ಒಟಿಟಿಯಲ್ಲಿ ದಾಖಲೆ ಬರೆದ ಅಮಿತಾಭ್-ಇಮ್ರಾನ್ ಹಶ್ಮಿಯ 'ಚೆಹ್ರೆ'!

ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಇಮ್ರಾನ್ ಹಶ್ಮಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಚೆಹ್ರೆ ಒಟಿಟಿಯಲ್ಲಿ ಪ್ರೀಮಿಯರ್ ಕಂಡಿದೆ. ಆಗಸ್ಟ್ ತಿಂಗಳಲ್ಲಿ ವರ್ಲ್ಡ್‌ವೈಡ್ ಥಿಯೇಟರ್ ರಿಲೀಸ್ ಆಗಿದ್ದ ಈ ಚಿತ್ರ ತಿಂಗಳು ಬಳಿಕ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ.

ವರ್ಷದ ಅತಿ ನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿದ್ದ ಚೆಹ್ರೆ ಅಮೇಜಾನ್ ಪ್ರೈಮ್‌ ಮೂಲಕ ಜಗತ್ತಿನ 210 ದೇಶಗಳಿಗೆ ತಲುಪಿದೆ. ಈ ಚಿತ್ರ ವಿಮರ್ಶಾತ್ಮಕವಾಗಿ ಮಾತ್ರವಲ್ಲದೇ ಜನರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಅಮಿತಾಭ್ ಬಚ್ಚನ್ ಮತ್ತು ಇಮ್ರಾನ್ ಹಶ್ಮಿ ಜುಗಲ್‌ಬಂದಿಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಒಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ನಟ ಇಮ್ರಾನ್ ಹಶ್ಮಿ, ''ನಾನು ಚೆಹ್ರೆಗೆ ಸಹಿ ಹಾಕಿದಾಗ, ಈ ಚಿತ್ರದ ಅಸಾಮಾನ್ಯ ಕಥಾವಸ್ತುವಿನಿಂದಾಗಿ ಉತ್ತಮ ಯಶಸ್ಸು ಪಡೆಯುತ್ತದೆ ಎಂದು ನನ್ನ ಮನಸ್ಸಿನಲ್ಲಿ ಒಂದು ದೃಢವಾದ ಭಾವನೆ ಮೂಡಿತ್ತು. ಈಗ ಅದೇ ಆಗುತ್ತಿದೆ. ಪ್ರಮುಖವಾಗಿ ಒಟಿಟಿಯಲ್ಲಿ ಅದ್ಭುತ ಪ್ರತಿಕ್ರಿಯೆಗಳನ್ನು ನೋಡಿ ನಾನು ಸಂತಸದಲ್ಲಿ ಮುಳುಗಿದ್ದೇನೆ. ದೊಡ್ಡ ವೀಕ್ಷಣೆ ಪಡೆದಿರುವುದು ಮತ್ತು ಇಂತಹ ಯಶಸ್ಸಿಗೆ ಚೆಹ್ರೆ ಸಿನಿಮಾ ಅರ್ಹ ಎಂದು ನಾನು ಭಾವಿಸುತ್ತೇನೆ'' ಎಂದಿದ್ದಾರೆ.

Chehre Becomes The Most Viewed Film On Ott Viewership

ಚೆಹ್ರೆ ಸಿನಿಮಾ ಆಗಸ್ಟ್ 27 ರಂದು ವರ್ಲ್ಡ್‌ವೈಡ್ ಥಿಯೇಟರ್ ಬಿಡುಗಡೆಯಾಗಿತ್ತು. ಹಾಗ್ನೋಡಿದ್ರೆ ಕಳೆದ ಏಪ್ರಿಲ್ ತಿಂಗಳಲ್ಲೇ ಸಿನಿಮಾ ಚಿತ್ರಮಂದಿರಕ್ಕೆ ಬರಬೇಕಿತ್ತು. 'ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದ ಹಿನ್ನೆಲೆ ಹಾಗೂ ಸರ್ಕಾರದ ಮಾರ್ಗಸೂಚಿಯ ಅನ್ವಯ ಚಿತ್ರದ ಬಿಡುಗಡೆ ಸಾಧ್ಯವಾಗಿರಲಿಲ್ಲ. ನಂತರ ಸ್ವಲ್ಪ ದಿನಗಳು ಕಾದು ಆಗಸ್ಟ್ ತಿಂಗಳಲ್ಲಿ ರಿಲೀಸ್ ಮಾಡಿದ್ದರು.

ಚೆಹ್ರೆ ಚಿತ್ರದಲ್ಲಿ ಅಮಿತಾಭ್ ಕ್ರಿಮಿನಲ್ ಲಾಯರ್ ಪಾತ್ರದಲ್ಲಿ ನಟಿಸಿದ್ದು, ಇಮ್ರಾನ್ ಹಶ್ಮಿ ಸಹ ಕ್ರಿಮಿನಲ್ ಆಗಿ ಅಭಿನಯಿಸಿದ್ದಾರೆ. ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಸಹ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.

ರೂಮಿ ಜಾಫ್ರಿ ಈ ಚಿತ್ರ ನಿರ್ದೇಶಿಸಿದ್ದು, ಆನಂದ್ ಪಂಡಿತ್ ಬಂಡವಾಳ ಹಾಕಿದ್ದಾರೆ. ಸಿದ್ಧಂತ್ ಕಪೂರ್, ಕ್ರಿಸ್ಟಲ್ ಡಿಸೋಜ, ರಘುಬೀರ್ ಯಾದವ್ ಮತ್ತು ಅನ್ನೂ ಕಪೂರ್ ಸಹ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಇನ್ನು ಸಿನಿಮಾ ಇಷ್ಟಪಡದ ಜನರು ಚೆಹ್ರೆ ಚಿತ್ರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಒಟಿಟಿಯಲ್ಲಿ ಹೆಚ್ಚು ವೀಕ್ಷಣೆ ಕಂಡಿದೆ ಎನ್ನುವ ಸುದ್ದಿ ಬಗ್ಗೆಯೂ ವ್ಯಂಗ್ಯ ಮಾಡಿದ್ದಾರೆ. ಇದೆಲ್ಲ ಪ್ರಚಾರ ಅಷ್ಟೇ, ಪಿಆರ್ ಪ್ಲಾನ್, ಸಿನಿಮಾ ಚೆನ್ನಾಗಿಲ್ಲ ಎಂದು ಅನೇಕರು ಟೀಕಿಸಿದ್ದಾರೆ.

More from Filmibeat

English summary
Bollywood Megastar Amitabh Bachchan-Emraan Hashmi starrer Chehre becomes the most viewed film on ott viewership.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X