For Quick Alerts
  ALLOW NOTIFICATIONS  
  For Daily Alerts

  ಮೆಗಾ ಸ್ಟಾರ್ ಪುತ್ರಿಯ ಮೊದಲ ವೆಬ್ ಸೀರಿಸ್ ನಲ್ಲಿ ಪ್ರಕಾಶ್ ರೈ

  |

  ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಸುಶ್ಮಿತಾ ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಕಾಸ್ಟ್ಯೂಮ್ ಡಿಸೈನರ್ ಆಗಿರುವ ಸುಶ್ಮಿತಾ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು ತಂದೆ ಚಿರಂಜೀವಿ ಸಹ ಸಾಥ್ ನೀಡಿದ್ದಾರೆ. ಅಂದ್ಹಾಗೆ ಸುಶ್ಮಿತಾ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅಂತ ಅಂದ್ಕೋಬೇಡಿ. ನಿರ್ಮಾಪಕಿಯಾಗಿ ಡಿಜಿಟಲ್ ಫ್ಲಾಟ್ ಫಾರ್ಮ್ ಗೆ ಎಂಟ್ರಿ ಕೊಟ್ಟಿದ್ದಾರೆ.

  ಅಭಿಮಾನಿಗೆ ಧೈರ್ಯ ತುಂಬಿದ Kiccha Sudeep | Filmibeat Kannada

  ಸುಶ್ಮಿತಾ ನಿರ್ಮಾಣದ ಮೊದಲ ವೆಬ್ ಸಿರೀಸ್ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳು ಬಹಿರಂಗವಾಗಿದೆ. ಇತ್ತೀಚಿಗೆ ವೆಬ್ ಸೀರಿಸ್ ಗಳು ಹೆಚ್ಚು ಸದ್ದು ಮಾಡುತ್ತಿವೆ. ಸ್ಟಾರ್ ಕಲಾವಿದರು ಸಹ ನಿಧಾನವಾಗಿ ವೆಬ್ ಸೀರಿಸ್ ಕಡೆ ಮುಖ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ಕಲಾವಿದರು ವೆಬ್ ಸೀರಿಸ್ ಕಡೆ ಆಸಕ್ತಿ ತೋರಿಸಿದ್ದು, ಚಿರಂಜೀವಿ ಪುತ್ರಿ ನಿರ್ಮಿಸುತ್ತಿರುವ ವೆಬ್ ಸಿರೀಸ್ ಗೆ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಎಂಟ್ರಿ ಕೊಟ್ಟಿದ್ದಾರೆ.

  ಸುಶಾಂತ್ ಸಿಂಗ್ ಬಗ್ಗೆ ಪ್ರಕಾಶ್ ರೈ ಭಾವುಕ ಮಾತು: 'ನಾನು ಬದುಕುಳಿದೆ, ಆದರೆ ಈ ಮಗುವಿಗೆ ಆಗಲಿಲ್ಲ'ಸುಶಾಂತ್ ಸಿಂಗ್ ಬಗ್ಗೆ ಪ್ರಕಾಶ್ ರೈ ಭಾವುಕ ಮಾತು: 'ನಾನು ಬದುಕುಳಿದೆ, ಆದರೆ ಈ ಮಗುವಿಗೆ ಆಗಲಿಲ್ಲ'

  ಸಿನಿಮಾಗಳಲ್ಲಿ ಖಳನಟನಾಗಿ ಅಬ್ಬರಿಸುತ್ತಿದ್ದ ಪ್ರಕಾಶ್ ರೈ ಈಗ ವೆಬ್ ಸೀರಿಸ್ ಲೋಕಕ್ಕೂ ಕಾಲಿಟ್ಟಿದ್ದಾರೆ. ಸುಶ್ಮಿತಾ ನಿರ್ಮಾಣದಲ್ಲಿ ಬರ್ತಿರುವ ವೆಬ್ ಸೀರಿಲ್ ಆಕ್ಷನ್ ಥ್ರಿಲ್ಲರ್ ಆಗಿದ್ದು ಅಪರಾಧ, ಪೋಲೀಸ್ ತನಿಖೆಯ ಹಿನ್ನಲೆಯಲ್ಲಿ ಮೂಡಿ ಬರಲಿದೆಯಂತೆ. ಖ್ಯಾತ ಖಳನಟ ಸಂಪತ್ ರಾಜ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಚಿರಂಜೀವಿ ಪುತ್ರಿ ಸುಶ್ಮಿತಾ ಗೋಲ್ಡ್ ಬಾಕ್ಸ್ ಎಂಟರ್ಟೈನ್ ಮೆಂಟ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬ್ಯಾನರ್ ನಲ್ಲಿ ಮೊದಲ ವೆಬ್ ಸೀರಿಸ್ ಸಿದ್ಧವಾಗುತ್ತಿದೆ. ಅಂದ್ಹಾಗೆ ಸಹೋದರ ರಾಮ್ ಚರಣ್ ಈಗಾಗಲೆ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದು ಸಾಕಷ್ಟು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಈಗ ಸಹೋದರಿ ಸುಶ್ಮಿತಾ ಸಹ ಅದೆ ದಾರಿಯಲ್ಲಿ ಸಾಗುತ್ತಿದ್ದಾರೆ.

  English summary
  Chiranjeevi daughter Sushmita Konidela cast Prakash Rai for in her web series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X