For Quick Alerts
  ALLOW NOTIFICATIONS  
  For Daily Alerts

  ಲಾಕ್ ಡೌನ್ ಮುಗಿದ ನಂತರ ಚಿತ್ರಮಂದಿರಗಳ ಪರಿಸ್ಥಿತಿ ಏನು? ಕೋಟಿ ನಷ್ಟದ ಬಗ್ಗೆ ಪ್ರದರ್ಶಕರು ಹೇಳುವುದೇನು?

  |

  ಕೊರೊನಾವೈರಸ್ ಹೊಡೆತಕ್ಕೆ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ದೊಡ್ಡ ದೊಡ್ಡ ಉದ್ಯಮಗಳು ನೆಲಕಚ್ಚುವಂತಹ ಸ್ಥಿತಿ ತಲುಪಿವೆ. ಮನರಂಜನಾ ಕ್ಷೇತ್ರ ಸಿನಿಮಾರಂಗವೂ ಹೊರತಾಗಿಲ್ಲ. ಕೋಟಿ ಕೋಟಿ ನಷ್ಟ ಅನುಭವಿಸುತ್ತಿರುವ ಸಿನಿಮಾ ಕ್ಷೇತ್ರ ಚೇತರಿಸಿಕೊಳ್ಳಲು ಒಂದು ವರ್ಷವಾದರು ಬೇಕಾಗಬಹುದು ಎಂದು ಹೇಳಲಾಗುತ್ತಿದೆ.

  ಸರ್ಕಾರಕ್ಕೆ ಉಪೇಂದ್ರ ಬರೆದ ಆ ವಿಶೇಷ ಪತ್ರದಲ್ಲಿ ಏನಿತ್ತು ? | Upendra Wrote a letter to GOVT

  ಸಿನಿಮಾವನ್ನೆ ನಂಬಿಕೊಂಡು ಜೀವಿಸುತ್ತಿರುವ ಕಾರ್ಮಿಕರ ಬದುಕು ಸಂಕಷ್ಟದಲ್ಲಿದೆ. ಆದರೆ ಸಾಕಷ್ಟು ಮಂದಿ ಸಿನಿಮಾ ಮತ್ತು ಕಿರುತೆರೆ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ. ಆದರೆ ಸಿನಿಮಾ ಪ್ರದರ್ಶಕರು ಯಾರಿಗೂ ಬೇಡವಾಗಿದ್ದಾರೆ. ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಪಾಡು ಹೇಳತೀರದಾಗಿದೆ.

  ಸದ್ಯ ರಾಜ್ಯದಲ್ಲಿ 600 ಚಿತ್ರಮಂದಿರಗಳಿವೆ. ಇದರಲ್ಲೀಗ 150 ಚಿತ್ರಮಂದಿರಗಳು ಮುಂಚುವ ಆತಂಕದಲ್ಲಿವೆ. ಕಾಯಂಯಾಗಿ ಮುಚ್ಚವ ಸ್ಥಿತಿಯಲ್ಲಿವೆ ಎಂದು ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ ವಿ ಚಂದ್ರಶೇಖರ್ ಹೇಳಿದ್ದಾರೆ.

  ಸಿನಿಮಾ ನೋಡಲು ಈಗ ಮಲ್ಟಿಪ್ಲೆಕ್ಸ್, ನೆಟ್ ಫ್ಲಿಕ್ಸ್, ಅಮೆಜಾನ್ ಅಂತಹ ಒಟಿಟಿ ವ್ಯವಸ್ಥೆ ಬಂದಿದೆ. ಇಂತಹ ವಾತಾವರಣದಲ್ಲಿ ಸಾಕಷ್ಟು ಚಿತ್ರಮಂದಿರಗಳು ಬಾಗಿಲು ಹಾಕುವ ಸ್ಥಿತಿ ತಲುಪಿವೆ ಎನ್ನುವುದು ಪ್ರದರ್ಶಕರ ಆತಂಕ.

  ನಿಜವಾದ ನಷ್ಟ ಯಾರಿಗೆ?: ನೊಂದ ಸಿನಿಮಾ ತಂತ್ರಜ್ಞನೊಬ್ಬನ ಅಳಲಿನ ಪತ್ರನಿಜವಾದ ನಷ್ಟ ಯಾರಿಗೆ?: ನೊಂದ ಸಿನಿಮಾ ತಂತ್ರಜ್ಞನೊಬ್ಬನ ಅಳಲಿನ ಪತ್ರ

  ರಾಜ್ಯದಲ್ಲಿ ಒಟ್ಟು 600 ಚಿತ್ರಮಂದಿರಗಳಲ್ಲಿ 8000 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಇತರೆ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರ್ಕಾರ ಮತ್ತು ಇತರೆ ವಲಯಗಳಿಂದ ಸೌಲಭ್ಯ ದೊರತಿದೆ. ಆದರೆ ಚಿತ್ರಮಂದಿರಗಳ ಕಾರ್ಮಿಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಚಿತ್ರಿಮಂದಿರಗಳ ಕಾರ್ಮಿಕರಿಗೆ ಇದುವರೆಗೂ ಯಾವುದೆ ಸೌಲಭ್ಯ ದೊರೆತಿಲ್ಲ ಎನ್ನುವುದು ಪ್ರದರ್ಶಕರ ಅಳಲು.

   ಲಾಕ್ ಡೌನ್ ನಿಂದ ಚಿತ್ರಪ್ರದರ್ಶಕರಿಗಾಗುವ ನಷ್ಟ

  ಲಾಕ್ ಡೌನ್ ನಿಂದ ಚಿತ್ರಪ್ರದರ್ಶಕರಿಗಾಗುವ ನಷ್ಟ

  1. ಕಾರ್ಮಿಕರಿಗೆ ಸಂಬಳವನ್ನು ನೀಡಲು ಸರ್ಕಾರ ಸೂಚಿಸಿದ ಪರಿಣಾಮ, ರಾಜ್ಯದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ತಿಂಗಳಿಗೆ ಅಂದಾಜು 10 ಕೋಟಿ ನಷ್ಟವಾಗಲಿದೆ.

  2. ವಿದ್ಯುತ್ ಮತ್ತು ಒಳಚರಂಡಿ ಇಲಾಖೆಗೆ ಪಾವತಿ ಮಾಡುವ ಮಿನಿಮಮ್ ಡಿಮ್ಯಾಂಡ್ ಪಾವತಿಯಿಂದ ಮಾಸಿಕ 1 ಕೋಟಿ ನಷ್ಟ

  3. ಅಸ್ತಿ ತೆರಿಗೆ ಪಾವತಿಯು ಕಡ್ಡಾಯವಾಗಿದ್ದರಿಂದ ಅಂದಾಜು 5 ಕೋಟಿ ನಷ್ಟವಾಗಲಿದೆ

  4. ನಿರಂತರ 60 ದಿವಸಗಳ ಕಾಲ ಚಿತ್ರಮಂದಿರಗಳು ಬಂದ್ ಆಗಿರುವುದರಿಂದ ಸೀಟ್ ಗಳು, ಪರದೆ, ಯಂತ್ರೋಪಕರಣ ಇವುಗಳ ಸರ್ವಿಸ್ ಮಾಡಬೇಕಾಗಿದ್ದು, ಕನಿಷ್ಟ ಅಂದಾಜು 3 ಕೋಟಿ ನಷ್ಟ.

  4. ಸರ್ಕಾರದ ನೀತಿಯಂತೆ ಅಂತರ ಕಾಯ್ದು ಪುನರ್ ಪ್ರಾರಂಭಮಾಡಿದರೆ, ಹಾಲಿ ವರಮಾನದಲ್ಲಿ ಶೇಕಡ 60ರಷ್ಟು ಆದಾಯ ಕುಂಠಿತಗೊಂಡು, ಅಂದಾಜು ವಾರಕ್ಕೆ 2 ಕೋಟಿ ನಷ್ಟ ವಾಗಲಿದೆ. ಎಂದು ಪ್ರದರ್ಶಕರು ನೀಡುವ ನಷ್ಟದ ಲೆಕ್ಕವಾಗಿದೆ.

  ಪ್ರದರ್ಶಕರ ಬೇಡಿಕೆಗಳು

  ಪ್ರದರ್ಶಕರ ಬೇಡಿಕೆಗಳು

  1. ಕೇಂದ್ರ ಸರ್ಕಾರ ಕಾರ್ಮಿಕರಿಗೆ ಪಿ.ಎಫ್ ಹಣ ಬರಿಸುತ್ತಿದ್ದು, ಕಾರ್ಮಿಕರಿಗೆ ಸಂಬಳವನ್ನು ಪಾವತಿ ಮಾಡಲು ಚಿತ್ರಮಂದಿರಗಳು ಅಶಕ್ತರಲ್ಲದ ಕಾರಣ ಕಾರ್ಮಿಕರಿಗೆ ಅನುದಾನ ನೀಡಬೇಕು.

  2. ವಿದ್ಯುತ್ ಮತ್ತು ಒಳಚರಂಡಿ ಇಲಾಖೆಯ ಮಾಸಿಕ ಮಿನಿಮಮ್ ಡಿಮ್ಯಾಂಡ್ ಶುಲ್ಕಪಾವತಿಗೆ ರಿಯಾಯಿತಿಯನ್ನು ನೀಡಬೇಕು.

  3. ಈ ಸಾಲಿನ ಆಸ್ತಿ ತೆರಿಗೆ ಪಾವತಿಗೆ ರಿಯಾಯಿತಿಯನ್ನು ನೀಡಬೇಕು

  4. ಚಿತ್ರಮಂದಿರಗಳನ್ನು ನಿರ್ವಹಿಸಲು ನಿರೀಕ್ಷಿತ ಆದಾಯ ಬಾರದ ಕಾರಣ ಮತ್ತು ಪುನಶ್ಚೇತನಕ್ಕೆ ಒಂದು ಟಿಕೆಟ್ ಮಾರಟದಲ್ಲಿ ತೆರಿಗೆ ರಹಿತ ರೂ.5.00ಗಳ ನಿರ್ವಹಣಾ ಶುಲ್ಕ ಪಡೆಯಲು ಅವಕಾಶ ನೀಡಬೇಕೆಂದು ಪ್ರದರ್ಶಕರು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ.

   ಕಾರ್ಮಿಕರಿಗೆ ವೇತನ ನೀಡಲು ಕಷ್ಟವಾಗುತ್ತಿದೆ

  ಕಾರ್ಮಿಕರಿಗೆ ವೇತನ ನೀಡಲು ಕಷ್ಟವಾಗುತ್ತಿದೆ

  ಚಿತ್ರಮಂದಿರಗಳು ಮತ್ತು ಪ್ರದರ್ಶಕರ ವಿಚಾರದಲ್ಲಿ ಸರ್ಕಾರ ಯಾವಾಗಲು ಕಡೆಗಣಿಸುತ್ತೆ. ಸರ್ಕಾರದ ನಿಯಮದಂತೆ ಚಿತ್ರಮಂದಿರಗಳನ್ನು ಬಂದ್ ಮಾಡಿದ್ದೇವೆ. ಆದರೆ ಈ ಸಮಯದಲ್ಲಿ ಕಾರ್ಮಿಕರಿಗೆ ಸಂಬಳ ಕೊಡಬೇಕೆಂದು ಸೂಚಿಸಿದೆ. ವಿದ್ಯುತ್ ಬಿಲ್, ವಾಟರ್ ಬಿಲ್, ಟ್ಯಾಕ್ಸ್ ಅನ್ನು ಕಟ್ಟಬೇಕು. ಚಿತ್ರಮಂದಿರಕ್ಕೆ ಆದಾಯವಿಲ್ಲ. ಆದರೂ ಕಳೆದ ತಿಂಗಳು ಕಾರ್ಮಿಕರಿಗೆ ಸಂಬಳ ನೀಡಿದ್ದೀವಿ. ಈ ತಿಂಗಳು ಅರ್ಧ ಸಂಬಳ ನೀಡಿದ್ದೀವಿ. ಮುಂದಿನ ತಿಂಗಳು ಸರ್ಕಾರದ ನಿಯಮ ನೋಡಿ ಸಂಬಳ ಕೊಡುವ ವಿಚಾರ ನಿರ್ಧರಿಲಾಗುತ್ತೆ" ಎಂದು ಕೆ.ವಿ ಚಂದ್ರಶೇಖರ್ ಹೇಳಿದ್ದಾರೆ.

   ಒಟಿಟಿಯಲ್ಲಿ ಸಿನಿಮಾ ರಿಲೀಸ್ ಬಗ್ಗೆ ಚಂದ್ರಶೇಖರ್ ಮಾತು

  ಒಟಿಟಿಯಲ್ಲಿ ಸಿನಿಮಾ ರಿಲೀಸ್ ಬಗ್ಗೆ ಚಂದ್ರಶೇಖರ್ ಮಾತು

  "ಈ ಸಮಯದಲ್ಲಿ ಸಿನಿಮಾಗಳನ್ನು ಒಟಿಟಿಯಲ್ಲಿ ರಿಲೀಸ್ ಮಾಡಲಾಗುತ್ತಿದೆ. ಒಟಿಟಿಯಿಂದ ಚಿತ್ರಮಂದಿರಗಳಿಗೆ ಮತ್ತಷ್ಟು ಹೊಡೆತ ಬೀಳಲಿದೆ. ಸಿನಿಮಾ ಮಾಡಿದವರಿಗೆ ಎಲ್ಲಿ ಬೇಕಾದರು ರಿಲೀಸ್ ಮಾಡುವ ಹಕ್ಕು ಇದೆ. ಆದರೆ ನಮ್ಮ ಕಷ್ಟವನ್ನು ನೋಡಬೇಕಲ್ಲವಾ, ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಬೇಕೆಂದು ಸೆನ್ಸಾರ್ ಆದ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ನಮ್ಮ ನಡುವೆ ಒಂದು ಬಾಂಧವ್ಯವಿತ್ತು. ಆದರೀಗ ಇಲ್ಲ. ಅವರವರ ಬದುಕನ್ನು ಅವರು ನೋಡಿಕೊಳ್ಳುತ್ತಿದ್ದಾರೆ" ಎಂದು ಚಂದ್ರಶೇಖರ್ ಹೇಳಿದ್ದಾರೆ.

   ಲಾಕ್ ಡೌನ್ ಮುಗಿದ ನಂತರದ ಪರಿಸ್ಥಿತಿ ಹೇಗಿರಲಿದೆ

  ಲಾಕ್ ಡೌನ್ ಮುಗಿದ ನಂತರದ ಪರಿಸ್ಥಿತಿ ಹೇಗಿರಲಿದೆ

  ''ಲಾಕ್ ಡೌನ್ ಮುಗಿದ ಬಳಿಕ ಚಿತ್ರಮಂದಿಗಳು ತೆರೆಯುತ್ತವೆ ಎನ್ನವ ಬಗ್ಗೆ ಮಾಹಿತಿ ಇಲ್ಲ. ಸಿನಿಮಾಗಳನ್ನು ರಿಲೀಸ್ ಮಾಡುವ ನಿರ್ಧಾರಕ್ಕೆ ಬರುವುದು ನಿರ್ಮಾಪಕರಿಗೆ ಬಿಟ್ಟಿದ್ದು. ಕೊರೊನಾ ನಂತರದ ಪರಿಸ್ಥಿತಿಯ ಬಗ್ಗೆ ಇದುವರೆಗೂ ಯಾವುದೆ ಸಭೆ ನಡೆದಿಲ್ಲ" ಎಂದು ಹೇಳಿದ್ದಾರೆ.

  English summary
  COVID-19 impact on Film Industry: We take a look at how film production, distributors, exhibitors and labours have suffered in india over the past month. How has coronavirus changed the movie industry. Read on.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X