For Quick Alerts
  ALLOW NOTIFICATIONS  
  For Daily Alerts

  ರೊಮ್ಯಾಂಟಿಕ್ ಫೋಟೊ ಶೇರ್ ಮಾಡಿ, ಬಿಗ್ ಬಾಸ್ ಸ್ಪರ್ಧಿಗೆ ವೋಟ್ ಮಾಡಿ ಎಂದು ಆರ್‌ಜಿವಿ!

  |

  ಬಿಗ್ ಬಾಸ್ ಕನ್ನಡ ಓಟಿಟಿ ಸಕ್ಸಸ್ ಆಗುತ್ತಿದ್ದಂತೆ ತೆಲುಗಿನಲ್ಲೂ ಆರಂಭ ಆಗಿದೆ. ತೆಲುಗಿನಲ್ಲೂ ಮೂರು ವಾರಗಳಿಂದ ಬಿಗ್ ಬಾಸ್ ನಡೆಯುತ್ತಿದೆ. ಈ ಬಾರಿ ಬಿಗ್ ಬಾಸ್ ತೆಲುಗು ಓಟಿಟಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ ಎನ್ನಲಾಗಿದೆ. ಅದಕ್ಕೆ ಕಾರಣ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ.

  ಬಿಗ್ ಬಾಸ್ ತೆಲುಗು 6 ರಿಯಾಲಿಟಿ ಶೋ ಮೂರನೇ ವಾರಕ್ಕೆ ಕಾಲಿಟ್ಟಿದೆ. ಸದ್ಯ ಈ ವಾರ ಎಲಿಮಿನೇಷನ್ ಜೋರಾಗಿದೆ ಎನ್ನಲಾಗಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ವಿಚಾರಕ್ಕೆ ಭಾರಿ ವಿವಾದ ಉಂಟಾಗಿತ್ತು.

  ತೆಲುಗು ಚಿತ್ರರಂಗದ ವಿರುದ್ಧ ಹರಿಹಾಯ್ದ ರಾಮ್ ಗೋಪಾಲ್ ವರ್ಮಾತೆಲುಗು ಚಿತ್ರರಂಗದ ವಿರುದ್ಧ ಹರಿಹಾಯ್ದ ರಾಮ್ ಗೋಪಾಲ್ ವರ್ಮಾ

  ಈ ವಾರ ಸುಮಾರು ಒಂಬತ್ತು ಮಂದಿ ಎಲಿಮಿನೇಷನ್ ಪ್ರಕ್ರಿಯೆಗೆ ಆಯ್ಕೆಯಾಗಿದ್ದಾರೆ. ವಾಸಂತಿ, ಬಾಲಾದಿತ್ಯ, ಚಾಲಾಕಿ ಚಂತಿ, ಆರೋಹಿ ರಾವ್, ನೇಹಾ ಚೌಧರಿ, ಇನಾಯಾ ಸುಲ್ತಾನಾ, ಶ್ರೀಹಾನ್, ರೇವಂತ್ ಮತ್ತು ಗೀತು ರಾಯಲ್ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸಾಧ್ಯತೆಯಿದೆ.

  ಮೂರನೇ ವಾರ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ಆರಂಭ ಆಗುತ್ತಿದ್ದಂತೆ ರಾಮ್ ಗೋಪಾಲ್ ವರ್ಮಾ ಅಖಾಡಕ್ಕೆ ಇಳಿದಿದ್ದಾರೆ. ಆರ್‌ಜಿವಿ ತಮ್ಮ ಆಪ್ತ ಸ್ನೇಹಿತೆ ಇನಾಯಾ ಸುಲ್ತಾನಾ ಪರ ಬ್ಯಾಕ್ ಬೀಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಉಳಿಸಲು ವೋಟ್ ಮಾಡುವಂತೆ ಕರೆ ನೀಡಿದ್ದಾರೆ.

  ರಾಮ್ ಗೋಪಾಲ್ ವರ್ಮಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಇನಾಯಾ ಸುಲ್ತಾನ್ ಜೊತೆಗಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಇನಯಾ ಸುಲ್ತಾರಗೆ ಬಿಗ್ ಬಾಸ್ ಮನೆಯಲ್ಲಿ ಉಳಿಸಲು ವೋಟ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

  Bigg Boss Telugu Season 6: Ram Gopal Varma Asked Vote To Save Inaya Sultana

  ಇನಯಾ ಸುಲ್ತಾನಾ ಫೋಟೊ ಕ್ಲಿಕ್ ಮಾಡಿ 10 ಮತಗಳನ್ನು ಹಾಕಿ. ಇಲ್ಲವೇ 7288877614 ಗೆ 10 ಬಾರಿ ಮಿಸ್ಡ್ ಕಾಲ್ ಕೊಡಿ ಎಂದು ಆರ್‌ಜಿವಿ ಟ್ವೀಟ್ ಮಾಡಿದ್ದಾರೆ. ಅಲ್ಲೆ ಬಿಗ್ ಬಾಸ್‌ನ ಹಾಟ್ ಸ್ಟಾರ್ ಲಿಂಕ್‌ನ ಅನ್ನು ಶೇರ್ ಮಾಡಿಕೊಂಡಿದ್ದಾರೆ.

  English summary
  Bigg Boss Telugu Season 6: Ram Gopal Varma Asked Vote To Save Inaya Sultana, Know More.
  Friday, September 23, 2022, 11:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X