Netflix Vs Amazon prime: ಒಂದೇ ದಿನ ಸಾವಿರಾರು ಕೋಟಿ ಡೀಲ್; ದೊಡ್ಡ ಚಿತ್ರಗಳೆಲ್ಲಾ ಪ್ರೈಂ ಬುಟ್ಟಿಗೆ
ಒಂದ್ಕಾಲದಲ್ಲಿ ಜನ ಸಿನಿಮಾ ನೋಡಬೇಕು ಅಂದ್ರೆ ಚಿತ್ರಮಂದಿರಕ್ಕೆ ಹೋಗಬೇಕಿತ್ತು. ಬಳಿಕ ಮನೆ ಮನೆಗೂ ಟಿವಿಗಳು ಬಂದವು. ದೊಡ್ಡಪರದೆಯಲ್ಲಿ ನೋಡಿದ ಸಿನಿಮಾಗಳನ್ನು ಸಣ್ಣ ಪರದೆಗಳಲ್ಲಿ ನೋಡುವ ಅವಕಾಶ ಸಿಕ್ಕಿತ್ತು. ಬಳಿಕ ಬರೀ ಸಿನಿಮಾಗಳನ್ನೇ ಪ್ರದರ್ಶಿಸುವ ವಾಹಿನಿಗಳು ಬಂದವು. ಈಗ ಓಟಿಟಿ ಜಮಾನ.
ಹೌದು. ಚಿತ್ರಮಂದಿರಗಳಲ್ಲಿ ತೆರೆಕಂಡ ಸಿನಿಮಾಗಳು ಟಿವಿಗೂ ಮುನ್ನ ಓಟಿಟಿಗೆ ಬರ್ತಿವೆ. ಜೊತೆಗೆ ವೆಬ್ ಸೀರಿಸ್‌ಗಳು ನಿರ್ಮಾಣವಾಗಿ ಸ್ಟ್ರೀಮಿಂಗ್ ಆಗುತ್ತಿದೆ. ಕೆಲ ಸಿನಿಮಾಗಳನ್ನು ಓಟಿಟಿಗೆ ಅಂತ್ಲೇ ಚಿತ್ರಿಸಿ ಕೊಡಲಾಗುತ್ತಿದೆ. ಜನ ವಿವಿಧ ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರರಾಗಿ ತಮಗಿಷ್ಟವಾದ ಜಾಗದಲ್ಲಿ ತಮಗಿಷ್ಟ ಬಂದ ಸಮಯದಲ್ಲಿ ಸಿನಿಮಾ, ವೆಬ್ ಸೀರಿಸ್ ವೀಕ್ಷಿಸುವ ಅವಕಾಶ ಲಭಿಸುತ್ತಿದೆ.

ಭಾರತದಲ್ಲಿ ಐದಾರು ದೊಡ್ಡ ಓಟಿಟಿ ಸಂಸ್ಥೆ ಫ್ಲಾಟ್‌ಪಾರ್ಮ್‌ಗಳಿವೆ. ಅದರಲ್ಲಿ ಅಮೇಜಾನ್ ಪ್ರೈಂ, ನೆಟ್‌ಫ್ಲಿಕ್ಸ್, ಹಾಟ್‌ಸ್ಟರ್, ಜೀ5 ಬಹಳ ಜನಪ್ರಿಯವಾಗಿವೆ. ಹೆಚ್ಚು ಚಂದಾದಾರರನ್ನು ಹೊಂದಿವೆ. ದೊಡ್ಡ ದೊಡ್ಡ ಸಿನಿಮಾ, ವೆಬ್ ಸೀರಿಸ್ ರೈಟ್ಸ್ ಕೊಂಡುಕೊಂಡು ಸ್ಟ್ರೀಮಿಂಗ್ ಮಾಡುತ್ತಾ ಬರುತ್ತಿವೆ. ಇತ್ತೀಚೆಗೆ ನೆಟ್‌ಫ್ಲಿಕ್ಸ್ ದಕ್ಷಿಣದ ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳ ರೈಟ್ಸ್ ಕೊಂಡುಕೊಂಡಿತ್ತು.
ನೆಟ್‌ಫ್ಲಿಕ್ಸ್‌ಗೆ ಈಗ ಅಮೇಜಾನ್ ಪ್ರೈಂಗೆ ಟಕ್ಕರ್ ಕೊಟ್ಟಿದೆ. ಇನ್ನೆರಡು ವರ್ಷಗಳಲ್ಲಿ ನಿರ್ಮಾಣವಾಗುವ ದೊಡ್ಡ ಸೌತ್ ಹಾಗೂ ಬಾಲಿವುಡ್ ಸಿನಿಮಾಗಳ ಪೋಸ್ಟ್ ಥ್ರಿಯೇಟ್ರಿಕಲ್ ಓಟಿಟಿ ಸ್ಟ್ರೀಮಿಂಗ್ ರೈಟ್ಸ್ ಕೊಂಡುಕೊಂಡಿದೆ. ಬಹಳ ದೊಡ್ಡಮಟ್ಟದಲ್ಲಿ ಈವೆಂಟ್ ನಡೆಸಿ ಈ ಬಗ್ಗೆ ಮಾಹಿತಿ ನೀಡಿದೆ. ಈ ಈವೆಂಟ್‌ನಲ್ಲಿ ರಿಷಬ್ ಶೆಟ್ಟಿ, ವಿಜಯ್ ದೇವರಕೊಂಡ, ಸೂರ್ಯ, ಪೂಜಾ ಹೆಗ್ಡೆ, ಟೈಗರ್ ಶ್ರಾಫ್, ರಾಣಾ ದಗ್ಗುಬಾಟಿ, ಸಮಂತಾ ಸೇರಿದಂತೆ ಹಲವರು ಭಾಗಿ ಆಗಿದ್ದರು.
ಕನ್ನಡ, ತೆಲುಗು, ತಮಿಳು ಹಾಗೂ ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾಗಳ ಡಿಜಿಟಲ್ ರೈಟ್ಸ್ ಅನ್ನು ಅಮೇಜಾನ್ ಪ್ರೈಂ ಖರೀದಿಸಿದೆ. ಇದಕ್ಕಾಗಿ ಕೋಟ್ಯಾಂತರ ರೂಪಾಯಿ ಡೀಲ್ ನಡೆದಿದೆ. ಇನ್ನು ಸಾಕಷ್ಟು ವೆಬ್ ಸೀರಿಸ್‌ಗಳನ್ನು ಈ ವರ್ಷ ಬಿಡುಗಡೆ ಮಾಡುವುದಾಗಿ ಸಂಸ್ಥೆ ಘೋಷಿಸಿದೆ. ಸೌತ್ ಸಿನಿಮಾಗಳ ವಿಚಾರಕ್ಕೆ ಬಂದರೆ 'ಕಾಂತಾರ' ಚಾಪ್ಟರ್-1 ರೈಟ್ಸ್ ಕೂಡ ಪ್ರೈಂ ವಿಡಿಯೋ ಪಾಲಾಗಿದೆ.

40 ಓರಿಜಿನಲ್ ಸಿನಿಮಾ ಹಾಗೂ ವೆಬ್ ಸೀರಿಸ್ ಜೊತೆಗೆ 29 ಸಿನಿಮಾಗಳ ಪೋಸ್ಟ್ ಥ್ರಿಯೇಟ್ರಿಕಲ್ ರೈಟ್ಸ್ ಅಮೇಜಾನ್ ಕೊಂಡುಕೊಂಡಿದೆ. ಆ ಮೂಲಕ ಡಿಜಿಟಲ್ ಸ್ಟ್ರೀಮಿಂಗ್ ಫ್ಲಾಟ್‌ಪಾರ್ಮ್‌ನಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಆ ಮೂಲಕ ಅಮೇಜಾನ್ ಪ್ರೈಂ ಮುಂದಿನ 2 ವರ್ಷ ತನ್ನ ಚಂದಾದಾರರಿಗೆ ಭರ್ಜರಿ ಮನರಂಜನೆಯನ್ನು ಹೊತ್ತು ತರುತ್ತಿದೆ.
ತೆಲುಗಿನಲ್ಲಿ ರಾಮ್‌ಚರಣ್ ನಟನೆಯ 'ಗೇಮ್ ಚೇಂಜರ್', ಪವನ್ ಕಲ್ಯಾಣ್ ಅಭಿನಯದ 'ಉಸ್ತಾದ್ ಭಗತ್‌ಸಿಂಗ್' ಹಾಗೂ ಹರಿಹರ ವೀರಮಲ್ಲು, ವಿಜಯ್ ದೇರವಕೊಂಡ 'ಫ್ಯಾಮಿಲಿಸ್ಟಾರ್', ನಿತಿನ್ ನಟನೆಯ 'ತಮ್ಮುಡು' ಈ ಲಿಸ್ಟ್‌ನಲ್ಲಿರುವ ದೊಡ್ಡ ಸಿನಿಮಾಗಳು. ಇನ್ನು ತಮಿಳಿನಲ್ಲಿ ಸೂರ್ಯ ನಟನೆಯ 'ಕಂಗುವ' ಸಿನಿಮಾ ಡಿಜಿಟಲ್ ಹಕ್ಕುಗಳನ್ನು ಕೂಡ ಸ್ವಂತ ಮಾಡಿಕೊಂಡಿದೆ.
ಬಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ 'ಹೌಸ್‌ಫುಲ್-5', 'ಭಾಘಿ-4', 'ಸಂಕಿ', 'ತೇರಿ ಬಾತೊನ್ ಮೇ ಐಸಾ ಉಲ್ಜಾ ಜಿಯಾ', 'ಸ್ತ್ರೀ'-2, 'ಅಶ್ವತ್ಥಾಮ', 'ಡಾನ್-3' ಸೇರಿದಂತೆ ಹಲವು ಬಹುನಿರೀಕ್ಷಿತ ಸಿನಿಮಾಗಳು ಈ ಪಟ್ಟಿಯಲ್ಲಿವೆ. ಯಾವ ಸಿನಿಮಾ ಯಾವಾಗ ಚಿತ್ರಮಂದಿರಗಳಿಗೆ ಬರುತ್ತದೋ ಗೊತ್ತಿಲ್ಲ. ಆದರೆ ಓಟಿಟಿ ರೈಟ್ಸ್ ಮಾತ್ರ ಪ್ರೈಂ ವಿಡಿಯೋ ಪಾಲಾಗಿದೆ.
ವೆಬ್ ಸೀರಿಸ್‌ಗಳ ವಿಚಾರಕ್ಕೆ ಬಂದರೆ ವರುಣ್ ಧವನ್- ಸಮಂತಾ ನಟನೆಯ ಸಿಟಾಡೆಲ್ ಅಮೇಜಾನ್ ಪ್ರೈಂನಲ್ಲೇ ಸ್ಟ್ರೀಮಿಂಗ್ ಆಗಲಿದೆ. ಇನ್ನುಳಿದಂತೆ 'ದಾಲ್ಡಾಲ್', 'ಮಾ ಕಾ ಸಮ್', 'ಗಲ್ಕಂಡ ಟೇಲ್ಸ್', 'ಬಂದ್ವಾಲೇ', 'ದಿ ಟ್ರೈಬ್', 'ಡೇರಿಂಗ್ ಪಾರ್ಟ್ನರ್ಸ್' ಸೇರಿದಂತೆ ಹಲವು ವೆಬ್ ಸೀರಿಸ್ ಲಿಸ್ಟ್‌ನಲ್ಲಿದೆ.


Click it and Unblock the Notifications











