twitter
    For Quick Alerts
    ALLOW NOTIFICATIONS  
    For Daily Alerts

    ಮಿರ್ಜಾಪುರ ವೆಬ್ ಸರಣಿ ವಿರುದ್ಧ ಮಿರ್ಜಾಪುರದಲ್ಲಿ ದೂರು ದಾಖಲು

    |

    ಅಮೆಜಾನ್ ಪ್ರೈಂ ನಲ್ಲಿ ಪ್ರಸಾರವಾಗುವ ಮಿರ್ಜಾಪುರ ವೆಬ್ ಸರಣಿ ಸಖತ್ ಜನಪ್ರಿಯ. ಈಗಾಗಲೇ ಎರಡು ಸೀಸನ್‌ನಲ್ಲಿ ಈ ವೆಬ್ ಸರಣಿ ಪ್ರಸಾರವಾಗಿದೆ. ಆದರೆ ಈಗ ಈ ವೆಬ್ ಸರಣಿ ವಿರುದ್ಧ ದೂರು ದಾಖಲಾಗಿದೆ.

    'ನಮ್ಮ ಪಟ್ಟಣದ ಹೆಸರು ಹಾಳುಗೆಡವಿದ್ದಾರೆ' ಎಂದು ಆರೋಪಿಸಿ ಉತ್ತರ ಪ್ರದೇಶ ರಾಜ್ಯದ ಮಿರ್ಜಾಪುರದ ಕೋಟ್ವಾಲಿ ದೇಹತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

    'ಮಿರ್ಜಾಪುರ್' ವೆಬ್ ಸರಣಿಯು ಸಾಮಾಜಿಕ ವೈರತ್ವ, ರಕ್ತಪಾತ, ಅಸಭ್ಯ ಭಾಷೆ ಬಳಕೆ, ದುಷ್ಟತನಗಳನ್ನು ಪ್ರಚಾರ ಮಾಡುತ್ತಿದೆ. ಮಿರ್ಜಾಪುರ ಪಟ್ಟಣವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಲಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಅರವಿಂದ ಚತುರ್ವೇದಿ ಎಂಬುವರು ಈ ದೂರು ದಾಖಲಿಸಿದ್ದು, 'ನನ್ನ ವೈಯಕ್ತಿಕ ಭಾವನೆಗಳಿಗೆ ಧಕ್ಕೆಯಾಗಿದೆ' ಎಂದು ಸಹ ಅವರು ದೂರಿನಲ್ಲಿ ಹೇಳಿದ್ದಾರೆ.

     Complaint Lodged Against Mirzapur Web Series In Mirzapur

    ಎಫ್‌ಐಆರ್ ಈಗಾಗಲೇ ದಾಖಲಾಗಿದ್ದು, ಮಿರ್ಜಾಪುರ ವೆಬ್ ಸರಣಿಯ ನಿರ್ಮಾಪಕರಾದ ಫರಾನ್ ಅಖ್ತರ್, ರಿತೇಶ್ ಸಿದ್ವಾನಿ, ಭೂಮಿಕಾ ಗೊಂಡಾಲಿಯಾ ವಿರುದ್ಧ ಐಪಿಸಿ ಸೆಕ್ಷನ್ 291 ಎ, 504 ಹಾಗೂ 505 ಗಳನ್ನು ಹೂಡಲಾಗಿದೆ. ಒಟಿಟಿ ಅಮೇಜಾನ್ ಪ್ರೈಂ ವಿರುದ್ಧವೂ ಪ್ರಕರಣ ದಾಖಲಾಗಿದೆ.

    ಅದೇ ಅಮೇಜಾನ್ ಪ್ರೈಂ ನಲ್ಲಿ ಇತ್ತೀಚೆಗಷ್ಟೆ ಬಿಡುಗಡೆ ಆದ ಸೈಫ್ ಅಲಿ ಖಾನ್ ನಟಿಸಿರುವ 'ತಾಂಡವ್' ವೆಬ್ ಸರಣಿ ವಿರುದ್ಧವೂ ದೂರು ದಾಖಲಾಗಿದೆ. ತಾಂಡವ್ ವೆಬ್ ಸರಣಿಯು ಹಿಂದು ಭಾವನೆಗಳನ್ನು ಘಾಸಿಕೊಳಿಸಿದೆ ಎಂದು ಆರೋಪಿಸಲಾಗಿದೆ. ಕಂಗನಾ ರಣೌತ್ ಸೇರಿದಂತೆ ಹಲವರು ಈ ವೆಬ್ ಸರಣಿ ವಿರುದ್ಧ ಟ್ವೀಟ್ ಮಾಡಿದ್ದಾರೆ.

    ಇನ್ನು ಮಿರ್ಜಾಪುರ್ ವೆಬ್ ಸರಣಿಯಲ್ಲಿ ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದಿವ್ಯೇಂದು, ರಸಿಕಾ ದುಗ್ಗಲ್, ಶ್ವೇತಾ ತ್ರಿಪಾಠಿ, ಇಶಾ ತಲ್ವಾರ್, ಇಶಾ ತಲ್ವಾರ್ ಇನ್ನೂ ಹಲವರು ನಟಿಸಿದ್ದಾರೆ.

    English summary
    Complaint lodged against Mirzapur web series in Mirzapur police station for showing the Mirzapur city in bad light.
    Wednesday, January 20, 2021, 9:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X