ಭಾರೀ ಮೊತ್ತಕ್ಕೆ ಡೀಲ್ ಆಯ್ತ ರಜನಿಕಾಂತ್ 'ಕೂಲಿ' ಓಟಿಟಿ ರೈಟ್ಸ್; ಆದ್ರೂ ಫ್ಯಾನ್ಸ್‌ಗೆ ನಿರಾಸೆ

ಕೂಸು ಹುಟ್ಟೋಕು ಮುಂದೆ ಕುಲಾವಿ ಹೊಲಿಸೋದು ಅಂತಾರಲ್ಲ, ಹಾಗೆ ಸಿನಿಮಾ ಮೇಕಿಂಗ್ ಹಂತದಲ್ಲೇ ಭರ್ಜರಿ ಡೀಲ್‌ಗಳು ನಡೆಯುತ್ತದೆ. ಬರೀ ಬಾಕ್ಸಾಫೀಸ್ ಕಲೆಕ್ಷನ್ ಮಾತ್ರವಲ್ಲ, ಆಡಿಯೋ ರೈಟ್ಸ್, ಸ್ಯಾಟಲೈಟ್ ರೈಟ್ಸ್‌ಗಳಿಂದ ಸಿನಿಮಾಗಳಿಗೆ ಭರ್ಜರಿ ಆದಾಯ ಬರುತ್ತದೆ. ಇತ್ತೀಚೆಗೆ ಓಟಿಟಿ ರೈಟ್ಸ್ ಬೋನಸ್ ಎನ್ನುವಂತಾಗಿದೆ.

ದೊಡ್ಡ ಸಿನಿಮಾಗಳ ಡಿಜಿಟಲ್ ರೈಟ್ಸ್ ಕೊಂಡುಕೊಳ್ಳಲು ಓಟಿಟಿ ಸಂಸ್ಥೆಗಳ ನಡುವೆ ಭಾರೀ ಪೈಪೋಟಿ ಏರ್ಪಡುತ್ತದೆ. ಅಂತಿಮವಾಗಿ ಯಾರು ಹೆಚ್ಚು ಹಣ ಕೊಡುತ್ತಾರೋ ರೈಟ್ಸ್ ಅವರ ಪಾಲಾಗುತ್ತದೆ. ಕ್ರೇಜಿ ಕಾಂಬಿನೇಷನ್‌ ಸಿನಿಮಾ ಓಟಿಟಿ ರೈಟ್ಸ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುತ್ತದೆ. ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ.

Buzz Rajinikanth s Coolie seals its OTT deal for a whopping price

ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಕೂಲಿ' ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಪೋಸ್ಟರ್‌ಗಳೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದಲ್ಲಿ ಬಾಲಿವುಡ್ ನಟ ಆಮಿರ್ ಖಾನ್ ಕೂಡ ಬಣ್ಣ ಹಚ್ಚಿದ್ದಾರೆ. ನಾಗಾರ್ಜುನಾ, ಉಪೇಂದ್ರ, ಸತ್ಯರಾಜ್, ಶ್ರುತಿ ಹಾಸನ್ ಸೇರಿದಂತೆ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡುತ್ತಿದ್ದು ಅನಿರುದ್‌ ರವಿಚಂದರ್ ಸಂಗೀತವಿದೆ.

ಪೂಜಾ ಹೆಗ್ಡೆ 'ಕೂಲಿ' ಚಿತ್ರದ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಹೀಗೆ ಹತ್ತು ಹಲವು ಕಾರಣಗಳಿಂದ ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ. ಸದ್ಯ ಚಿತ್ರದ ಓಟಿಟಿ ಡೀಲ್ ಬಗ್ಗೆ ಗುಸುಗುಸು ಕೇಳಿಬರ್ತಿದೆ. ಪ್ರೈಂ ವೀಡಿಯೋ ಚಿತ್ರದ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.

Buzz Rajinikanth s Coolie seals its OTT deal for a whopping price

ಬರೋಬ್ಬರಿ 120 ಕೋಟಿ ರೂ.ಗೆ 'ಕೂಲಿ' ಚಿತ್ರದ 5 ಭಾಷೆಗಳ ಓಟಿಟಿ ಡೀಲ್ ಕುದುರಿಸಲಾಗಿದೆ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. 120 ಕೋಟಿ ರೂ. ದೊಡ್ಡ ಮೊತ್ತ ಎಂದು ಕೆಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು ಇದು ರಜನಿಕಾಂತ್- ಲೋಕೇಶ್ ಕಾಂಬೋ ರೇಂಜಿಂಗ್ ತಕ್ಕಂತೆ ಇಲ್ಲ ಎನ್ನುತ್ತಿದ್ದಾರೆ.

ಕಮಲ್ ಹಾಸನ್ ಹಾಗೂ ಮಣಿರತ್ನಂ ಜೋಡಿಯ 'ಥಗ್ ಲೈಫ್' ಚಿತ್ರದ ಓಟಿಟಿ ರೈಟ್ಸ್ 149 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನಲಾಗ್ತಿದೆ. ಅದೇ ರೀತಿ ದಳಪತಿ ವಿಜಯ್ ನಟನೆಯ 'GOAT' ಚಿತ್ರದ ರೈಟ್ಸ್ 125 ಕೋಟಿ ರೂ.ಗೆ ಬಿಕರಿಯಾಗಿತ್ತು ಎನ್ನುವ ಮಾತುಗಳು ಕೇಳಿಬಂದಿತ್ತು. ಎರಡು ಚಿತ್ರಗಳ ರೈಟ್ಸ್ ನೆಟ್‌ಫ್ಲಿಕ್ಸ್ ಪಾಲಾಗಿತ್ತು. ಈ ಚಿತ್ರಗಳಿಗೆ ಹೋಲಿಸಿದರೆ 'ಕೂಲಿ' ಓಟಿಟಿ ಡೀಲ್ ಕಮ್ಮಿ ಎನ್ನಲಾಗ್ತಿದೆ.

ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆದರೆ ಬಳಿಕ ಬಂದಿದ್ದ 'ಲಾಲ್ ಸಲಾಂ' ಹಾಗೂ 'ವೆಟ್ಟೆಯಾನ್' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಅದೇ ಕಾರಣಕ್ಕೆ ರಜನಿಕಾಂತ್ ಸಿನಿಮಾಗಳ ಕ್ರೇಜ್ ಕಮ್ಮಿ ಆಗಿದೆ. ಹೀಗಾಗಿ 'ಕೂಲಿ' ಚಿತ್ರದ ಡಿಜಿಟಲ್ ರೈಟ್ಸ್ ಡಿಮ್ಯಾಂಡ್ ಕಮ್ಮಿ ಆಗಿರಬಹುದು ಎಂದು ಕೆಲವರು ಅಂದಾಜಿಸುತ್ತಿದ್ದಾರೆ.

ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ 'ಕೂಲಿ' ಸಿನಿಮಾ ತೆರೆಗೆ ಬರಬಹುದು ಎನ್ನುವ ನಿರೀಕ್ಷೆಯಿದೆ. ಚಿತ್ರದಲ್ಲಿ ರಚಿತಾ ರಾಮ್ ಕೂಡ ನಟಿಸಿದ್ದಾರೆ ಎಂದು ಗುಲ್ಲಾಗಿತ್ತು. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಶೀಘ್ರದಲ್ಲೇ ಸಿನಿಮಾ ಟೀಸರ್ ರಿಲೀಸ್ ಪ್ಲ್ಯಾನ್ ನಡೀತಿದೆ.

More from Filmibeat

English summary
Coolie OTT deal locked for a whopping price; Rajinikanth's film to be released on this platform;
Read more about: rajinikanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X