twitter
    For Quick Alerts
    ALLOW NOTIFICATIONS  
    For Daily Alerts

    ನೆಟ್‌ಫ್ಲಿಕ್ಸ್‌ ನಲ್ಲಿ ಸಿನಿಮಾ ನೋಡಲು ರಹಸ್ಯ ಕೋಡ್‌ಗಳನ್ನು ಬಳಸಿ

    |

    ಕಂಪ್ಯೂಟರ್ ಗೇಮ್‌, ಸಾಫ್ಟ್‌ವೇರ್‌ ಗಳ ಬಗ್ಗೆ ಅಲ್ಪ-ಸ್ವಲ್ಪ ಗೊತ್ತಿದ್ದವರಿಗೆ ರಹಸ್ಯ ಕೋಡ್‌ ಗಳು ಅಥವಾ ಚೀಟ್‌ ಕೋಡ್‌ಗಳ ಬಗ್ಗೆ ಗೊತ್ತೇ ಇರುತ್ತದೆ.

    Recommended Video

    ವೆಬ್ ಸಿರೀಸ್ ನಲ್ಲಿ ಸಾಯಿ ಪಲ್ಲವಿ ನಟನೆ | Filmibeat Kannada

    ಕಂಪ್ಯೂಟರ್ ವಿಡಿಯೋ ಗೇಮ್‌ನಲ್ಲಿ ಔಟಾಗದೆ ಆಡಲು, ಹೆಚ್ಚು ಸ್ಕೋರ್ ಗಳಿಸಲು ಇನ್ನೂ ಹಲವು ಕಾರಣಗಳಿಗೆ ಚೀಟ್‌ ಕೋಡ್‌ಗಳನ್ನು ಬಳಸಿ ಆಟ ಆಡಲಾಗುತ್ತದೆ.

    ಮೊಬೈಲ್‌ಗಳಲ್ಲೂ ಸಹ ಚೀಟ್‌ ಕೋಡ್‌ಗಳು ಲಭ್ಯವಿವೆಯಾದರೂ, ಕಂಪ್ಯೂಟರ್ ನಲ್ಲಿ ಆಡುವ ಗೇಮ್‌, ಬಳಸುವ ಸಾಫ್ಟ್‌ವೇರ್‌ ಗಳಿಗೆ ಚೀಟ್ ಕೋಡ್ ಬಳಸುವುದು ಹೆಚ್ಚು.

    ವಿಶ್ವವಿಖ್ಯಾತ ನೆಟ್‌ಫ್ಲಿಕ್ಸ್‌ನಲ್ಲಿ ಹೆಚ್ಚು ಸಿನಿಮಾ ನೋಡಲು ಚೀಟ್‌ ಕೋಡ್‌ಗಳು ಅಥವಾ ರಹಸ್ಯ ಕೋಡ್‌ಗಳು ಲಭ್ಯವಿವೆ. ಅದನ್ನು ಬಳಸಿ ಹೆಚ್ಚು ಸಿನಿಮಾಗಳನ್ನು ನೋಡಬಹುದು. ಅಷ್ಟೆ ಅಲ್ಲ, ಭಾರತೀಯರಿಂದ ನೆಟ್‌ಫ್ಲಿಕ್ಸ್‌ ಮರೆಮಾಡಿದ ಸಿನಿಮಾಗಳನ್ನೂ ಸಹ ನೋಡಬಹುದು.

    ಪ್ರದೇಶಕ್ಕನುಗುಣವಾಗಿ ಸಿನಿಮಾ ನೀಡುವ ನೆಟ್‌ಫ್ಲಿಕ್ಸ್

    ಪ್ರದೇಶಕ್ಕನುಗುಣವಾಗಿ ಸಿನಿಮಾ ನೀಡುವ ನೆಟ್‌ಫ್ಲಿಕ್ಸ್

    ನೆಟ್‌ಫ್ಲಿಕ್ಸ್‌, ಆಯಾ ಪ್ರದೇಶಕ್ಕೆ ಅನುಗುಣವಾಗಿ ಸಿನಿಮಾಗಳು, ವೆಬ್‌ ಸೀರೀಸ್‌ಗಳನ್ನು ಪ್ರದರ್ಶಿಸುತ್ತದೆ ಎಂಬುದು ಗೊತ್ತಿರುವ ವಿಷಯ. ಭಾರತೀಯರಿಗೆ ಲಭ್ಯವಾಗುವ ಎಷ್ಟೋ ಸಿನಿಮಾಗಳು ಆಫ್ರಿಕಾ ದೇಶದವರಿಗೆ ಲಭ್ಯವಾಗಿರುವುದಿಲ್ಲ. ಅವರಿಗೆ ಸಿಕ್ಕಿದ್ದು ನಮಗೆ ಸಿಕ್ಕಿರುವುದಿಲ್ಲ.

    ಬೇರೆ ದೇಶದಲ್ಲಿ ಲಭ್ಯವಿರುವ ಸಿನಿಮಾಗಳನ್ನು ನೋಡಬಹುದು

    ಬೇರೆ ದೇಶದಲ್ಲಿ ಲಭ್ಯವಿರುವ ಸಿನಿಮಾಗಳನ್ನು ನೋಡಬಹುದು

    ಆದರೆ ಚೀಟ್‌ ಕೋಡ್‌ಗಳನ್ನು ಬಳಸಿ ಬೇರೆ ದೇಶದ ಸಿನಿಮಾಗಳನ್ನು ಸಹ ಭಾರತದಲ್ಲಿ ಕೂತುಕೊಂಡೇ ನೋಡಬಹುದಾಗಿದೆ. ಅಷ್ಟೆ ಹೆಚ್ಚು-ಹೆಚ್ಚು ವೆಬ್‌ ಸರಣಿ, ಸಿನಿಮಾಗಳನ್ನೂ ಸಹ ನೋಡಬಹುದಾಗಿದೆ. ಆದರೆ ಇದಕ್ಕೂ ಒಂದು ಸಣ್ಣ ತೊಡಕಿದೆ.

    ಕಂಪ್ಯೂಟರ್, ಲ್ಯಾಪ್‌ಟಾಪ್‌ನಲ್ಲಷ್ಟೆ ನೋಡಬಹುದು

    ಕಂಪ್ಯೂಟರ್, ಲ್ಯಾಪ್‌ಟಾಪ್‌ನಲ್ಲಷ್ಟೆ ನೋಡಬಹುದು

    ಈ ಚೀಟ್‌ಕೋಡ್‌ಗಳನ್ನು ಕೇವಲ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ ನಲ್ಲಿ ನೆಟ್‌ಫ್ಲಿಕ್ಸ್‌ ನೋಡುವವರು ಮಾತ್ರವೇ ಬಳಸಬಹುದಾಗಿದೆ. ಮೊಬೈಲ್‌ನಲ್ಲಿ ನೆಟ್‌ಫ್ಲಿಕ್ಸ್ ಆಪ್ ಮೂಲಕ ಸಿನಿಮಾ ನೋಡುವವರು ಈ ಚೀಟ್‌ಕೋಡ್‌ಗಳನ್ನು ಬಳಸಲಾಗುವುದಿಲ್ಲ.

    ಪ್ರಸ್ತುತ 29 ಜಾನರ್‌ಗಳಷ್ಟೇ ನೀಡಲಾಗಿದೆ

    ಪ್ರಸ್ತುತ 29 ಜಾನರ್‌ಗಳಷ್ಟೇ ನೀಡಲಾಗಿದೆ

    ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ 29 ಜಾನರ್‌ (Gener) ಗಳಷ್ಟನ್ನೇ ನೀಡಲಾಗಿದೆ. ಒಂದೊಮ್ಮೆ ಚೀಟ್‌ಕೋಡ್‌ಗಳನ್ನು ಬಳಸಿದಲ್ಲಿ ನೂರಾರು ಜಾನರ್‌ಗಳು ತೆರೆದುಕೊಳ್ಳುತ್ತವೆ. ಪ್ರತಿಯೊಂದು ಜಾನರ್‌ನಲ್ಲೂ ವಿವಿಧ ಸಿನಿಮಾಗಳು ಲಭ್ಯವಿವೆ. ಚೀಟ್‌ಕೋಡ್‌ಗಳನ್ನು ಬಳಸಿದರೆ ಸಾವಿರಾರು ಹೊಸ ಚಿತ್ರಗಳನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದಾಗಿದೆ.

    ಇಲ್ಲಿವೆ ನೋಡಿ ರಹಸ್ಯ ಕೋಡ್‌ಗಳು

    ಇಲ್ಲಿವೆ ನೋಡಿ ರಹಸ್ಯ ಕೋಡ್‌ಗಳು

    ನೂರಾರು ಚೀಟ್‌ಕೋಡ್‌ಗಳು ನೆಟ್‌ಫ್ಲಿಕ್ಸ್‌ ಗೆ ಲಭ್ಯವಿದೆ. ಇಲ್ಲಿ ಕೆಲವನ್ನಷ್ಟೆ ನೀಡಲಾಗಿದೆ. 77232, 43040, 43048, 7442, 10118, 29809, 47147, 46588, 47465, 48744, 53310, 869, 2700, 3519, 8195, 10944, 3652, 4006, 90361, 7018, 10005, 3179, 29809, 3653, 52804, 29764. ನೆಟ್‌ಫ್ಲಿಕ್ಸ್/ಬ್ರೌಸ್/ಜಾನರ್/ ನಂತರ ಈ ಯಾವುದಾದರೂ ಸಂಖ್ಯೆಗಳನ್ನು ಹಾಕಬಹುದು.

    English summary
    Can watch more movies and foreign movies in Netflix by using cheat codes.
    Monday, May 18, 2020, 17:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X