ಬಾಲಿವುಡ್‌ನಲ್ಲಿ ಈ ವರ್ಷ ಭಾರೀ ಸದ್ದು ಮಾಡಿದ 'ಬ್ರಹ್ಮಾಸ್ತ್ರ' ಓಟಿಟಿ ರಿಲೀಸ್ ಡೇಟ್ ಫಿಕ್ಸ್!

ಈ ವರ್ಷ ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಕೊಂಚ ಶಕ್ತಿ ತುಂಬಿದ ಸಿನಿಮಾ 'ಬ್ರಹ್ಮಾಸ್ತ್ರ'. ಈ ಫ್ಯಾಂಟಸಿ ಅಡ್ವೆಂಚರಸ್ ಸಿನಿಮಾ ಸೆಪ್ಟೆಂಬರ್ 9ಕ್ಕೆ ತೆರೆಗಪ್ಪಳಿಸಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿತ್ತು. ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಇದೀಗ 'ಬ್ರಹ್ಮಾಸ್ತ್ರ' ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಚರ್ಚೆ ಶುರುವಾಗಿದೆ.

400 ಕೋಟಿ ರೂ. ಬಜೆಟ್‌ನಲ್ಲಿ 2 ಭಾಗಗಳಾಗಿ 'ಬ್ರಹ್ಮಾಸ್ತ್ರ' ಸಿನಿಮಾ ನಿರ್ಮಾಣವಾಗಿದೆ. ಅಮಿತಾಬ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್ ಚಿತ್ರದಲ್ಲಿ ತಾರಾಗಣದಲ್ಲಿದ್ದಾರೆ. ಶಾರುಕ್ ಖಾನ್ ಗೆಸ್ಟ್ ಅಪಿಯರೆನ್ಸ್ ಕೂಡ ಚಿತ್ರದಲ್ಲಿದೆ. ಸೋತು ಸುಣ್ಣವಾಗಿದ್ದ ಬಾಲಿವುಡ್‌ಗೆ ಈ ವರ್ಷ ಈ ಸಿನಿಮಾ ಕೊಂಚಮಟ್ಟಿಗೆ ಚೈತನ್ಯ ತುಂಬಿದ್ದು ಸುಳ್ಳಲ್ಲ. ವಿಶ್ವದಾದ್ಯಂತ ಬರೋಬ್ಬರಿ 8000 ಸ್ಕ್ರೀನ್‌ಗಳಲ್ಲಿ 'ಬ್ರಹ್ಮಾಸ್ತ್ರ' ಸಿನಿಮಾ ರಿಲೀಸ್ ಆಗಿತ್ತು. ಭರ್ಜರಿ ರೆಸ್ಪಾನ್ಸ್ ಜೊತೆಗೆ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಎಸ್‌. ಎಸ್‌ ರಾಜಮೌಳಿ ಕೂಡ ಚಿತ್ರತಂಡಕ್ಕೆ ಬೆಂಬಲವಾಗಿ ನಿಂತಿದ್ದರು. ಸಿನಿಮಾ ಪ್ರಮೋಷನ್‌ನಲ್ಲಿ ಭಾಗವಹಿಸಿದ್ದರು. ಹಾಗಾಗಿ ತೆಲುಗಿನಲ್ಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು.

400 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ 'ಬ್ರಹ್ಮಾಸ್ತ್ರ' ಚಿತ್ರದ ಮೊದಲ ಭಾಗ ಸದ್ದು ಮಾಡಿತ್ತು. ಮೊದಲ ದಿನವೇ ಪ್ರಪಂಚದಾದ್ಯಂತ 75 ಕೋಟಿ ರೂ.ಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಇನ್ನು 2 ದಿನಕ್ಕೆ ಗಳಿಕೆ 160 ಕೋಟಿ ರೂ. ಆಗಿತ್ತು. ಹೀಗೆ ಪ್ರತಿ ವಾರದ ಕಲೆಕ್ಷನ್ ಅಪ್‌ಡೇಟ್ ಮಾಡುತ್ತಾ ಬಂದಿದ್ದ ಚಿತ್ರತಂಡ ಇತ್ತೀಚೆಗೆ 25 ದಿನಕ್ಕೆ 425 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಘೋಷಿಸಿತ್ತು. 3D ಹಾಗೂ ಐಮ್ಯಾಕ್ಸ್ 3D ವರ್ಷನ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ರಿಲೀಸ್‌ಗೂ ಮೊದಲು ಬಾಯ್‌ಕಾಟ್ ಬಿಸಿ ಚಿತ್ರಕ್ಕೆ ತಟ್ಟಿತ್ತು. ಆದರೆ ಕೊನೆ ಹಂತದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಒಲವು ತೋರಿಸಿದ್ದರು.

Brahmastra Ott Release Date when and where to watch this bollywood Super Hit Movie

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ನವೆಂಬರ್ 4ಕ್ಕೆ 'ಬ್ರಹ್ಮಾಸ್ತ್ರ' ಸಿನಿಮಾ ಸ್ಟ್ರೀಮಿಂಗ್‌ ಆಗುತ್ತೆ ಎನ್ನಲಾಗುತ್ತಿದೆ. ಎಲ್ಲಾ ಅಸ್ತ್ರಗಳ ಅಧತಪತಿ ಬ್ರಹ್ಮಾಸ್ತ್ರ. 3 ಭಾಗಗಳಾಗಿ ವಿಭಾಗಗೊಂಡಿರುವ ಈ ಶಕ್ತಿಶಾಲಿ ಅಸ್ತ್ರಗಳನ್ನು ಬ್ರಹ್ಮಾನ್ಷ್ ಗ್ರೂಪ್ ಕಾಪಾಡುತ್ತಿರುತ್ತದೆ. ಅದರಲ್ಲಿ ಒಂದು ಭಾಗ ಮೋಹನ್ ಭಾರ್ಗವ್(ಶಾರುಖ್ ಖಾನ್) ಬಳಿ ಇದ್ದರೆ, ಮತ್ತೊಂದು ಅನೀಶ್(ನಾಗಾರ್ಜುನ) ಎನ್ನುವ ಆರ್ಟಿಸ್ಟ್ ಬಳಿ ಇರುತ್ತದೆ. 3ನೇ ಭಾಗ ಯಾರ ಬಳಿ ಇದೆ ಎನ್ನುವುದು ಯಾರಿಗೂ ಗೊತ್ತಿರಲ್ಲ. ಈ 3 ಭಾಗಗಳನ್ನು ಹುಡುಕಿ, ಅದನ್ನು ಒಟ್ಟುಗೂಡಿಸಿ ಬ್ರಹ್ಮಾಸ್ತ್ರದ ಶಕ್ತಿಯಿಂದ ಇಡೀ ಪ್ರಪಂಚವನ್ನು ಕೈವಶ ಮಾಡಿಕೊಳ್ಳಬೇಕು ಎಂದು ಜುನೂನ್(ಮೌನಿ ರಾಯ್) ತಂಡ ಪ್ರಯತ್ನಿಸುತ್ತಿರುತ್ತದೆ. ಬ್ರಹ್ಮಾಸ್ತ್ರಕ್ಕಾಗಿ ಇವರು ಪ್ರಯತ್ನಗಳಿಗೆ ಡಿಜೆ ಶಿವ ಅಡ್ಡಗಾಲಾಗುತ್ತಾನೆ. ಈ ಶಿವ ಯಾರು? ಈತನಿಗೂ ಬ್ರಹ್ಮಾಸ್ತ್ರಕ್ಕೂ ಸಂಬಂಧ ಏನು ? ಎನ್ನುವುದೇ ಸಿನಿಮಾ ಕಥೆ.

Brahmastra Ott Release Date when and where to watch this bollywood Super Hit Movie

'ಬ್ರಹ್ಮಾಸ್ತ್ರ' ಸಿನಿಮಾ ರಿಲೀಸ್ ಆಗಿ 2 ತಿಂಗಳು ಕಳೆಯುವ ಮುನ್ನವೇ ಓಟಿಟಿಗೆ ಬರ್ತಿದೆ. ಬಾಕ್ಸಾಫೀಸ್‌ನಲ್ಲಿ ಇಷ್ಟೆಲ್ಲಾ ಸದ್ದು ಮಾಡಿದ ಸಿನಿಮಾದಲ್ಲಿ ಅಂಥಾದ್ದೇನಿದೆ ಎಂದು ತಿಳಿಯಲು ಸಾಕಷ್ಟು ಜನ ಕಾಯುತ್ತಿದ್ದಾರೆ. ಹಿಂದಿ ಜೊತೆಗೆ ತೆಲುಗು, ತಮಿಳಿನಲ್ಲೂ ಸಿನಿಮಾ ಓಟಿಟಿಗೆ ಬರ್ತಿದೆ. 2025ರಲ್ಲಿ 'ಬ್ರಹ್ಮಾಸ್ತ್ರ' ಚಿತ್ರದ ಎರಡನೇ ಭಾಗ ಪ್ರೇಕ್ಷಕರ ಮುಂದೆ ಬರಲಿದೆ. ಸೆಕೆಂಡ್ ಪಾರ್ಟ್‌ನಲ್ಲಿ ಯಾರು ಹೀರೊ ಆಗಿ ನಟಿಸ್ತಾರೆ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ. ಅಯಾನ್ ಮುಖರ್ಜಿ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಲಿದ್ದಾರೆ.

More from Filmibeat

English summary
Brahmastra Ott Release Date when and where to watch this bollywood Super Hit Movie. This superhero fantasy movie has emerged as one of the highest-grossing films in Bollywood this year. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X