twitter
    For Quick Alerts
    ALLOW NOTIFICATIONS  
    For Daily Alerts

    ನೆಟ್‌ಫ್ಲಿಕ್ಸ್ ವೆಬ್ ಸರಣಿಯಲ್ಲಿ ಬೆಂಗಳೂರು ಪೊಲೀಸರು ಮತ್ತು ಕನ್ನಡ

    |

    ನೆಟ್‌ಫ್ಲಿಕ್ಸ್‌ ಕನ್ನಡವನ್ನು ನಿರ್ಲಕ್ಷ್ಯ ಮಾಡಿದೆ. 'ಯೂ-ಟರ್ನ್' ಹಾಗೂ 'ನಾತಿಚರಾಮಿ' ಸಿನಿಮಾ ಬಿಟ್ಟು ಇನ್ನೊಂದು ಕನ್ನಡ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ. ಈ ಒಟಿಟಿಯಲ್ಲಿ ಕನ್ನಡ ಆಯ್ಕೆ ಸಹ ಇಲ್ಲ.

    ಆದರೆ ಹೊಸದಾಗಿ ಬಿಡುಗಡೆ ಆಗುತ್ತಿರುವ ನೆಟ್‌ಫ್ಲಿಕ್ಸ್ ಒರಿಜಿನಲ್ ಡಾಕ್ಯುಮೆಂಟರಿ ಸರಣಿಯಲ್ಲಿ ಕನ್ನಡ ಕೇಳುತ್ತಿದೆ. ಮೂಲವಾಗಿ ಇದು ಇಂಗ್ಲೀಷ್ ಭಾಷೆಯ ವೆಬ್ ಸರಣಿಯಾಗಿದ್ದರೂ ಸಹ ಬೆಂಗಳೂರಿನಲ್ಲಿ ಚಿತ್ರೀಕರಿಸಿದ್ದು, ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಗಳು ಬಹುತೇಕರು ಕನ್ನಡವನ್ನೇ ಮಾತನಾಡುತ್ತಾರೆ.

    'ಕ್ರೈಂ ಸ್ಟೋರೀಸ್; ಇಂಡಿಯಾ ಡಿಟೆಕ್ಟಿವ್ಸ್' ಹೆಸರಿನ ವೆಬ್ ಸರಣಿಯೊಂದನ್ನು ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡುತ್ತಿದೆ. ಈ ವೆಬ್ ಸರಣಿಯು ಡಾಕ್ಯುಮೆಂಟರಿ ಮಾದರಿಯಲ್ಲಿದ್ದು, ನಿಜ ವ್ಯಕ್ತಿಗಳು, ನಿಜ ಸನ್ನಿವೇಶಗಳು, ನಿಜ ಘಟನೆಗಳನ್ನು ಈ ವೆಬ್ ಸರಣಿಯು ಒಳಗೊಂಡಿದೆ. ಸೆಪ್ಟೆಂಬರ್ 22 ರಂದು ಬಿಡುಗಡೆ ಆಗಲಿರುವ ವೆಬ್ ಸರಣಿಯು ಬೆಂಗಳೂರು ಪೊಲೀಸರ ಕುರಿತಾದದ್ದಾಗಿದ್ದು, ನಗರದಲ್ಲಿ ನಡೆದಿರುವ ಭೀಕರ, ಅಮಾನವೀಯ ಅಪರಾಧ ಪ್ರಕರಣಗಳು, ಅದನ್ನು ಭೇದಿಸುವ ಪೊಲೀಸರು. ಅಪರಾಧಿಗಳ ಮನಸ್ಥಿತಿ, ಅಪರಾಧಿಗಳನ್ನು ಹಿಡಿಯಲು ಪೊಲೀಸರು ಬಳಸುವ ಯುಕ್ತಿ, ತಂತ್ರಜ್ಞಾನ ಇನ್ನಿತರೆ ವಿಷಯಗಳನ್ನು ಡಾಕ್ಯು ಸೀರೀಸ್ ಒಳಗೊಂಡಿದೆ.

    ಬೆಂಗಳೂರು ಪೊಲೀಸರು ಇತ್ತೀಚೆಗೆ ಹ್ಯಾಂಡಲ್‌ ಮಾಡಿದ ಕ್ಲಿಷ್ಟಕರ ಪ್ರಕರಣಗಳ ಮಾಹಿತಿ, ಚಿತ್ರಗಳು, ವಿಡಿಯೋ ತುಣುಕುಗಳು ವೆಬ್ ಸರಣಿಯಲ್ಲಿರಲ್ಲಿವೆ. ಘಟನಾ ಸ್ಥಳದಲ್ಲಿ ಇದ್ದು ಅಪರಾಧಿಗಳನ್ನು ಹಿಡಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಘಟನೆ ಕುರಿತು ಕ್ಯಾಮೆರಾ ಮುಂದೆ ಮಾಹಿತಿ ನೀಡಿದ್ದಾರೆ. ಡಾಕ್ಯು ಸೀರೀಸ್‌ನ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.

    ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಕಾಣಿಸಿಕೊಂಡಿದ್ದಾರೆ

    ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಕಾಣಿಸಿಕೊಂಡಿದ್ದಾರೆ

    ಈ ಡಾಕ್ಯುಮೆಂಟ್ ಸೀರೀಸ್‌ನಲ್ಲಿ ಬೆಂಗಳೂರು ಸೆಂಟ್ರಲ್ ಡಿಸಿಪಿ ಅನುಚೇತ್ ಸೇರಿದಂತೆ ಹಲವು ಬೆಂಗಳೂರು ಪೊಲೀಸ್ ಹಿರಿಯ ಅಧಿಕಾರಿಗಳು, ಸಿಬ್ಬಂದಿ, ಕಾನ್ಸ್‌ಟೇಬಲ್‌ಗಳು ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರಲ್ಲಿ ಹಲವರು ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವೆಬ್ ಸರಣಿಯ ಚಿತ್ರೀಕರಣ ನಡೆದಿದೆ.

    ಹಲವು ಆಂತರಿಕ ವಿಷಯಗಳನ್ನು ಒಳಗೊಂಡಿದೆ ವಬ್ ಸರಣಿ

    ಹಲವು ಆಂತರಿಕ ವಿಷಯಗಳನ್ನು ಒಳಗೊಂಡಿದೆ ವಬ್ ಸರಣಿ

    'ಕ್ರೈಂ ಸ್ಟೋರೀಸ್; ಇಂಡಿಯಾ ಡಿಟೆಕ್ಟಿವ್ಸ್' ಡಾಕ್ಯು ಸೀರೀಸ್‌ ದೇಶದ ಹಲವು ನಗರಗಳ ಪ್ರಮುಖ ಅಪರಾಧ ಪ್ರಕರಣಗಳನ್ನು ಪೊಲೀಸರು ಬಗೆ ಹರಿಸಿದ ರೀತಿಯನ್ನು, ಪೊಲೀಸರ ಕೆಲಸದಲ್ಲಿರುವ ಸವಾಲನ್ನು, ಪೊಲೀಸರ ಚಾಕಚಕ್ಯತೆ, ಅಪರಾಧಿಗಳ ಮನಸ್ಥಿತಿ. ಪೊಲೀಸರು ಬಳಸುವ ತಂತ್ರಜ್ಞಾನ, ಅಪರಾಧವೊಂದು ಆದಾಗ ಪೊಲೀಸರು ಯೋಚಿಸುವ ವಿಧಾನ, ಭಿನ್ನ-ಭಿನ್ನ ಸನ್ನಿವೇಶಗಳನ್ನು ಪೊಲೀಸರು ಎದುರಿಸಲು ಮಾಡಿಕೊಳ್ಳುವ ಸಿದ್ಧತೆ ಇನ್ನಿತರೆ ಹಲವು ವಿಷಯಗಳನ್ನು ಒಳಗೊಂಡಿದೆ.

    ನಾಲ್ಕು ಭಾಗಗಳಲ್ಲಿ ಬಿಡುಗಡೆ

    ನಾಲ್ಕು ಭಾಗಗಳಲ್ಲಿ ಬಿಡುಗಡೆ

    ಬೆಂಗಳೂರು ಪೊಲೀಸರು ವಿವಿಧ ಪ್ರಕರಣಗಳನ್ನು ಬೆನ್ನತ್ತಿ ಅಪರಾಧಿಗಳನ್ನು ಹಿಡಿದ ಮಾಹಿತಿ, ವಿಡಿಯೋಗಳನ್ನು ಒಳಗೊಂಡ ನಾಲ್ಕು ಭಾಗದ ಡಾಕ್ಯುಮೆಂಟರಿ ಸೀರೀಸ್ 'ಕ್ರೈಂ ಸ್ಟೋರೀಸ್; ಇಂಡಿಯಾ ಡಿಟೆಕ್ಟಿವ್ಸ್' ಆಗಿದೆ. ಈ ವೆಬ್ ಸರಣಿಯು ದೇಶದ ಇನ್ನಿತರೆ ನಗರಗಳ ಪೊಲೀಸರ ಸಾಹಸಘಾತೆಗಳ ಕತೆಯನ್ನು ಹೇಳಲಿದೆ. ಸೆಪ್ಟೆಂಬರ್ 22 ರಂದು ಬಿಡುಗಡೆ ಆಗುವ ನಾಲ್ಕು ಭಾಗಗಳು ಬೆಂಗಳೂರಿನ ಪೊಲೀಸರಿಗಷ್ಟೆ ಮೀಸಲಾಗಿವೆ.

    ಎನ್.ಅಮಿತ್ ಮತ್ತು ಜಾಕ್ ರ್ಯಾಂಪ್ಲಿಂಗ್ ನಿರ್ದೇಶನ

    ಎನ್.ಅಮಿತ್ ಮತ್ತು ಜಾಕ್ ರ್ಯಾಂಪ್ಲಿಂಗ್ ನಿರ್ದೇಶನ

    ಈ ಡಾಕ್ಯುಮೆಂಟ್ ಸೀರೀಸ್ ಅನ್ನು ಎನ್.ಅಮಿತ್ ಮತ್ತು ಜಾಕ್ ರ್ಯಾಂಪ್ಲಿಂಗ್ ನಿರ್ದೇಶನ ಮಾಡಿದ್ದಾರೆ. ತರುಣ್ ಸಲ್ದಾನಾ, ಮೋರ್ಗನ್ ಮ್ಯಾಥೀವ್ಸ್, ಫಿಯೋನಾ ಸ್ಟೋರ್‌ಟೋನ್ ಸಹ ನಿರ್ಮಾಪಕರಾಗಿದ್ದಾರೆ. ಈ ಡಾಕ್ಯುಮೆಂಟರಿ ಸರಣಿಯನ್ನು ಮಿನ್ನಾವ್ ಫಿಲಮ್ಸ್ ಅರ್ಪಿಸಿದ್ದು, ಇದೇ ನಿರ್ಮಾಣ ಸಂಸ್ಥೆ ಈ ಹಿಂದೆ 'ದಿ ಲಾಸ್ಟ್ ಸರ್ವೈವರ್', 'ದಿ ಫಾಲೆನ್' ಅಂಥಹಾ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ನೆಟ್‌ಫ್ಲಿಕ್ಸ್‌ನ 'ಬ್ಯಾಡ್‌ ಬಾಯ್ ಬಿಲಿಯನೇರ್ಸ್' ನಿರ್ಮಾಣವನ್ನು ಸಹ ಇದೇ ನಿರ್ಮಾಣ ಸಂಸ್ಥೆ ಮಾಡಿದೆ.

    English summary
    Crime Stories: India Detectives Document Series is releasing on September 22. This document series showing Bengaluru's crime world and how Bengaluru police solve the cases.
    Tuesday, September 14, 2021, 16:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X