ಬಿಗ್ ಬಾಸ್ TRP ಫೈಟ್ ಹೇಗಿದೆ?

ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಅಬ್ಬರವೇ ಹೆಚ್ಚಾಗುತ್ತಿದೆ. ರಿಯಾಲಿಟಿ ಶೋಗಳು ಅಂತ ಬಂದಾಗ ಹೆಚ್ಚು ಜನರನ್ನು ರಂಜಿಸುವ ಕಾರ್ಯಕ್ರಮಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಕೂಡ ಒಂದು. ಬಿಗ್ ಬಾಸ್ ಕಾರ್ಯಕ್ರಮ ಹಿಂದಿಯಲ್ಲಿ ಶುರುವಾದ ಬಳಿಕ, ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿಯೂ ಶುರುವಾಗಿದೆ.

ಎಲ್ಲಾ ಭಾಷೆಗಳಲ್ಲೂ ಕೂಡ ಬಿಗ್ ಬಾಸ್ ಕಾರ್ಯಕ್ರಮ ತನ್ನದೇ ಆದ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದೆ. ಆಯಾ ಭಾಷೆಗಳಲ್ಲಿ ಪ್ರತಿ ಸೀಸನ್‌ಗೂ ಹಲವು ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಒಂದಾದ ಬಳಿಕ ಒಂದು ಸೀಸನ್‌ ಭಿನ್ನವಾಗಿ ಇದ್ದೇ ಇರುತ್ತದೆ. ಹಲವು ಹೊಸ ಹೊಸ ರೂಪು-ರೇಷೆ ಜೊತೆಗೆ ಈ ಕಾರ್ಯಕ್ರಮ ಮೂಡಿ ಬರುತ್ತಲೇ ಇದೆ.

ಬಿಗ್ ಬಾಸ್ ಕಾರ್ಯಕ್ರಮ ಹಲವು ಭಾಷೆಗಳಲ್ಲಿ ಹಲವು ರೀತಿಯಲ್ಲಿ ಪ್ರಸಾರವಾಗುತ್ತದೆ. ಟಿಆರ್‌ಪಿಯಲ್ಲೂ ಕೂಡಾ ಬಿಗ್‌ಬಾಸ್ ಮುಂದೆ ಇರುವ ಕಾರಣಕ್ಕೆ ಈ ಕಾರ್ಯಕ್ರಮವನ್ನು ಸ್ಥಗಿತ ಮಾಡುವ ಯೋಚನೆಯನ್ನು ಮಾಡಲಾಗಿಲ್ಲ. ಹಾಗಿದ್ದರೆ ಯಾವ ಯಾವ ಭಾಷೆಗಳಲ್ಲಿ, ಯಾವ ಸೀಸನ್‌ಗಳ ನಡುವೆ ಬಿಗ್ ಬಾಸ್ ಟಿಆರ್ ಪಿ ಫೈಟ್ ಹೇಗಿದೆ ಎನ್ನುವುದನ್ನು ಮುಂದೆ ಓದಿ...

ಹಿಂದಿಯಲ್ಲಿ ಬಿಗ್ ಬಾಸ್ TRP!

ಹಿಂದಿಯಲ್ಲಿ ಬಿಗ್ ಬಾಸ್ TRP!

ಭಾರತೀಯ ಕಿರುತೆರೆಯಲ್ಲಿ ಮೊದಲ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿದ್ದು ಹಿಂದಿಯಲ್ಲಿ. ಈ ಕಾರ್ಯಕ್ರಮವನ್ನು ಹಿಂದಿಯಲ್ಲಿ ಶುರುಮಾಡಿದ ಬಳಿಕ ಸಾಕಷ್ಟು ಹೆಸರುವಾಸಿ ಆಯ್ತು. ಹಿಂದಿ ಬಿಗ್ ಬಾಸ್ 15 ಸೀಸನ್‌ಗಳನ್ನು ಪೂರ್ಣ ಮಾಡಿದೆ. ಈಗಲೂ ಕೂಡ ಎಲ್ಲಾ ಭಾಷೆಗಳ ಪೈಕಿ ಹಿಂದಿ ಬಿಗ್ ಬಾಸ್ ಟಿಆರ್‌ಪಿ ಮೊದಲ ಸ್ಥಾನದಲ್ಲಿ ಇದೆ. ಹಿಂದಿ ಬಿಗ್ ಬಾಸ್ ಎಲ್ಲಾ ಸೀಸನ್‌ಗಳ ಪೈಕಿ ಸೀಸನ್ 5 ಹೆಚ್ಚು ಟಿಅರ್‌ಪಿ ಪಡೆದಿದೆ.

ಕನ್ನಡದಲ್ಲಿ ಬಿಗ್ ಬಾಸ್ TRP!

ಕನ್ನಡದಲ್ಲಿ ಬಿಗ್ ಬಾಸ್ TRP!

ಇನ್ನು ಕನ್ನಡದಲ್ಲಿ ಕೂಡ ಬಿಗ್ ಬಾಸ್ ಕಾರ್ಯಕ್ರಮ ಚೆನ್ನಾಗಿಯೇ ಮೂಡಿಬರುತ್ತಿದೆ. ಇದೀಗ 8 ಸೀಸನ್‌ಗಳನ್ನು ಮುಗಿದೆ. ಮೊದಲ ಎರಡು ಸೀಸನ್‌ಗಳು ಬಹಳ ಜನಾಕರ್ಷಣೆ ಗಳಿಸಿದ್ದವು. ಸದ್ಯ ಒಟಿಟಿ ಮೊದಲ ಸೀಸನ್ ಬರಲಿದ್ದು. ಟಿವಿಯಲ್ಲಿ 9ನೇ ಸೀಸನ್ ಬರಬೇಕಿದೆ. 8 ಸೀಸನ್‌ಗಳ ಪೈಕಿ, ಬಿಗ್ ಬಾಸ್ ಮೊದಲ ಸೀಸನ್ ಅತಿ ಹೆಚ್ಚಿ trp ಪಡೆದುಕೊಂಡಿದೆ ಎನ್ನಲಾಗಿದೆ. ಮೊದಲಿನಿಂದಲೂ ಈ ಕಾರ್ಯಕ್ರಮವನ್ನು ನಟ ಸುದೀಪ್ ನಡೆಸಿಕೊಡುತ್ತಿದ್ದಾರೆ. ಆ ನಂತರದ ಸೀಸನ್ ಗಳಲ್ಲಿ ಸಾಕಷ್ಟು ಏರಿಳಿತ ಕಂಡಿರುವ ಬಿಗ್ ಬಾಸ್, ಇದೀಗ ತುಸು ಹಿಂದೆ ಉಳಿದಿದೆ. ಹಳೆಯ ಟಿಆರ್ ಪಿ ವೈಭವವನ್ನು ಮರಳಿ ಪಡೆದುಕೊಳ್ಳಲು ಹೆಣಗುತ್ತಿದೆ.

ತಮಿಳಿನಲ್ಲಿ ಬಿಗ್ ಬಾಸ್ TRP

ತಮಿಳಿನಲ್ಲಿ ಬಿಗ್ ಬಾಸ್ TRP

ತಮಿಳಿನಲ್ಲೂ ಕೂಡ ಬಿಗ್ ಬಾಸ್ ಯಶಸ್ಸು ಕಂಡಿದೆ. ಕಮಲ್ ಹಾಸನ್ ಸಾರಾಥ್ಯದಲ್ಲಿ ತಮಿಳು ಬಿಗ್ ಬಾಸ್ ಪ್ರಸಾರವಾಗುತ್ತದೆ. ಒಟ್ಟು ಸೀಸನ್‌ಗಳು ಪ್ರಸಾರವಾಗಿವೆ. ಇದರಲ್ಲಿ 4ನೇ ಸೀಸನ್ ಹೆಚ್ಚು ಟಿಆರ್‌ಪಿ ಕಂಡಿದೆ. ಸೀಸನ್ 4ರಲ್ಲಿ 12 ಟಿವಿರ್ ಗಳಿಸಿಕೊಂಡಿದೆ. ನಂತರ ಬೇರೆ ಯಾವುದೇ ಸೀಸನ್ ಕೂಡ ಅಷ್ಟರ ಮಟ್ಟಿಗೆ ಸದ್ದು ಮಾಡಿಲ್ಲ. ಆರಂಭದಲ್ಲಿ ತುಸು ಮಂಕಾಗಿಯೇ ಇದ್ದ ತಮಿಳು ಸೀಸನ್ ಇತ್ತೀಚೆಗೆ ಕಮಲ್ ಮೋಡಿಯಿಂದ ತುಸು ಸದ್ದು ಮಾಡುತ್ತಿದೆ.

ತೆಲುಗು ಬಿಗ್ ಬಾಸ್ TRP!

ತೆಲುಗು ಬಿಗ್ ಬಾಸ್ TRP!

ತೆಲುಗು ಬಿಗ್ ಬಾಸ್‌ನಲ್ಲಿ 5 ಸೀಸನ್‌ಗಳು ಪೂರ್ಣಗೊಂಡಿವೆ. ಮೊದಲನೇ ಸೀಸನ್ ನಟ ಜೂನಿಯರ್ ಎನ್‌.ಟಿಆರ್ ನಡೆಸಿಕೊಟ್ಟಿದ್ದಾರೆ. ಎರಡನೇ ಸೀಸನ್ ನಾನಿ ನಡೆಸಿಕೊಟ್ಟಿದ್ದಾರೆ. ಇನ್ನು 3ನೇ ಸೀಸನ್‌ನಿಂದ ನಟ ನಾಗಾರ್ಜುನ್ ನಡೆಸಿಕೊಡುತ್ತಿದ್ದಾರೆ. ಈ ಪೈಕಿ 4ನೇ ಸೀಸನ್ ಹೆಚ್ಚು ಟಿವಿಆರ್ ಪಡೆದುಕೊಂಡಿದೆ. ಸೀಸನ್ 4, 18.5 ಟಿವಿಆರ್ ಪಡೆದು ಮೊದಲ ಸ್ಥಾನದಲ್ಲಿದೆ. ನಾನಿ ನಡೆಸಿಕೊಟ್ಟ ಸೀಸನ್ ಹಾಗೂ ನಾಗಾರ್ಜುನ ನಡೆಸಿಕೊಟ್ಟ ಮೂರನೇ ಸೀಸನ್ ಕಳಪೆ ಟಿಆರ್ಪಿ ಪಡೆದುಕೊಂಡಿತ್ತು.

ಮಲಯಾಳಂನಲ್ಲಿ ಬಿಗ್ ಬಾಸ್ TRP!

ಮಲಯಾಳಂನಲ್ಲಿ ಬಿಗ್ ಬಾಸ್ TRP!

ಮಲಯಾಳಂನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ 4 ಸೀಸನ್‌ಗಳು ಆಗಿವೆ. 4 ಸೀಸನ್‌ಗಳು ಕೂಡ ಪ್ರೇಕ್ಷಕರ ಮನಮುಟ್ಟಿವೆ. ಮಲಯಾಳಂನಲ್ಲಿ ನಾಲ್ಕು ಸೀಸನ್‌ಗಳು ಮುಗಿದೆ. 5ನೇ ಸೀಸನ್‌ಗೆ ಪ್ರೇಕ್ಷಕರು ಕಾಯುತ್ತಿದ್ದಾರೆ. ಇನ್ನೂ ಈ ಸೀಸನ್‌ಗಳ ಪೈಕಿ 4ನೇ ಸೀಸನ್‌ನಲ್ಲಿ ಹೆಚ್ಚು ಟಿಆರ್‌ಪಿ ಬಂದಿದೆ. ಮೂರನೇ ಸೀಸನ್ ಚೆನ್ನಾಗಿ ನಡೆಯುತ್ತಿದ್ದ ವೇಳೆ ಕೋವಿಡ್ ಬಂದು ನಿಲ್ಲಿಸಲ್ಪಟ್ಟಿತ್ತು.

More from Filmibeat

English summary
Bigg Boss TRP Fight Between Hindi, Kannada, Tamil, Telugu, Malayalam All Seasons, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X