For Quick Alerts
  ALLOW NOTIFICATIONS  
  For Daily Alerts

  ಮಾಡಿದ ತಪ್ಪಿನಿಂದ ಬುದ್ಧಿಕಲಿತ ಚಿರಂಜೀವಿ: ಈ ಬಾರಿ ಎಚ್ಚರಿಕೆಯ ಹೆಜ್ಜೆ

  |

  ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾದ ಧಾರುಣ ಸೋಲಿನ ನೆನಪು ಮಾಸುವ ಮುನ್ನವೇ ಅವರ ಹೊಸ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.

  ಚಿರಂಜೀವಿ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಗಾಡ್ ಫಾದರ್' ಸಿನಿಮಾ ಅಕ್ಟೋಬರ್ 05 ರಂದು ತೆರೆಗೆ ಬರುವುದು ಬಹುತೇಕ ಪಕ್ಕಾ ಆಗಿದೆ. ಆದರೆ 'ಆಚಾರ್ಯ' ಸಿನಿಮಾದಲ್ಲಿ ಮಾಡಿದ್ದ ತಪ್ಪನ್ನು 'ಗಾಡ್ ಫಾದರ್‌'ನಲ್ಲಿ ತಿದ್ದಿಕೊಂಡಿದ್ದಾರೆ ಚಿರಂಜೀವಿ!

  ತಗ್ಗೋದೆ ಇಲ್ಲ: 'ಗಾಡ್‌ಫಾದರ್' Vs 'ದಿ ಘೋಷ್ಟ್' ಫೈಟ್ ಕನ್ಫರ್ಮ್!ತಗ್ಗೋದೆ ಇಲ್ಲ: 'ಗಾಡ್‌ಫಾದರ್' Vs 'ದಿ ಘೋಷ್ಟ್' ಫೈಟ್ ಕನ್ಫರ್ಮ್!

  'ಆಚಾರ್ಯ' ಸಿನಿಮಾ ಬಿಡುಗಡೆಗೆ ಮುನ್ನ ಆ ಸಿನಿಮಾಕ್ಕೆ ಭರ್ಜರಿ ಒಟಿಟಿ ಆಫರ್ ಬಂದಿತ್ತು. ಆದರೆ ನಿರ್ಮಾಪಕರು ಸಿನಿಮಾವನ್ನು ಮಾರಾಟ ಮಾಡಲಿಲ್ಲ, ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಮಾತ್ರವೇ ಅಲ್ಲದೆ, ಚಿತ್ರಮಂದಿರದಲ್ಲಿ ಬಿಡುಗಡೆ ಆದ ಎರಡೇ ವಾರಕ್ಕೆ ಒಟಿಟಿಗೆ ಸಿನಿಮಾವನ್ನು ನೀಡುವುದಿಲ್ಲ ಎಂಬ ಹಠಕ್ಕೆ ಬಿದ್ದು ಒಟಿಟಿ ನೀಡಿದ್ದ ಎರಡೂ ಆಫರ್ ಅನ್ನು ತಿರಸ್ಕರಿಸಿದರು. ಇದರ ಹಿಂದೆ ಚಿರಂಜೀವಿ ಹಾಗೂ ರಾಮ್ ಚರಣ್ ತೇಜ ಸಲಹೆಯೂ ಕೆಲಸ ಮಾಡಿತ್ತು. ಆದರೆ ಅದರಿಂದಾಗಿಯೇ ದೊಡ್ಡ ಬೆಲೆಯನ್ನೇ ನಿರ್ಮಾಪಕರು, ಚಿರಂಜೀವಿ ಒಟ್ಟಾರೆ ಇಡೀಯ ಚಿತ್ರತಂಡ ತೆರಬೇಕಾಯ್ತು.

  ಆದರೆ 'ಗಾಡ್ ಫಾದರ್' ವಿಷಯದಲ್ಲಿ ಈಗ ಚಿತ್ರತಂಡ ಮುಂಜಾಗೃತೆ ವಹಿಸಿದ್ದು, ಸ್ವತಃ ಚಿರಂಜೀವಿಯವರೇ ಮುಂದೆ ನಿಂತು ಸಿನಿಮಾ ಬಿಡುಗಡೆ ಆಗುವ ಮುನ್ನವೇ ಒಟಿಟಿ ಜೊತೆ ದೊಡ್ಡ ಮೊತ್ತಕ್ಕೆ ಡೀಲ್ ಫೈನಲ್‌ ಮಾಡಿಕೊಂಡಿದ್ದಾರೆ.

  'ಗಾಡ್ ಫಾದರ್' ಸಿನಿಮಾದ ಡಿಜಿಟಲ್ ಪ್ರಸಾರ ಹಕ್ಕನ್ನು ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ ಭಾರಿ ಮೊತ್ತಕ್ಕೆ ಖರೀದಿ ಮಾಡಿದೆ. ನಯನತಾರಾ, ಸುನಿಲ್ ಅಂಥಹಾ ಸ್ಟಾರ್‌ಗಳ ಜೊತೆ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿರುವ 'ಗಾಡ್ ಫಾದರ್' ಸಿನಿಮಾದ ತಾರಾ ಮೌಲ್ಯ ಹೆಚ್ಚಿರುವ ಕಾರಣ 57 ಕೋಟಿಯ ದೊಡ್ಡ ಮೊತ್ತ ನೀಡಿ ನೆಟ್‌ಫ್ಲಿಕ್ಸ್‌ 'ಗಾಡ್ ಫಾದರ್' ಸಿನಿಮಾದ ಡಿಜಿಟಲ್ ಹಕ್ಕು ಖರೀದಿಸಿದೆ. ಚಿರಂಜೀವಿ ನಟನೆಯ ಇನ್ಯಾವ ಸಿನಿಮಾದ ಡಿಜಿಟಲ್ ಹಕ್ಕಿಗೂ ಇಷ್ಟು ದೊಡ್ಡ ಮೊತ್ತವನ್ನು ನೀಡಲಾಗಿಲ್ಲ.

  ಡಿಜಿಟಲ್ ಹಕ್ಕುಗಳು ಮಾತ್ರವೇ ಅಲ್ಲದೆ ಸಿನಿಮಾದ ಆಡಿಯೋ ಹಕ್ಕು ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಸಹ ದೊಡ್ಡ ಮೊತ್ತಕ್ಕೆ ಚಿತ್ರತಂಡ ಮಾರಾಟ ಮಾಡಿದೆ. ಸಿನಿಮಾದ ಪ್ರೀ ರಿಲೀಸ್ ಬ್ಯುಸಿನಿಸ್‌ನಿಂದಲೇ ಸಿನಿಮಾದ ಒಟ್ಟಾರೆ ಬಜೆಟ್‌ನ ಶೇ 80 ರಷ್ಟು ಮರಳಿ ಪಡೆಯಲಾಗಿದೆ. ಇನ್ನುಳಿದ 20% ಪರ್ಸೆಂಟ್ ಹಣ ಸಿನಿಮಾ ಬಿಡುಗಡೆ ಆದ ಮೊದಲೆರಡು ದಿನಗಳಲ್ಲೇ ಮರಳುವ ನಿರೀಕ್ಷೆ ಚಿತ್ರತಂಡಕ್ಕಿದೆ.

  ಸಿನಿಮಾವನ್ನು ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಹಾಗೂ ಆರ್‌ಬಿ ಚೌಧರಿ ಜಂಟಿಯಾಗಿ ನಿರ್ಮಾಣ ಮಾಡಿದ್ದು, 'ಆಚಾರ್ಯ' ಸಿನಿಮಾದಿಂದ ಆಗಿರುವ ನಷ್ಟವನ್ನು ಪೂರ್ಣವಾಗಿ ತುಂಬಿಕೊಳ್ಳಲು ಸೂಕ್ತ ಯೋಜನೆ ಮಾಡಲಾಗಿದೆ.

  'ಗಾಡ್ ಫಾದರ್' ಸಿನಿಮಾವು ಮಲಯಾಳಂನ 'ಲುಸಿಫರ್' ಸಿನಿಮಾದ ರೀಮೇಕ್ ಆಗಿದೆ. ಮೂಲ ಸಿನಿಮಾದಲ್ಲಿ ಮೋಹನ್‌ಲಾಲ್ ನಟಿಸಿದ್ದ ಪಾತ್ರದಲ್ಲಿ 'ಗಾಡ್ ಫಾದರ್'ನಲ್ಲಿ ಚಿರಂಜೀವಿ ನಟಿಸಿದ್ದಾರೆ. ಪೃಥ್ವಿರಾಜ್ ಸುಕುಮಾರ್ ನಟಿಸಿದ್ದ ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದ್ದಾರೆ. ಸಲ್ಮಾನ್ ಖಾನ್ ಹಾಗೂ ಚಿರಂಜೀವಿ ನಟಿಸಿರುವ ಹಾಡೊಂದನ್ನು ಈಗಾಗಲೇ ಚಿತ್ರತಂಡ ಬಿಡುಗಡೆ ಮಾಡಿದ್ದು, ಹಾಡು ಹಿಟ್ ಆಗಿದೆ. ಸಿನಿಮಾವು ಅಕ್ಟೋಬರ್ 05 ರಂದು ತೆರೆಗೆ ಬರುತ್ತಿದೆ. ಅದೇ ದಿನ ಚಿರಂಜೀವಿನ ಆಪ್ತ ಗೆಳೆಯ ನಾಗಾರ್ಜುನ ನಟನೆಯ 'ದಿ ಗೋಸ್ಟ್' ಸಿನಿಮಾ ಸಹ ತೆರೆಗೆ ಬರುತ್ತಿದೆ. ಯಾವ ಸಿನಿಮಾ ಗೆಲ್ಲುತ್ತದೆ ಕಾದು ನೋಡಬೇಕಿದೆ.

  English summary
  Chiranjeevi's upcoming movie God Father's OTT rights sold for huge amount. Netflix purchased God Father by paying 57 crore rs.
  Tuesday, September 20, 2022, 16:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X