ತನ್ನ ಮದುವೆ ಯಾವಾಗ ಎಂಬುದರ ಕುರಿತು ಮಾತನಾಡಿದ ಸೋನು ಗೌಡ; ಹುಡುಗ ಹೀಗಿದ್ರೆ ಸಾಕಂತೆ!

ಮೊದಲಿಗೆ ಟಿಕ್ ಟಾಕ್ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತುಸು ಐಡೆಂಟಿಟಿ ಸಂಪಾದಿಸಿದ್ದ ಸೋನು ಶ್ರೀನಿವಾಸ್ ಗೌಡ ನಂತರದ ದಿನಗಳಲ್ಲಿ ಸಾಲು ಸಾಲು ಟ್ರೋಲ್‌ಗಳಿಗೆ ಒಳಗಾಗುವುದರ ಮೂಲಕ ವೈರಲ್ ಆದರು. ಹೌದು, ಸೋನು ಶ್ರೀನಿವಾಸ್ ಗೌಡ ಟ್ರೋಲ್ ಪೇಜ್‌ಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಅನುಯಾಯಿಗಳು ಹಾಗೂ ಫೇಮ್ ಪಡೆದುಕೊಂಡದ್ದು ಎಂದರೆ ತಪ್ಪಾಗಲಾರದು.

ಹೀಗೆ ಸಾಮಾಜಿಕ ಜಾಲತಾಣದಲ್ಲಿ ಟಿಕ್ ಟಾಕ್ ಹಾಗೂ ಇನ್ಸ್ಟಗ್ರಾಮ್ ರೀಲ್ಸ್ ವಿಡಿಯೋಗಳ ಮೂಲಕ ತುಸು ಸದ್ದು ಮಾಡುತ್ತಿದ್ದ ಸೋನು ಶ್ರೀನಿವಾಸ್ ಗೌಡ ತನ್ನ ವೈಯಕ್ತಿಕ ವಿಡಿಯೋವೊಂದರ ಮೂಲಕ ಸಾಕಷ್ಟು ವಿವಾದಕ್ಕೂ ಒಳಗಾಗಿದ್ದರು. ಹೀಗೆ ಮತ್ತೊಮ್ಮೆ ಟ್ರೋಲ್ ಆದ ಸೋನು ಶ್ರೀನಿವಾಸ್ ಗೌಡ ಈ ಬಾರಿಯ ಬಿಗ್ ಬಾಸ್ ಓಟಿಟಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿಯೂ ಸಹ ಭಾಗವಹಿಸಿ ಮತ್ತಷ್ಟು ಚರ್ಚೆಗೆ ಒಳಗಾಗಿದ್ದರು.

42 ದಿನಗಳ ಕಾಲ ನಡೆದ ಬಿಗ್ ಬಾಸ್ ಓಟಿಟಿ ರಿಯಾಲಿಟಿ ಶೋನಲ್ಲಿ ಕೊನೆಯ ದಿನದವರೆಗೂ ಮನೆಯಲ್ಲಿದ್ದ ಸೋನು ಶ್ರೀನಿವಾಸ್ ಗೌಡ ಟಿವಿ ಬಿಗ್‌ ಬಾಸ್ ಶೋಗೆ ಆಯ್ಕೆಯಾಗುವಲ್ಲಿ ಅಂತಿಮ ಹಂತದಲ್ಲಿ ಎಡವಿದರು. ಹೀಗೆ ಬಿಗ್ ಬಾಸ್ ಒಂಬತ್ತನೇ ಆವೃತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾದ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯಿಂದ ಆಚೆ ಬಿದ್ದ ನಂತರ ಫಿಲ್ಮಿಬೀಟ್ ಕನ್ನಡ ಜತ ಮಾತನಾಡಿದ್ದು, ತಮ್ಮ ಮುಂದಿನ ಯೋಜನೆಗಳೇನು ಎಂಬುದರ ಕುರಿತು ಹೇಳಿಕೊಂಡಿದ್ದಾರೆ.

ಮದುವೆ ಬಗ್ಗೆ ಮಾತನಾಡಿದ ಸೋನು

ಮದುವೆ ಬಗ್ಗೆ ಮಾತನಾಡಿದ ಸೋನು

ಮದುವೆ ಯಾವಾಗ ಎಂದು ಪ್ರಶ್ನೆ ಎದುರಾದಾಗ ಉತ್ತರಿಸಿದ ಸೋನು ಶ್ರೀನಿವಾಸ್ ಗೌಡ 'ನನ್ನ ಲೈಫ್‌ನಲ್ಲಿ ನಾನೇನ್ ಅನ್ಕೊಂಡಿದಿನೋ ಅದೆಲ್ಲಾ ಈಡೇರಿದ್ರೆ ಮಾತ್ರ ಮದುವೆ ಎಂಬ ಪಾರ್ಟಿಗೆ ಕಾಲಿಡ್ತೇನೆ. ಇಲ್ಲಾಂದ್ರೆ ಇಲ್ಲ, ಅದೆಷ್ಟೇ ವರ್ಷ ಆದ್ರೂ ಅಷ್ಟೇ' ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಸೋನು ಶ್ರೀನಿವಾಸ್ ಗೌಡ ಮದುವೆ ಗಿದುವೆ ಸದ್ಯಕ್ಕಿಲ್ಲ ಎಂದಿದ್ದಾರೆ.

ಹುಡುಗ ಹೇಗಿದ್ರೂ ಪರವಾಗಿಲ್ಲ, ಲಾಯಲ್ ಆಗಿರ್ಬೇಕು

ಹುಡುಗ ಹೇಗಿದ್ರೂ ಪರವಾಗಿಲ್ಲ, ಲಾಯಲ್ ಆಗಿರ್ಬೇಕು

ಇನ್ನೂ ಮುಂದುವರೆದು ತಾನು ಮದುವೆಯಾಗಲಿರುವ ಹುಡುಗ ಹೇಗಿರಬೇಕು ಎಂಬ ಪ್ರಶ್ನೆಗೂ ಉತ್ತರಿಸಿದ ಸೋನು ಶ್ರೀನಿವಾಸ್ ಗೌಡ 'ನಮ್ಮ ಮನೆಯಲ್ಲಿ ಎಷ್ಟು ಪ್ರೀತಿಯಿಂದ ನೋಡಿಕೊಂಡಿದ್ದಾರೋ ಅದಕ್ಕಿಂತ ಹೆಚ್ಚು ಪ್ರೀತಿಯಿಂದ ನೋಡ್ಕೋಬೇಕು, ಹಳೆಯದ್ದನ್ನೆಲ್ಲಾ ತಲೆಯಲ್ಲಿಟ್ಟುಕೊಳ್ಳಬಾರದು, ಒಂದು ಟ್ರಸ್ಟ್ ಹಾಗೂ ಬಾಂಡಿಂಗ್ ಇರೋ ಹುಡುಗ, ನೋಡೋಕೆ ಬೆಳ್ಳಗೆ ಇರಬೇಕು ಅಂತೇನಿಲ್ಲ' ಎಂದು ಹೇಳಿಕೊಂಡಿದ್ದಾರೆ.

ನಟಿಯಾಗುವ ಬಗ್ಗೆ ಕೂಡ ಮಾತು

ನಟಿಯಾಗುವ ಬಗ್ಗೆ ಕೂಡ ಮಾತು

ಇನ್ನು ಚಿತ್ರರಂಗ ಪ್ರವೇಶಿಸುವ ಕುರಿತೂ ಸಹ ಮಾತನಾಡಿರುವ ಸೋನು ಶ್ರೀನಿವಾಸ್ ಗೌಡ ಯಾವ ನಟರ ಜೊತೆ ಸಿನಿಮಾ ಮಾಡುವ ಆಸೆ ಇದೆ ಎಂಬುದನ್ನು ತಿಳಿಸಿದ್ದಾರೆ. ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಜತೆ ನಟಿಸುವ ಆಸೆ ಎಂದು ಸೋನು ತಿಳಿಸಿದ್ದಾರೆ. ಇನ್ನು ತಾನು ದರ್ಶನ್ ಅವರ ಅಪ್ಪಟ ಅಭಿಮಾನಿ ಎಂಬುದನ್ನು ಸೋನು ತಿಳಿಸಿದ್ದಾರೆ.

More from Filmibeat

English summary
Bigg boss kannada ott contestant Sonu Srinivas Gowda opens up about her marriage. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X