Choo Mantar OTT: ವರ್ಷದ ಮೊದಲ ಹಿಟ್ 'ಛೂ ಮಂತರ್' ಓಟಿಟಿ ರಿಲೀಸ್ ಯಾವಾಗ?

ನೋಡ್ತಾ ನೋಡ್ತಾ ಹೊಸ ವರ್ಷದ ಒಂದೂವರೆ ತಿಂಗಳು ಕಳೆದು ಹೋಯ್ತು. ಈ ವರ್ಷ ಕನ್ನಡ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡಿಲ್ಲ. 'ಟಾಕ್ಸಿಕ್' ಹಾಗೂ 'ಕಾಂತಾರ- 1' ಬಿಟ್ಟರೆ ಯಾವುದೇ ದೊಡ್ಡ ಸಿನಿಮಾ ಹೆಚ್ಚು ನಿರೀಕ್ಷೆ ಮೂಡಿಸಿಲ್ಲ. ಇತ್ತ ಓಟಿಟಿಯಲ್ಲಿ ಕನ್ನಡ ಸಿನಿಮಾಗಳ ಅಭಾವ ಎದ್ದು ಕಾಣುತ್ತಿದೆ.

ಅದ್ಯಾಕೋ ಮೊದಲಿನಿಂದಲೂ ಓಟಿಟಿಯಲ್ಲಿ ಕನ್ನಡ ಸಿನಿಮಾಗಳನ್ನು ಕೊಳ್ಳುವವರೇ ಇಲ್ಲ. ದೊಡ್ಡ ಸಿನಿಮಾಗಳಿಗೆ ಮಾತ್ರ ಮೊದಲ ಆದ್ಯತೆ ಎನ್ನುವಂತಾಗಿದೆ. ಸಣ್ಣ ಸಿನಿಮಾಗಳು ಗೆದ್ದರೂ ಬಹಳ ಚೌಕಾಸಿ ಮಾಡುತ್ತಾರೆ. ಹಾಗಾಗಿ ಕನ್ನಡಿಗರಿಗೆ ಓಟಿಟಿಯಲ್ಲಿ ಮನರಂಜನೆ ಕಮ್ಮಿ ಎನ್ನುವಂತಾಗಿದೆ. ಕನ್ನಡ ವೆಬ್ ಸೀರಿಸ್‌ಗಳಂತೂ ಬರೋದು ಇಲ್ಲ. ಈ ವರ್ಷ ಒಂದೆರಡು ಸಿನಿಮಾ ನಿರೀಕ್ಷೆ ಹುಸಿ ಮಾಡಿದ್ದು ಸುಳ್ಳಲ್ಲ. ಆದರೆ 'ಛೂ ಮಂತರ್' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವೆರೆದಿದೆ.

Choo Mantar On OTT Sharan s horror comedy film To Stream Soon Producer Clarifies

'ಕರ್ವ' ಸಿನಿಮಾ ಖ್ಯಾತಿಯ ನವನೀತ್ ಕಥೆ ಚಿತ್ರಕಥೆ ಬರೆದು ನಿರ್ದೇಶಿಸಿದ್ದ ಹಾರರ್ ಕಾಮಿಡಿ ಚಿತ್ರ 'ಛೂ ಮಂತರ್'. ಸಂಕ್ರಾಂತಿ ಸಂಭ್ರಮದಲ್ಲಿ ಬಂದಿದ್ದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಆದರೂ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲಿಲ್ಲ. ಒಟ್ಟಾರೆ ವರ್ಷದ ಮೊದಲ ಹಿಟ್ ಎನಿಸಿಕೊಂಡಿದೆ.

ಶರಣ್, ಅದಿತಿ ಪ್ರಭುದೇವ, ಚಿಕ್ಕಣ್ಣ, ಮೇಘನಾ ಗಾಂವ್ಕರ್, ಪ್ರಭು ಮುಂಡ್ಕರ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಮಿಂಚಿದ್ದಾರೆ. ಅನೂಪ್ ಛಾಯಾಗ್ರಹಣ, ಅವಿನಾಶ್ ಸಂಗೀತ ಚಿತ್ರಕ್ಕಿದೆ. ಜನವರಿ 10ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಇನ್ನು ಓಟಿಟಿಗೆ ಬಂದಿಲ್ಲ. ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ ಸಿನಿಮಾ ಕಾರಣಾಂತರಗಳಿಂದ ತಡವಾಗಿತ್ತು. ಲೇಟ್ ಆಗಿ ಬಂದರೂ ಪ್ರೇಕ್ಷಕರನ್ನು ರಂಜಿಸಿತ್ತು. ಸಾಕಷ್ಟು ಮಂದಿ ಓಟಿಟಿಯಲ್ಲಿ ಸಿನಿಮಾ ವೀಕ್ಷಿಸಲು ಕಾಯುತ್ತಿದ್ದಾರೆ.

'ಛೂ ಮಂತರ್' ಸಿನಿಮಾ ಈಗಾಗಲೇ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಕೆಲವು ಕಡೆ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದಷ್ಟು ಬೇಗ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಇದೀಗ ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ನಿರ್ಮಾಪಕ ತರುಣ್ ಶಿವಪ್ಪ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. ಸದ್ಯಕ್ಕೆ ಸಿನಿಮಾ ಓಟಿಟಿಗೆ ಬರಲ್ಲ. 6ನೇ ವಾರವೂ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ. 50 ದಿನ ಪೂರೈಸಿದ ಬಳಿಕವೇ ಡಿಜಿಟಲ್ ಎಂಟ್ರಿ ಆಗುತ್ತದೆ ಎಂದು ಹೇಳಿದ್ದಾರೆ. ಓಟಿಟಿ ರೈಟ್ಸ್ ಸಹ ಮಾರಾಟವಾಗಿಲ್ಲ. ಇನ್ನು ಈ ಬಗ್ಗೆ ಚರ್ಚೆ ನಡೀತಿದೆ ಎಂದಿದ್ದಾರೆ.

Choo Mantar On OTT Sharan s horror comedy film To Stream Soon Producer Clarifies

ಬಹುತೇಕ ಹಾರರ್ ಸಿನಿಮಾಗಳ ರೀತಿಯ ಕಥೆ 'ಛೂ ಮಂತರ್' ಚಿತ್ರದಲ್ಲೂ ಇದೆ. ಒಂದು ಬಂಗಲೆ, ಅಲ್ಲಿ ಭೂತ ಪ್ರೇತಗಳ ಹಾವಳಿ ಇದೆ ಎನ್ನುವ ವಿಚಾರ ಗೊತ್ತಾಗಿ ನಾಯಕ ಹೋಗುವುದು, ಅದನ್ನು ಭೇದಿಸುವುದು ಈ ಚಿತ್ರದ ಒನ್‌ಲೈನ್ ಸ್ಟೋರಿ. ಆದರೆ ಅದನ್ನು ಬಹಳ ಸೊಗಸಾಗಿ ತೆರೆಗೆ ತಂದಿದ್ದಾರೆ ನವನೀತ್. ಇನ್ನು ಶರಣ್ ಹಾಗೂ ಚಿಕ್ಕಣ್ಣ ಕಾಮಿಡಿ ಕಿಕ್ ಮತ್ತಷ್ಟು ಮಜಾ ಕೊಡುತ್ತದೆ.

ಉತ್ತರಾಖಂಡದ ನೈನಿತಾಲ್‌ನಲ್ಲಿರುವ ಮಾರ್ಗನ್ ಹೌಸ್ ಸುತ್ತಾ ಚಿತ್ರದ ಕಥೆ ಸಾಗುತ್ತದೆ. ಆ ಬಂಗಲೆಯಲ್ಲಿರುವ ಭೂತ ಪ್ರೇತಗಳನ್ನು ಡೈನಾಮೊ(ಶರಣ್) ಅಂಡ್ ಟೀಂ ಹೇಗೆ ಓಡಿಸುತ್ತದೆ ಎನ್ನುವುದು ಚಿತ್ರದ ತಿರುಳು. ಡೈನಾಮೊ ಯಾರು? ಆತನ 'ಛೂ ಮಂತರ್' ಘೋಸ್ಟ್ ಹಂಟರ್ ಕಂಪನಿ ಕಥೆ ಏನು? ಮಾರ್ಗನ್ ಹೌಸ್‌ಗೂ ಲಂಡನ್‌ನ ವಿಕ್ಟರ್ ಡಿ ಕೋಸ್ಟಾ ಏನು ಸಂಬಂಧ? ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಮಾರ್ಚ್ 15ರ ಬಳಿಕ ಸಿನಿಮಾ ಓಟಿಟಿಗೆ ಬರುವ ಸಾಧ್ಯತೆಯಿದೆ.

'ಗುರು ಶಿಷ್ಯರು' ಬಳಿಕ ನಟ ಶರಣ್‌ಗೆ 'ಛೂ ಮಂತರ್' ಸಿನಿಮಾ ಮತ್ತೊಂದು ಬ್ರೇಕ್ ಕೊಟ್ಟಿದೆ. ನಿರ್ದೇಶಕ ಓಂ ಪ್ರಕಾಶ್ ರಾವ್, ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಪ್ರಥಮ್ ಕೂಡ ಸಣ್ಣ ಸಣ್ಣ ಪಾತ್ರಗಳಲ್ಲಿ ರಂಜಿಸುತ್ತಾರೆ. ಸ್ಟಂಟ್ ಮಾಸ್ಟರ್ ರವಿವರ್ಮಾ ಗಂಭೀರ ಪಾತ್ರದಲ್ಲಿ ಹುಬ್ಬೇರಿಸುತ್ತಾರೆ.

More from Filmibeat

English summary
Producer gives an interesting upate on Choo Mantar On OTT release date;
Read more about: filmibeat original sharan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X