For Quick Alerts
  ALLOW NOTIFICATIONS  
  For Daily Alerts

  ಗಾಡ್ ಫಾದರ್ ಓಟಿಟಿ ಹಕ್ಕು ಮಾರಾಟ: ಮಹೇಶ್ ಬಾಬು ದಾಖಲೆ ಮುರಿದುಹಾಕಿದ ಚಿರಂಜೀವಿ

  |

  ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಮುಂದಿನ ಚಿತ್ರ ಗಾಡ್‌ಫಾದರ್ ಇದೇ ದಸರಾ ಪ್ರಯುಕ್ತ ತೆರೆಗೆ ಅಪ್ಪಳಿಸಲು ತಯಾರಾಗಿದೆ. ಮಲಯಾಳಂನ ಬ್ಲಾಕ್‌ಬಸ್ಟರ್ ಸಿನಿಮಾ ಲೂಸಿಫರ್‌ನ ರಿಮೇಕ್ ಆಗಿರುವ ಈ ಚಿತ್ರ ಅಕ್ಟೋಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಲೂಸಿಫರ್ ಕೇವಲ ಮಲಯಾಳಂನಲ್ಲಿ ಮಾತ್ರವೇ ಬಿಡುಗಡೆಯಾಗಿದ್ದನ್ನು ಗಮನದಲ್ಲಿಟ್ಟುಕೊಂಡು ಗಾಡ್ ಫಾದರ್ ಸಿನಿಮಾವನ್ನು ಹಿಂದಿ ಮಾರುಕಟ್ಟೆಗೂ ಕೊಂಡೊಯ್ದಿದೆ ಚಿತ್ರತಂಡ.

  ಹೀಗಾಗಿ ಈ ಚಿತ್ರ ದೊಡ್ಡ ಬ್ಯುಸಿನೆಸ್ ಮಾಡುವುದು ಖಚಿತವಾಗಿದ್ದು, ಸದ್ಯ ಇದೀಗ ಹೊರ ಬಿದ್ದಿರುವ ಸುದ್ದಿಯ ಪ್ರಕಾರ ಗಾಡ್‌ ಫಾದರ್ ತೆಲುಗು ಹಾಗೂ ಹಿಂದಿ ಎರಡೂ ಭಾಷೆಯ ಡಿಜಿಟಲ್ ಹಕ್ಕನ್ನು ನೆಟ್ ಫ್ಲಿಕ್ಸ್ ಬರೋಬ್ಬರಿ 57 ಕೋಟಿಗೆ ಖರೀದಿಸಿದೆ ಎನ್ನಲಾಗಿದೆ. ಈ ಹಿಂದೆ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಚಿತ್ರ 35 ಕೋಟಿಗೆ ಮಾರಾಟವಾಗುವ ಮೂಲಕ ಅತಿಹೆಚ್ಚು ಮೊತ್ತಕ್ಕೆ ಡಿಜಿಟಲ್ ಹಕ್ಕು ಮಾರಾಟವಾದ ತೆಲುಗು ಚಿತ್ರ ( ಪ್ಯಾನ್ ಇಂಡಿಯಾವಲ್ಲದ ) ಎನಿಸಿಕೊಂಡಿತ್ತು.

  ಸದ್ಯ ಗಾಡ್ ಫಾದರ್ ಚಿತ್ರದ ಡಿಜಿಟಲ್ ಹಕ್ಕು 57 ಕೋಟಿಗೆ ಮಾರಾಟವಾಗುವ ಮೂಲಕ ಮಹೇಶ್ ಬಾಬು ಅವರ ಸರ್ಕಾರು ವಾರಿ ಪಾಟದ ದಾಖಲೆಯನ್ನು ಹಿಂದಿಕ್ಕಿದೆ. ಆದರೆ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಚಿತ್ರದ ಹಕ್ಕು ಕೇವಲ ತೆಲುಗು ಚಿತ್ರದ್ದಾಗಿತ್ತು ಹಾಗೂ ಗಾಡ್ ಫಾದರ್ ಚಿತ್ರದ ಡಿಜಿಟಲ್ ಹಕ್ಕು ತೆಲುಗು ಹಾಗೂ ಹಿಂದಿ ಎರಡೂ ಭಾಷೆಯನ್ನೂ ಒಳಗೊಂಡಿದೆ.

  ಇನ್ನು ಗಾಡ್ ಫಾದರ್ ಚಿತ್ರ ಒಂದು ಪೊಲಿಟಿಕಲ್ ಡ್ರಾಮಾ ಕೆಟಗರಿಯ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ಚಿರಂಜೀವಿ ಜತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ವಿವಾಹವಾದ ನಂತರ ಇದೇ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

  English summary
  Chiranjeevi starrer Godfather breaks Mahesh Babu's Sarkaru Vaari Paata ott rights record. Read on.
  Tuesday, September 20, 2022, 16:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X