Waltair Veerayya OTT: 'ವಾಲ್ತೇರು ವೀರಯ್ಯ' ಓಟಿಟಿ ರಿಲೀಸ್ ಡೇಟ್, ಪ್ಲಾಟ್‌ಫಾರ್ಮ್ ಕನ್ಫರ್ಮ್
ಮೆಗಾಸ್ಟಾರ್ ಚಿರಂಜೀವಿ- ಮಾಸ್ ಮಹಾರಾಜ ರವಿತೇಜ ನಟನೆಯ 'ವಾಲ್ತೇರು ವೀರಯ್ಯ' ಡಿಜಿಟಲ್ ಸ್ಟ್ರೀಮಿಂಗ್ ಡೇಟ್ ಫಿಕ್ಸ್ ಆಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗಪ್ಪಳಿಸಿದ್ದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು.
'ಆಚಾರ್ಯ' ಸಿನಿಮಾ ಸೋಲಿನಿಂದ ಕಂಗೆಟ್ಟಿದ್ದ ಚಿರುಗೆ 'ವಾಲ್ತೇರು ವೀರಯ್ಯ' ದೊಡ್ಡ ಬ್ರೇಕ್ ಕೊಟ್ಟಿದೆ. ಬಾಬಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಸಿನಿಮಾ ತೆಲುಗು ಪ್ರೇಕ್ಷಕರ ಮನಗೆದ್ದಿತ್ತು. ಸಂಕ್ರಾಂತಿ ಸಂಭ್ರಮದಲ್ಲಿ 'ವಾಲ್ತೇರು ವೀರಯ್ಯ' ಎದುರು ಬಾಲಕೃಷ್ಣ ನಟನೆಯ 'ವೀರಸಿಂಹ ರೆಡ್ಡಿ' ಕೂಡ ತೆರೆಗಪ್ಪಳಿಸಿತ್ತು. ಎರಡೂ ಸಿನಿಮಾಗಳ ಮಧ್ಯೆ ಬಾಕ್ಸಾಫೀಸ್‌ನಲ್ಲಿ ಭಾರೀ ಫೈಟ್ ನಡೆದಿತ್ತು. ಅದರಲ್ಲಿ ಚಿರು ಸಕ್ಸಸ್ ಕಂಡು ಮೀಸೆ ತಿರುವಿದ್ದರು. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಹಬ್ಬದ ಸಂಭ್ರಮದಲ್ಲಿ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಥಿಯೇಟರ್‌ಗೆ ಬಂದ ಕಾರಣ ಸಿನಿಮಾ ಗೆಲುವಿನ ದಡ ಸೇರಿತ್ತು.
'ವಾಲ್ತೇರು ವೀರಯ್ಯ' ಸಿನಿಮಾ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಇತ್ತೀಚೆಗೆ ಭಾರೀ ಈವೆಂಟ್ ಮಾಡಿ ಪ್ರೇಕ್ಷಕರಿಗೆ ತಂಡ ಧನ್ಯವಾದ ತಿಳಿಸಿತ್ತು. ಸಿನಿಮಾ 2ನೇ ವಾರದಲ್ಲೇ 200 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಘೋಷಿಸಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಫೆಬ್ರವರಿ 27ಕ್ಕೆ 'ವಾಲ್ತೇರು ವೀರಯ್ಯ' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಚಿರು ಅಭಿಮಾನಿಗಳು ಹಾಗೂ ಇನ್ನು ಸಿನಿಮಾ ನೋಡದೇ ಇರುವವರು ಆ ದಿನಕ್ಕಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ ನೆಟ್‌ಫ್ಲಿಕ್ಸ್ ಸಂಸ್ಥೆ ಹೆಚ್ಚು ಹೆಚ್ಚು ತಮಿಳು, ತೆಲುಗು ಸಿನಿಮಾಗಳ ಡಿಜಿಟಲ್ ರೈಟ್ಸ್ ಖರೀದಿಸುತ್ತಿದೆ.

ಚಿತ್ರದಲ್ಲಿ ಚಿರು 'ವಾಲ್ತೇರು ವೀರಯ್ಯ' ಆಗಿ ಮಿಂಚಿದ್ರೆ, ಪವರ್‌ಫುಲ್ ಪೊಲೀಸ್ ಆಫೀಸರ್ ರೋಲ್‌ನಲ್ಲಿ ರವಿತೇಜಾ ಅಬ್ಬರಿಸಿದ್ದಾರೆ. 22 ವರ್ಷಗಳ ನಂತರ ಇವರಿಬ್ಬರು ಒಟ್ಟಿಗೆ ನಟಿಸಿದ್ದು ವಿಶೇಷ. ಶ್ರುತಿ ಹಾಸನ್ ನಾಯಕಿಯಾಗಿ ಚಿರಂಜೀವಿ ಜೊತೆ ಡ್ಯುಯೆಟ್ ಹಾಡಿದ್ಧಾರೆ. ಇನ್ನು ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ರು, ಕಲೆಕ್ಷನ್‌ಗೂ ರೆಸ್ಪಾನ್ಸ್‌ಗೂ ಸಂಬಂಧವೇ ಇಲ್ಲ ಎನ್ನುವಂತೆ ಬಾಕ್ಸಾಫೀಸ್‌ನಲ್ಲಿ ವೀರಯ್ಯನ ಆರ್ಭಟ ಮುಂದುವರೆದಿದೆ.

'ವಾಲ್ತೇರು ವೀರಯ್ಯ' ಲಿರಿಕಲ್ ವಿಡಿಯೋ ಸಾಂಗ್ಸ್, ಟೀಸರ್, ಟ್ರೈಲರ್ ಎಲ್ಲವೂ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಸಂಕ್ರಾಂತಿ ಹಬ್ಬದ ರಜೆ ವೀಕೆಂಡ್ ಚಿತ್ರಕ್ಕೆ ಪ್ಲಸ್ ಆಗಿತ್ತು. ಚಿರು ನಟನೆ, ರವಿತೇಜಾ ಸ್ಕ್ರೀನ್ ಪ್ರಸೆನ್ಸ್ ಪ್ರೇಕ್ಷಕರ ಮಗನ ಸೆಳೆದಿತ್ತು. ಒಟ್ಟು 232 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿರುವ ಸಿನಿಮಾ 135 ಕೋಟಿ ಶೇರ್ ತಂದು ಕೊಟ್ಟಿರುವ ಅಂದಾಜಿದೆ.


Click it and Unblock the Notifications











