ತಿಂಗಳಿಗೂ ಮೊದ್ಲೆ ಓಟಿಟಿಗೆ 'ಪೊನ್ನಿಯಿನ್ ಸೆಲ್ವನ್- 2'? ಟ್ವಿಸ್ಟ್ ಏನಪ್ಪಾ ಅಂದ್ರೆ?

ಮಣಿರತ್ನಂ ನಿರ್ದೇಶನದ ಐತಿಹಾಸಿಕ ಕಥಾಹಂದರ 'ಪೊನ್ನಿಯಿನ್ ಸೆಲ್ವನ್- 2' ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಮೊದಲ ಭಾಗಕ್ಕಿಂತ ಎರಡನೇ ಭಾಗಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಧೂಳೆಬ್ಬಿಸಿತ್ತು. ಮಣಿರತ್ನಂ ಪ್ರತಿಭೆಗೆ ಮತ್ತೊಮ್ಮೆ ಬಹುಪರಾಕ್ ಹೇಳಿದ್ದಾರೆ. ಇದೀಗ ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಚರ್ಚೆ ಶುರುವಾಗಿದೆ.

ಏಪ್ರಿಲ್ 28ಕ್ಕೆ 'ಪೊನ್ನಿಯಿನ್ ಸೆಲ್ವನ್- 2' ಸಿನಿಮಾ ಬಿಡುಗಡೆ ಆಗಿತ್ತು. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಜೊತೆ ಸೇರಿ ಸ್ವತಃ ಮಣಿರತ್ನಂ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಬರೆದ ಕಾದಂಬರಿ ಆಧರಿಸಿ ಆಧರಿಸಿ ಸಿನಿಮಾ ಕಟ್ಟಿಕೊಡಲಾಗಿದೆ. ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡದೇ ಇದ್ದರೂ ಎರಡು ಭಾಗಗಳಾಗಿ ಬಂದ ಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿತ್ತು. ಮೊದಲ ಭಾಗ ಕಳೆದ ವರ್ಷ ಸೆಪ್ಟೆಂಬರ್ 30ರಂದು ರಿಲೀಸ್ ಆಗಿತ್ತು.

Chiyaan Vikram, Aishwarya Rai starrer Ponniyin selvan - 2 gets OTT release date

6 ತಿಂಗಳ ಅಂತರದಲ್ಲಿ ಇಷ್ಟು ದೊಡ್ಡ ಚಿತ್ರವನ್ನು ಎರಡು ಭಾಗಗಳಾಗಿ ಕಟ್ಟಿಕೊಟ್ಟು ಮಣಿರತ್ನಂ ಅಂಡ್ ಟೀಂ ಸಕ್ಸಸ್ ಕಂಡಿದೆ. ಚಿಯಾನ್ ವಿಕ್ರಂ, ಐಶ್ವರ್ಯ ರೈ, ಕಾರ್ತಿ, ಜಯಂ ರವಿ, ತ್ರಿಷಾ, ಪ್ರಕಾಶ್ ರೈ, ಕಿಶೋರ್‌ರಂತಹ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಎ. ಆರ್ ರಹಮಾನ್ ಸಂಗೀತ ಚಿತ್ರದಲ್ಲಿ ಮತ್ತೊಂದು ಪ್ಲಸ್ ಪಾಯಿಂಟ್. ಚೋಳರು- ಪಾಂಡ್ಯರ ಆಂತರಿಕ ಸಂಘರ್ಷ, ಆಸೆ, ದುರಾಸೆ, ಸೇಡು, ಅಧಿಕಾರ ದಾಹದ ಕಥೆ ಚಿತ್ರದಲ್ಲಿದೆ.

ಮೇ 26ಕ್ಕೆ ಓಟಿಟಿಗೆ ಸಿನಿಮಾ

ಏಪ್ರಿಲ್ 28ಕ್ಕೆ ರಿಲೀಸ್ ಆಗಿದ್ದ ಸಿನಿಮಾ ಮೇ 26ಕ್ಕೆ ಅಮೇಜಾನ್ ಪ್ರೈಮ್‌ಗೆ ಬರುತ್ತೆ ಎನ್ನಲಾಗ್ತಿದೆ. 'ಪೊನ್ನಿಯಿನ್ ಸೆಲ್ವನ್' ಮೊದಲ ಭಾಗ 33 ದಿನಗಳ ನಂತರ ಸ್ಮಾಲ್‌ ಸ್ಕ್ರೀನ್‌ಗೆ ಬಂದಿತ್ತು. ಸೆಪ್ಟೆಂಬರ್ 30ರಂದು ರಿಲೀಸ್ ಆಗಿದ್ದ ಸಿನಿಮಾ ನವೆಂಬರ್ 3ಕ್ಕೆ ಓಟಿಟಿಗೆ ಬಂದಿತ್ತು. ಆದರೆ ಅದಕ್ಕಿಂತ ಮುನ್ನ ಎರಡನೇ ಭಾಗ ಬರ್ತಿದೆ. ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ.

Chiyaan Vikram, Aishwarya Rai starrer Ponniyin selvan - 2 gets OTT release date

ಮೊದಲು ಬಾಡಿಗೆ ಪ್ರದರ್ಶನ

ಅಂದ ಹಾಗೆ ಮೇ 26ರಂದು ಎಲ್ಲಾ ಅಮೇಜಾನ್ ಚಂದಾದಾರರು ಸಿನಿಮಾ ನೋಡಲು ಸಿಗುವುದಿಲ್ಲ. ಒಂದು ವಾರದ ಮಟ್ಟಿಗೆ ಬಾಡಿಗೆ ಆಧಾರದಲ್ಲಿ ಹಣ ತೆತ್ತು ಸಿನಿಮಾ ವೀಕ್ಷಿಸಬಹುದು. ಜೂನ್ 3ರ ನಂತರ ಎಲ್ಲರಿಗೂ ಸಿನಿಮಾ ನೋಡುವ ಅವಕಾಶ ಸಿಗುವ ಸಾಧ್ಯತೆಯಿದೆ. ಸರಣಿಯ ಮೊದಲ ಚಿತ್ರವನ್ನು ಕೂಡ ಇದೇ ರೀತಿ ಓಟಿಟಿಗೆ ತರಲಾಗಿತ್ತು. ಒಂದು ವಾರದ ಮಟ್ಟಿಗೆ ಚಂದಾದಾರರು 199 ರೂ. ನೀಡಿ ಸಿನಿಮಾ ನೋಡಿದ್ದರು.

'ಪೊನ್ನಿಯಿನ್ ಸೆಲ್ವನ್- 2' ಕಲೆಕ್ಷನ್

ಬಹುಕೋಟಿ ವೆಚ್ಚದ ಕಾಸ್ಟ್ಯೂಮ್ ಡ್ರಾಮಾ ನಿನ್ನೆಯಷ್ಟೆ(ಮೇ 22) 25 ದಿನ ಪೂರೈಸಿದೆ. ಸಿನಿಮಾ ಕಲೆಕ್ಷನ್ 300 ಕೋಟಿ ರೂ. ದಾಟಿದೆ. ಸಾಮಾನ್ಯವಾಗಿ ಮೊದಲ ಭಾಗಕ್ಕಿಂತ ಎರಡನೇ ಭಾಗ ಒಳ್ಳೆ ಕಲೆಕ್ಷನ್ ಮಾಡಬೇಕಿತ್ತು. ಹಿಂದಿನ ಸಿನಿಮಾ 500 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಹೇಳಿತ್ತು. ಆದರೆ ಸೀಕ್ವೆಲ್ ಕಲೆಕ್ಷನ್ ಬಗ್ಗೆ ಆರಂಭದಲ್ಲಿ ಮಾಹಿತಿ ನೀಡಿದ ಚಿತ್ರತಂಡ ನಂತರ ಸೈಲೆಂಟ್ ಆಗಿದೆ. ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಗಳಿಕೆ ಕಂಡಿಲ್ಲ ಅನ್ನೋದು ಕನ್ಫರ್ಮ್ ಆಗ್ತಿದೆ.

ಓಟಿಟಿಗೆ ಬರೋಕು ಮೊದ್ಲೆ ಲೀಕ್

ಚಿತ್ರರಂಗಕ್ಕೆ ಪೈರಸಿ ಭೂತ ಬೆಂಬಿಡದೇ ಕಾಡುತ್ತಿದೆ. ಯಾವುದೇ ಸಿನಿಮಾ ರಿಲೀಸ್ ಆಗ್ತಿದ್ದಂತೆ ಆನ್‌ಲೈನ್‌ನಲ್ಲಿ ಲೀಕ್ ಆಗ್ತಿದೆ. 'ಪೊನ್ನಿಯಿನ್ ಸೆಲ್ವನ್- 2' ಸಿನಿಮಾ ವಿಚಾರದಲ್ಲೂ ಹೀಗೆ ಆಗಿದೆ. ಈಗಾಗಲೇ ಸಂಪೂರ್ಣ ಸಿನಿಮಾ ಲೀಕ್ ಆಗಿ ವೈರಲ್ ಆಗ್ತಿದೆ. ಹಾಗಾಗಿ ಸಹಜವಾಗಿಯೇ ಚಂದಾದಾರರು 200 ರೂ. ವ್ಯಯಿಸಿ ಸಿನಿಮಾ ನೋಡುವ ಸಾಧ್ಯತೆ ಕಮ್ಮಿಯಿದೆ.

More from Filmibeat

English summary
Chiyaan Vikram, Aishwarya Rai starrer Ponniyin selvan - 2 gets OTT release date. PS2 released in theatres on April 28. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X