಯಕ್ತಿತ್ವವುಳ್ಳವನಾಗಿದ್ದ. ಆತನ ಧನಾತ್ಮಕ ಚಿಂತನೆಗಳು ಸಾಕಷ್ಟು ಮಂದಿ ಗೆಳೆಯರನ್ನು ಆತನಿಗೆ ಗಳಿಸಿ ಕೊಟ್ಟಿದ್ದವು. ಆತನ ನಿಷ್ಕಲ್ಮಶ ನಗು ಕೋಟ್ಯಂತರ ಜನರನ್ನು ಸೆಳೆದಿತ್ತು, ಆ ನಗುವಿನಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಿದ್ಧಾರ್ಥ್ ಸಂಪಾದಿಸಿದ್ದರು. ನಾವೆಲ್ಲರೂ ಸಿದ್ಧಾರ್ಥ್‌ ಶುಕ್ಲಾ ಅನ್ನು ಮಿಸ್ ಮಾಡಿಕೊಳ್ಳುತ್ತೇವೆ. ಈ ಶೋ ಅನ್ನು (ಬಿಗ್‌ಬಾಸ್ ಒಟಿಟಿ)ಯನ್ನು ಮುಂದುವರೆಸಿಕೊಂಡು ಹೋಗಲು ನಮಗೆ ಬಹಳ ಶಕ್ತಿ ಬೇಕು. ಸಿದ್ಧಾರ್ಥ್‌ ಇದ್ದಿದ್ದರೆ ಆತನೂ ಇದನ್ನೇ ಹೇಳುತ್ತಿದ್ದ 'ಶೋ ಮಸ್ಟ್ ಗೋ ಆನ್'' ಎಂದಿದ್ದಾರೆ ಕರಣ್ ಜೋಹರ್.

ಸಿದ್ಧಾರ್ಥ್‌ಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಕರಣ್ ಜೋಹರ್, ಒಳಗಿನ ಸ್ಪರ್ಧಿಗಳಿಗೆ ಈ ಕಹಿ ಸುದ್ದಿ ತಿಳಿಸಲಿಲ್ಲ. ಸಿದ್ಧಾರ್ಥ್‌ ಶುಕ್ಲ ಗೆಳೆಯರು ಕೆಲವರು ಬಿಗ್‌ಬಾಸ್ ಒಟಿಟಿ ಮನೆಯ ಒಳಗೆ ಇದ್ದಾರೆ ಆದರೆ ಅವರಿಗಾರಿಗೂ ಸಿದ್ಧಾರ್ಥ್ ಶುಕ್ಲಾ ನಿಧನ ಹೊಂದಿರುವ ವಿಷಯ ಗೊತ್ತೇ ಇಲ್ಲ.

ಮತ್ತೊಂದು ರಿಯಾಲಿಟಿ ಶೋ 'ಡಾನ್ಸ್ ದಿವಾನೆ 3' ಸಿದ್ಧಾರ್ಥ್ ಶುಕ್ಲಾಗೆ ಶ್ರದ್ಧಾಂಜಲಿ ಸಲ್ಲಿಸಿತು. ಸ್ಪರ್ಧಿಗಳು, ಜಡ್ಜ್‌ಗಳು ಸಿದ್ಧಾರ್ಥ್ ಫೊಟೊ ಮುಂದೆ ಮೇಣದ ಬತ್ತಿ ಹತ್ತಿ ಕಣ್ಣೀರು ಸುರಿಸಿದರು. ಕೆಲವು ವಾರಗಳ ಹಿಂದಷ್ಟೆ ಇದೇ ಶೋಗೆ ಸಿದ್ಧಾರ್ಥ್ ಶುಕ್ಲಾ ಅತಿಥಿಯಾಗಿ ಆಗಮಿಸಿದ್ದರು. ಅವರು ನಟಿಸಿದ್ದ 'ಬ್ರೋಕನ್ ಬಟ್ ಬ್ಯೂಟಿಫುಲ್ 3' ವೆಬ್ ಸರಣಿಯ ಪ್ರಚಾರಕ್ಕಾಗಿ ಶೋಗೆ ಆಗಮಿಸಿದ್ದರು ಸಿದ್ಧಾರ್ಥ್ ಶುಕ್ಲಾ.

ನಟ, ಬಿಗ್‌ಬಾಸ್ ಮಾಜಿ ವಿಜೇತ ಆಗಿದ್ದ ಸಿದ್ಧಾರ್ಥ್ ಶುಕ್ಲಾ, ಸೆಪ್ಟೆಂಬರ್ 2ರಂದು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ ಕೇವಲ 40 ವರ್ಷ ವಯಸ್ಸಾಗಿತ್ತು. ಸಿದ್ಧಾರ್ಥ್ ಶುಕ್ಲಾ ಸಾವಿಗೆ ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್‌ನ ಗಣ್ಯರು ಕಂಬನಿ ಮಿಡಿದರು.

ಕರಣ್ ಜೋಹರ್ ನಡೆಸಿಕೊಡುತ್ತಿರುವ ಬಿಗ್‌ಬಾಸ್ ಒಟಿಟಿ ಆಗಸ್ಟ್ 08ಕ್ಕೆ ಪ್ರಾರಂಭವಾಗಿದ್ದು, ವೀಕ್ಷಕರ ಗಮನ ಸೆಳೆದಿದೆ. ಒಟಿಟಿಯಲ್ಲಿ ಮಾತ್ರವೇ ಪ್ರಸಾರವಾಗುವ ಈ ಶೋ ಈವರೆಗೆ 29 ದಿನ ಪೂರೈಸಿದೆ. 15 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು ಅದರಲ್ಲಿ ಈವರೆಗೆ ಐದು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರೆ ಒಬ್ಬ ಸ್ಪರ್ಧಿ ಇತರ ಸ್ಪರ್ಧಿಯೊಂದಿಗೆ ಕೈ-ಕೂ ಮಿಲಾಯಿಸಿ ಮನೆಯಿಂದ ಹೊರಗೆ ದಬ್ಬಿಸಿಕೊಂಡಿದ್ದಾನೆ. ಬಿಗ್‌ಬಾಸ್ ಒಟಿಟಿಯಲ್ಲಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಪಾಲ್ಗೊಂಡಿದ್ದು ಆಕೆಯೇ ಗೆಲ್ಲುವ ಫೇವರೇಟ್ ಆಗಿದ್ದಾರೆ.

More from Filmibeat

English summary
Bigg Boss OTT host Karan Johar paid emotion tribute to Sidharth Shukla. But he did not reveal to contestants that Sidharth Shukla is no more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X