Bigg Boss OTT 3 ; ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಡುವವರು ಯಾರು ? ಇಲ್ಲಿದೆ ಸಂಭಾವ್ಯ ಪಟ್ಟಿ..!
ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಬಿಗ್ ಬಾಸ್ ಕಾರ್ಯಕ್ರಮವನ್ನ ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ. ಇಂಥಾ ಕಾರ್ಯಕ್ರಮ ಹಿಂದಿಯಲ್ಲಿ ಈಗ ಇನ್ನೊಮ್ಮೆ ಪ್ರಸಾರವಾಗಲಿದೆ. ಈ ಬಾರಿ ಯಾರೆಲ್ಲ ಮನೆಯೊಳಗೆ ಕಾಲಿಡಲಿದ್ದಾರೆ ಅನ್ನುವ ಚರ್ಚೆ ಪಕ್ಕದ ಮುಂಬೈನಲ್ಲಿ ಶುರುವಾಗಿದೆ.
ಹೌದು, ಓಟಿಟಿಯಲ್ಲಿ ಹಿಂದಿ ಬಿಗ್ ಬಾಸ್‌ನ ಮೂರನೇ ಸೀಸನ್ ಶುರುವಾಗಲಿದೆ. ಸಲ್ಮಾನ್ ಖಾನ್ ಸಾರಥ್ಯದಲ್ಲಿ ಬಾರದೇ ಅನಿಲ್ ಕಪೂರ್ ಅವರ ಮುಂದಾಳತ್ವದಲ್ಲಿ ಶುರುವಾಗಲಿರುವ ಈ ಸಲದ ಕಾರ್ಯಕ್ರಮದಲ್ಲಿ ಕೂಡ ಬಿಗ್ ಬಾಸ್‌ನ ವಾಡಿಕೆಯಂತೆ ಚಿತ್ರ ವಿಚಿತ್ರ ಆಸಾಮಿಗಳು ಪ್ರತ್ಯಕ್ಷಗೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಸಂಭಾವ್ಯರ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆ ಪ್ರಕಾರ ನೋಡುವುದಾದರೆ ವಡಾ ಪಾವ್ ಮಾರಿಯೇ ಜಗದ್ವಿಖ್ಯಾತಿಯನ್ನ ಗಳಿಸಿ, ಆಲ್ಬಂ ಹಾಡೊಂದಕ್ಕೆ ಹೆಜ್ಜೆಯನ್ನ ಹಾಕುವುದಲ್ಲದೇ ದುಬಾರಿ ಕಾರನ್ನೂ ಖರೀದಿ ಮಾಡಿರುವ ವೈರಲ್ ವಡಾ ಪಾವ್ ಹುಡುಗಿ ಎಂದೇ ಕರೆಯಲ್ಪಡುವ ಚಂದ್ರೀಕಾ ದೀಕ್ಷಿತ್ ಈ ಬಾರಿಯ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಯುಟ್ಯೂಬರ್ ದಂಪತಿ ಜತಿನಗ ತಲ್ವಾರ್- ನಿಧಿ ತಲ್ವಾರ್.. ಪಂಜಾಬ್‌ನ ಸಿಂಗರ್ ನವಜೀತ್ ಸಿಂಗ್.. ಮತ್ತೊಬ್ಬ ಗಾಯಕ ಅದ್ನಾನ್ ಶೇಖ್.. ಹೆಸರು ಕೂಡ ಈ ಕೇಳಿ ಬರುತ್ತಿದೆ. ನಟ ದಲ್ಜೀತ್ ಕೌರ್ ಕೂಡ ದೊಡ್ಡಮನೆಗೆ ಬರುತ್ತಾರೆ ಅನ್ನುವ ಸುದ್ದಿ ಹಬ್ಬಿದೆ.
ಇನ್ನೂ ಉದ್ಯಮಿಯಾಗಿ ಗುರುತಿಸಿಕೊಂಡ ಅನುಷ್ಕಾ ಪುರೋಹಿತ್.. ಮತ್ತೊಬ್ಬ ಉದ್ಯಮಿ ವಿಕ್ಕಿ ಜೈನ್..ನಟಿ ಶಫಕ್ ನಾಜ್.. ಯೂಟ್ಯೂಬ್‌ನಲ್ಲಿ ವ್ಲಾಗರ್ ಆಗಿ ಖ್ಯಾತಿಯನ್ನ ಗಳಿಸಿರುವ ಖುಷಿ ಪಂಜಾಬನ್ ಹಾಗೂ ವಿವೇಕ್ ಚೌದರಿ ಕೂಡ ಈ ಬಾರಿ ಹಿಂದಿ ಬಿಗ್ ಬಾಸ್ ಓಟಿಟಿ ಸೀಸನ್ 03ರಲ್ಲಿ ಸ್ಫರ್ಧಿಗಳಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇವರೆಲ್ಲರ ಜೊತೆ RCR ಎಂದೇ ಖ್ಯಾತಿಯನ್ನ ಗಳಿಸಿರುವ ರ್ಯಾಪರ್ ರೋಹಿ ಕುಮಾರ್ ಚೌಧರಿ.. ಟೆಂಪ್ಟೇಶನ್ ಐಲ್ಯಾಂಡ್‌ನಲ್ಲಿ ಕಾಣಿಸಿಕೊಂಡಿದ್ದ ಚೇಷ್ಠಾ ಭಗತ್ ಮತ್ತು ನಿಖಿಲ್ ಮೆಹ್ತಾ ಅವರಿಗೂ ಕೂಡ ಬಿಗ್ ಬಾಸ್ ಕಡೆಯಿಂದ ಬುಲಾವ್ ಹೋಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಅಂದ್ಹಾಗೇ ಇದೇ ಜೂನ್‌ನಲ್ಲಿ ಹೊಸ ನಿರೂಪಕನ ಜೊತೆಗಿನ ಹೊಸ ಆಟ ಬಿಗ್ ಬಾಸ್ ಓಟಿಟಿ ಸೀಸನ್ 3 ಆರಂಭವಾಗಲಿದೆ. ಹರಿಬಿಡಲಾದ ಪ್ರೋಮೋ ಈಗಾಗಲೇ ಬಿಗ್ ಬಾಸ್‌ನ ತಪ್ಪದೇ ನೋಡುವ ಪ್ರೇಕ್ಷಕರ ಚಿತ್ತವನ್ನ ಕದಿಯುವಲ್ಲಿ ಯಶಸ್ವಿಯೂ ಆಗಿದೆ. ಉಳಿದಂತೆ ಮೊದಲ ಸೀಸನ್‌ನಲ್ಲಿ ದಿವ್ಯಾ ಅಗರ್‌ವಾಲ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದರೆ, ಎರಡನೇ ಸೀಸನ್‌ನಲ್ಲಿ ಟ್ರೋಫಿ ಯುಟ್ಯೂಬರ್ ಎಲ್ವೀಶ್ ಯಾದವ್ ಪಾಲಾಗಿತ್ತು. ಈ ಬಾರಿ ಬಿಗ್ ಬಾಸ್ ಮೂಲಕ ಹೃದಯ ಗೆಲ್ಲುವುದು ಯಾರು ಅನ್ನುವ ಪ್ರಶ್ನೆಗೆ ಉತ್ತರ ಸದ್ಯದಲ್ಲಿ ಸಿಗಲಿದೆ. ಭಾಗಿಯಾಗಲಿರುವ ಸ್ಫರ್ಧಿಗಳು ಯಾರು ಅನ್ನುವ ಕುತೂಹಲಕ್ಕೂ ಶೀಘ್ರದಲ್ಲಿ ತೆರೆ ಬೀಳಲಿದೆ.


Click it and Unblock the Notifications











