twitter
    For Quick Alerts
    ALLOW NOTIFICATIONS  
    For Daily Alerts

    'Why I killed Gandhi' ಚಿತ್ರವನ್ನು ಬ್ಯಾನ್ ಮಾಡುವಂತೆ ಕಾಂಗ್ರೆಸ್ ಒತ್ತಡ: ಸಿನಿಮಾ ವರ್ಕರ್ಸ್‌ನಿಂದ ಮೋದಿಗೆ ಪತ್ರ

    |

    1948, ಜನವರಿ 30 ಭಾರತಕ್ಕೆ ಕರಾಳ ದಿನ. ದೇಶದ ಇತಿಹಾಸದಲ್ಲೊಂದು ಕಪ್ಪು ಚುಕ್ಕೆ. ಇದು ಮಹಾತ್ಮಾ ಗಾಂಧಿಯನ್ನು ನಾಥುರಾಮ್ ಗೋಡ್ಸೆ ಗುಂಡಿಕ್ಕಿ ಕೊಂದ ದಿನ. ಈ ದಿನದಂದೇ, ಅಂದರೆ, 2022 ಜನವರಿ 30ನೇ ತಾರೀಕಿನಂದು ಮಹಾತ್ಮಾ ಗಾಂಧಿ ಹತ್ಯೆಗೈದಿದ್ದ ನಾಥುರಾಮ್ ಗೋಡ್ಸೆಯ ಚರಿತ್ರೆಯನ್ನು ಆಧರಿಸಿದ ಸಿನಿಮಾ ಬಿಡುಗಡೆಗೆ ಸಜ್ಜಾಗದೆ. ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಆ ಸಿನಿಮಾವೇ 'ವೈ ಐ ಕಿಲ್ಡ್ ಗಾಂಧಿ'.

    'ವೈ ಐ ಕಿಲ್ಡ್ ಗಾಂಧಿ' ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ವಿಚಾರವಾಗಿ ಮತ್ತೆ ವಿವಾದಗಳು ಎದ್ದಿವೆ. ಜನವರಿ 30ರಂದು ರಿಲೀಸ್‌ಗೆ ಸಜ್ಜಾಗಿದ್ದ ಸಿನಿಮಾವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲವೆಂದು ಕಾಂಗ್ರೆಸ್ ಪಕ್ಷ ಪಟ್ಟು ಹಿಡಿದು ಕೂತಿದೆ. ಇನ್ನೊಂದೆಡೆ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಈ ಚಿತ್ರವನ್ನು ಸಂಪೂರ್ಣವಾಗಿ ಬ್ಯಾನ್ ಮಾಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದಿದೆ.

    'ವೈ ಐ ಕಿಲ್ಡ್ ಗಾಂಧಿ' ಬ್ಯಾನ್ ಮಾಡಲು ಮೋದಿಗೆ ಪತ್ರ

    'ವೈ ಐ ಕಿಲ್ಡ್ ಗಾಂಧಿ' ಬ್ಯಾನ್ ಮಾಡಲು ಮೋದಿಗೆ ಪತ್ರ

    2022, ಜನವರಿ 30 ರಂದು ಬಿಡುಗಡೆ ಸಜ್ಜಾಗಿರುವ 'ವೈ ಐ ಕಿಲ್ಡ್ ಗಾಂಧಿ' ಸಿನಿಮಾವನ್ನು ಸಂಪೂರ್ಣ ಬಂದ್ ಮಾಡುವಂತೆ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ (AICWA) ಪ್ರಧಾನಿ ಮೋದಿಗೆ ಪತ್ರ ಬರೆದಿದೆ. 'ವೈ ಐ ಕಿಲ್ಡ್ ಗಾಂಧಿ' ಸಿನಿಮಾದಲ್ಲಿ ಮಹಾತ್ಮ ಗಾಂಧಿಯನ್ನು ಕೊಂದ ವ್ಯಕ್ತಿ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸಲಾಗಿದೆ. ಹೀಗಾಗಿ ಈ ಸಿನಿಮಾವನ್ನು ಸಂಪೂರ್ಣ ಬ್ಯಾನ್ ಮಾಡುವಂತೆ ಕೇಳಿಕೊಳ್ಳಲಾಗಿದೆ.

    ನಾಥೂರಾಮ್ ಗೋಡ್ಸೆ ಗೌರವಕ್ಕೆ ಅರ್ಹನಲ್ಲ

    ನಾಥೂರಾಮ್ ಗೋಡ್ಸೆ ಗೌರವಕ್ಕೆ ಅರ್ಹನಲ್ಲ

    " ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಚಿಕ್ಕದೊಂದು ಗೌರವಕ್ಕೂ ಅರ್ಹನಲ್ಲ. ಜನವರಿ 30, 1948ರಲ್ಲಿ ನಡೆದ ಕೃತ್ಯದ ಈ ಸಿನಿಮಾವೇನಾದರೂ ಬಿಡುಗಡೆಯಾದರೆ ಇಡೀ ದೇಶವೇ ದೊಡ್ಡ ಶಾಕ್‌ಗೆ ಒಳಗಾಗುತ್ತೆ." ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

    ಸಿನಿಮಾ ಬ್ಯಾನ್ ಕಾಂಗ್ರೆಸ್ ಆಗ್ರಹ

    ಸಿನಿಮಾ ಬ್ಯಾನ್ ಕಾಂಗ್ರೆಸ್ ಆಗ್ರಹ

    'ವೈ ಐ ಕಿಲ್ಡ್ ಗಾಂಧಿ' ಸಿನಿಮಾ ಬಿಡುಗಡೆಯನ್ನು ಕಾಂಗ್ರೆಸ್ ಪಕ್ಷ ಕೂಡ ವಿರೋಧಿಸಿದೆ. ಈ ಸಿನಿಮಾವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲವೆಂದು ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದ ಮುಖಂಡ ನಾನಾ ಪಟೋಲ್ ಎಚ್ಚರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆಯನ್ನು ಭೇಟಿ ಮಾಡಲಿದ್ದು, 'ವೈ ಐ ಕಿಲ್ಡ್ ಗಾಂಧಿ' ಸಿನಿಮಾವನ್ನು ಬ್ಯಾನ್ ಮಾಡುವಂತೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

    ಇಕ್ಕಟಿಗೆ ಸಿಲುಕಿದ ಗೋಡ್ಸೆ ಪಾತ್ರಧಾರಿ

    ಇಕ್ಕಟಿಗೆ ಸಿಲುಕಿದ ಗೋಡ್ಸೆ ಪಾತ್ರಧಾರಿ

    'ವೈ ಐ ಕಿಲ್ಡ್ ಗಾಂಧಿ' ಸಿನಿಮಾದಲ್ಲಿ ನಾಥೂರಾಮ್ ಗೋಡ್ಸೆ ಪಾತ್ರವನ್ನು ನಿರ್ವಹಿಸಿದ್ದ ಮರಾಠಿ ನಟ ಅಮೂಲ್ ಕೊಲ್ಹೆ. ಸದ್ಯ ಎನ್‌ಸಿಪಿ ಪಕ್ಷದಿಂದ ಲೋಕಸಭೆಗೆ ಆಯ್ಕೆ ಆಗಿದ್ದಾರೆ. 'ವೈ ಐ ಕಿಲ್ಡ್ ಗಾಂಧಿ' ಬಿಡುಗಡೆ ಸಜ್ಜಾಗುತ್ತಿದ್ದಂತೆ ಅಮೂಲ್ ಕೊಲ್ಹೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸ್ವಂತ ಪಕ್ಷದ ಸದಸ್ಯರೇ ಅಮೂಲ್ ಕೊಲ್ಹೆ ಅವರ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಹೀಗಾಗಿ ಸಂಸದ ಇಕ್ಕಟ್ಟಿಗೆ ಸಿಲುಕಿದ್ದು, ಟೀಕೆಗಳಿಂದ ತಪ್ಪಿಸಿಕೊಳ್ಳಬೇಕಾಗಿದೆ.

    English summary
    Congress requested to Maharashtra CM Uddav Thackeray to ban Why I killed Gandhi on OTT Release. All India Cine Workers Association (AICWA) has written to Prime Minister Narendra Modi demanding a complete ban on the movie "Why I Killed Gandhi" as the film glorifies Nathuram Godse
    Sunday, January 23, 2022, 20:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X