ಶಿವಣ್ಣ- ಧನುಷ್ 'ಕ್ಯಾಪ್ಟನ್ ಮಿಲ್ಲರ್' ಓಟಿಟಿ ರಿಲೀಸ್ ಡೇಟ್ ಕನ್ಫರ್ಮ್; ಎಲ್ಲಿ, ಯಾವಾಗ ಲಭ್ಯ?

ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ತೆಲುಗು, ತಮಿಳಿನ ದೊಡ್ಡ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸಿದ್ದವು. ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಕೂಡ ಲಿಸ್ಟ್‌ನಲ್ಲಿ ಇತ್ತು. ಶಿವರಾಜ್‌ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಎನ್ನುವ ಕಾರಣಕ್ಕೆ ಸಿನಿಮಾ ಕರ್ನಾಟಕದಲ್ಲೂ ನಿರೀಕ್ಷೆ ಹುಟ್ಟು ಹಾಕಿತ್ತು.

'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬಿಡುಗಡೆಯಾಗಿತ್ತು. ಸೆಂಗಣ್ಣನ್ ಎನ್ನುವ ಪಾತ್ರದಲ್ಲಿ ಅಬ್ಬರಿಸಿದ್ದರು. ಅರುಣ್ ಮಥೇಶ್ವರನ್ ನಿರ್ದೇಶನದ ಈ ಎಪಿಕ್ ಆಕ್ಷನ್ ಅಡ್ವೆಂಚರಸ್ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಲಿಲ್ಲ.

Captain Miller OTT streaming date is locked

ಬಹಳ ಅದ್ಧೂರಿಯಾಗಿ 'ಕ್ಯಾಪ್ಟನ್ ಮಿಲ್ಲರ್' ಚಿತ್ರವನ್ನು ತೆರೆಗೆ ತರಲಾಗಿತ್ತು. ಆದರೆ ಪ್ರೇಕ್ಷಕರಿಗೆ ಅಷ್ಟಾಗಿ ಸಿನಿಮಾ ಇಷ್ಟವಾಗಲಿಲ್ಲ. ಇದ್ದಿದ್ದರಲ್ಲಿ ಒಂದು ರೇಂಜ್‌ಗೆ ಸಿನಿಮಾ ಗಳಿಕೆ ಕಂಡಿತ್ತು. ಸುಗ್ಗಿ ಸಂಭ್ರಮದಲ್ಲಿ ತೆಲುಗಿನ ದೊಡ್ಡ ದೊಡ್ಡ ಸಿನಿಮಾಗಳು ಚಿತ್ರಕ್ಕೆ ಪೈಪೋಟಿ ಕೊಟ್ಟಿದ್ದವು. ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಮಾಡಲು ಕಷ್ಟವಾಯಿತು. ಚಿತ್ರದ ಅಂದಾಜು 140 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗುತ್ತಿದೆ.

ಸದ್ಯ 'ಕ್ಯಾಪ್ಟನ್ ಮಿಲ್ಲರ್' ಓಟಿಟಿ ರಿಲೀಸ್ ಬಗ್ಗೆ ಚರ್ಚೆ ಶುರುವಾಗಿದೆ. ಫೆಬ್ರವರಿ 9ರಂದು ಅಮೇಜಾನ್‌ ಪ್ರೈಂ ವಿಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ. 'ಜೈಲರ್' ಚಿತ್ರದ ಅತಿಥಿ ಪಾತ್ರದಲ್ಲಿ ಕಾಲಿವುಡ್ ಪ್ರವೇಶಿಸಿದ್ದ ಶಿವಣ್ಣ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಮತ್ತೆ ಅಬ್ಬರಿಸಿದ್ದರು. ಆದರೆ ಸಿನಿಮಾ 28 ದಿನಗಳಿಗೆ ಓಟಿಟಿಗೆ ಬರುತ್ತಿರುವುದು ಸಾಕಷ್ಟು ಜನರಿಗೆ ಅಚ್ಚರಿ ಮೂಡಿಸಿದೆ.

ಸ್ವಾತಂತ್ರ್ಯ ಪೂರ್ವದ ಕಾಲ್ಪನಿಕ ಕಥೆಯನ್ನು 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ನೋಡಬಹುದು. 1930 ರ ದಶಕದಲ್ಲಿ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಈಸಾ (ಧನುಷ್) ಹಳ್ಳಿಯೊಂದರಲ್ಲಿ ವಾಸಿಸುತ್ತಿರುತ್ತಾನೆ. ಸ್ವಗ್ರಾಮದಲ್ಲಿ ಜಾತಿ ತಾರತಮ್ಯದಿಂದಾಗಿ ಆತ ಸೇನೆಗೆ ಸೇರುತ್ತಾನೆ. ಸೈನ್ಯದಲ್ಲಿ ಅವನನ್ನು ಮಿಲ್ಲರ್ ಎಂದು ಕರೆಯಲಾಗುತ್ತದೆ.

ತರಬೇತಿ ಬಳಿಕ ಕೆಲಸಕ್ಕೆ ನಿಯೋಜನೆಗೊಂಡ ಸಮಯದಲ್ಲಿ ತನ್ನ ಮೇಲಾಧಿಕಾರಿಯನ್ನು ಆತ ಕೊಲ್ಲುತ್ತಾನೆ. ತಪ್ಪಿಸಿಕೊಳ್ಳಲು ಸಹ ಸೈನಿಕ ರಫೀಕ್ (ಸಂದೀಪ್ ಕಿಶನ್) ಸಹಾಯ ಮಾಡುತ್ತಾನೆ. ಅಲ್ಲಿಂದ ಬಂದ ಮಿಲ್ಲರ್ ಕಳ್ಳನಾಗಬೇಕಾಗುತ್ತದೆ. ಆತ ತನ್ನ ಗ್ರಾಮದ ದೇವಸ್ಥಾನದಿಂದ ವಿಗ್ರಹವನ್ನು ಏಕೆ ಕದಿಯುವಂತಾಗುತ್ತದೆ? ಮುಂದೆ ಇದರ ಪರಿಣಾಮ ಏನಾಗುತ್ತೆ? ಈ ಹಾದಿಯಲ್ಲಿ ಬರುವ ಭಾನುಮತಿ ಯಾರು? ಸೆಂಗಣ್ಣನ್ (ಶಿವರಾಜ್ ಕುಮಾರ್) ಹಿನ್ನೆಲೆ ಏನು? ಅಷ್ಟಕ್ಕೂ ದೇವಸ್ಥಾನದಲ್ಲಿದ್ದ ವಿಗ್ರಹದ ಹಿಂದಿನ ಕಥೆಯೇನು? ಇದೆಲ್ಲದಕ್ಕೂ ಉತ್ತರ ಸಿನಿಮಾದಲ್ಲಿದೆ.

ಫಸ್ಟ್‌ ಹಾಫ್‌ನಲ್ಲಿ ಶಿವಣ್ಣನ ಪಾತ್ರ ಬಹಳ ಚಿಕ್ಕದು ಎನಿಸುತ್ತದೆ. ಆದರೆ ಕ್ಲೈಮ್ಯಾಕ್ಸ್ ಟ್ವಿಸ್ಟ್ ಮಜವಾಗಿದೆ. 'ಜೈಲರ್' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನರಸಿಂಹ ಆಗಿ ಅಬ್ಬರಿಸಿದ್ದಂತೆ ಕ್ಯಾಪ್ಟನ್ ಅಖಾಡದಲ್ಲೂ ಸೆಂಚುರಿ ಸ್ಟಾರ್ ದರ್ಬಾರ್ ನಡೆಸಿದ್ದಾರೆ. ಒಳ್ಳೆ ಅಂಕ ಗಿಟ್ಟಿಸಿಕೊಂಡಿದ್ದಾರೆ.

Captain Miller OTT streaming date is locked

3ನೇ ವಾರವೂ ಕೆಲವೆಡೆ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇದೀಗ ಓಟಿಟಿ ಸ್ಟ್ರೀಮಿಂಗ್‌ಗೆ ಸಿದ್ಧವಾಗುತ್ತಿದೆ. ಫೆಬ್ರವರಿ 9ರಂದು ತಮಿಳು ಜೊತೆಗೆ ಕನ್ನಡ, ತೆಲುಗು ವರ್ಷನ್ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಆದರೆ ಹಿಂದಿ ವರ್ಷನ್ ಮಾತ್ರ ತಡವಾಗಲಿದೆ.

'ಕ್ಯಾಪ್ಟನ್ ಮಿಲ್ಲರ್' ಬಳಿಕ ಮತ್ತಷ್ಟು ತಮಿಳು ಸಿನಿಮಾಗಳಲ್ಲಿ ಶಿವರಾಜ್‌ಕುಮಾರ್ ನಟಿಸಲಿದ್ದಾರೆ. ಹೀರೊ ಆಗಿ ಕೂಡ ಒಂದು ಚಿತ್ರದಲ್ಲಿ ಅಭಿನಯಿಸುವ ಬಗ್ಗೆ ಚರ್ಚೆ ನಡೀತಿದೆ. ತಮಿಳು ಮಾತ್ರವಲ್ಲದೇ ತೆಲುಗು ಸಿನಿಮಾದಲ್ಲಿ ನಟಿಸುವುದಕ್ಕೂ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬುಚ್ಚಿಬಾಬು ನಿರ್ದೇಶನದಲ್ಲಿ ರಾಮ್‌ಚರಣ್ ನಟನೆಯ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಬಣ್ಣ ಹಚ್ಚಲಿದ್ದಾರೆ.

More from Filmibeat

English summary
Dhanush - Shivarajkumar starrer Captain Miller OTT Release Date Confirmed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X