ಕಲರ್ಸ್ ಕನ್ನಡದ ಧಾರಾವಾಹಿಗಳನ್ನು ಟಿವಿಗೂ ಮುನ್ನ ಜಿಯೊ ಸಿನಿಮಾದಲ್ಲಿ ನೋಡ್ಬಹುದು; ಅದ್ಹೇಗೆ?

By ಫಿಲ್ಮಿಬೀಟ್ ಡೆಸ್ಕ್

ಭಾರತದಲ್ಲಿ ಓಟಿಟಿಯ ಜನಪ್ರಿಯತೆ ಹೆಚ್ಚಾಗಿದೆ. ಸಿನಿಮಾಗಳಿಗೆ, ಮನರಂಜನಾ ವಾಹಿನಿಗಳಿಗೆ ಕಾಂಪಿಟ್ ಮಾಡುತ್ತಿವೆ. ಓಟಿಟಿಯಲ್ಲಿ ಸಿಗುವ ಕಂಟೆಂಟ್ ಬೇರೆ ಎಲ್ಲೂ ಸಿಗುವುದಕ್ಕೆ ಸಾಧ್ಯವೇ ಇಲ್ಲ ಅನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಬೆನ್ನಲೇ ಜಿಯೋ ಸಿನಿಮಾ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ಜನಪ್ರಿಯ ಧಾರಾವಾಹಿಗಳು ಟಿವಿಯಲ್ಲಿ ನಿಗದಿತ ಸಮಯಕ್ಕೆ ಪ್ರಸಾರ ಆಗುತ್ತಿವೆ. ಪ್ರತಿ ದಿನ ಆ ಸಮಯದವರೆಗೂ ಕಾದು ಕೂರಬೇಕಿತ್ತು. ಆದ್ರೀಗ ಜಿಯೋ ಸಿನಿಮಾ ಧಾರಾವಾಹಿಗಳನ್ನು ಟಿವಿಯಲ್ಲಿ ಪ್ರಸಾರ ಆಗುವುದಕ್ಕಿಂತ ಮುನ್ನವೇ ಜಿಯೋ ಸಿನಿಮಾದಲ್ಲಿ ನೋಡಬಹುದು ಎಂದು ಹೇಳುತ್ತಿದೆ.

Colors Kannada serial can be seen early in jio cinema do you know how

ವಯಾಕಾಂ18 ನೆಟ್‌ವರ್ಕ್ ಚಾನೆಲ್‌ಗಳಾಗಿರೋ ಎಂಟಿವಿ, ನಿಕಲೊಡಿಯೊನ್ ಹಾಗೂ ಕಲರ್ಸ್‌ನ ಇಡೀ ಸ್ಥಳೀಯ ಭಾಷೆಯ ಚಾನೆಲ್‌ಗಳಲ್ಲಿ ಪ್ರಸಾರ ಆಗುವ ಧಾರಾವಾಹಿಗಳನ್ನು ಜಿಯೋ ಸಿನಿಮಾದಲ್ಲಿ ಮೊದಲೇ ನೋಡಬಹುದಾಗಿದೆ. ಈ ಮೂಲಕ ಟಿವಿಯಲ್ಲಿ ಧಾರಾವಾಹಿಯನ್ನು ನೋಡಲು ಕಾದು ಕೂರುತ್ತಿದ್ದ ಪರಿಸ್ಥಿತಿ ಈಗ ಬದಲಾಗಿದೆ.

ಕಲರ್ಸ್ ಕನ್ನಡದ ಅಚ್ಚು ಮೆಚ್ಚಿನ ಧಾರಾವಾಹಿಗಳಾದ 'ಭಾಗ್ಯಲಕ್ಷ್ಮಿ', 'ಲಕ್ಷ್ಮೀ ಬಾರಮ್ಮ','ರಾಮಾಚಾರಿ', 'ಶ್ರೀಗೌರಿ', 'ಅಂತರ್ ಪಟ' ಸೇರಿದಂತೆ ಹಲವು ಧಾರಾವಾಹಿಗಳನ್ನು ಕಿರುತೆರೆ ವೀಕ್ಷಕರು ಓಟಿಟಿಯಲ್ಲಿ ನೋಡಬಹುದಾಗಿದೆ. ಆದರೆ, ಜಿಯೋ ಸಿನಿಮಾದ ಪ್ರೀಮಿಯಂ ಚಂದಾದಾರರಿಗೆ ಮಾತ್ರ ಈ ಸೌಲಭ್ಯವನ್ನು ಜಿಯೋ ಸಿನಿಮಾ ನೀಡಿದೆ.

Colors Kannada serial can be seen early in jio cinema do you know how

ಓಟಿಟಿ ಪ್ರಿಯರಿಗೆ ಜಿಯೋ ಸಿನಿಮಾ ಉಚಿತವಾಗಿ ಸಿಗುತ್ತಿದೆ. ಆದರೆ, ಟಿವಿಗೂ ಮುನ್ನ ಧಾರಾವಾಹಿಗಳನ್ನು ನೋಡಬೇಕು ಅಂತಿದ್ದರೆ, ಜಿಯೊ ಸಿನಿಮಾ ಪ್ರೀಮಿಯಂ ಅನ್ನು ಕೇವಲ 29 ರೂಪಾಯಿ ಕೊಟ್ಟು ಚಂದದಾರಾಗಬೇಕಾಗುತ್ತೆ. ಇದು ಒಂದು ಡಿವೈಸ್‌ಗೆ ಲಭ್ಯ. ಹಾಗೇ ಏಕಕಾಲಕ್ಕೆ ನಾಲ್ಕು ಡಿವೈಸ್ ಬೇಕಿದ್ದಲ್ಲಿ ತಿಂಗಳಿಗೆ 89 ರೂಪಾಯಿ ಪಾವತಿಸಬೇಕಿದೆ.

ಅಷ್ಟೇ ಅಲ್ಲದೆ, ಜಿಯೊ ಸಿನಿಮಾ ಪ್ರೀಮಿಯಂನಲ್ಲಿ ವಯಾಕಾಂ18ರ 20+ ಟಿ.ವಿ. ಚಾನೆಲ್‌ಗಳ ಸ್ಟ್ರೀಮಿಂಗ್ ಕೂಡ ಲಭ್ಯವಿರುತ್ತದೆ. ಇದರಲ್ಲಿ ಜಾಹೀರಾತು ಇರುವುದಿಲ್ಲ. ಅಲ್ಲದೆ ಹೈ-ಡೆಫನಿಷನ್‌ನಲ್ಲಿ ನೋಡಬಹುದು. ಹಾಗೇ ಆಫ್ಲೈನ್ ನೋಡಲು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿದೆ.

More from Filmibeat

English summary
Colors Kannada serial can be seen early in jio cinema do you know how?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X