ನೈಜ ಘಟನೆ ಆಧರಿಸಿದ ಹೊಚ್ಚ ಹೊಸ ಕನ್ನಡ ಸಿನಿಮಾ ಓಟಿಟಿಗೆ ಬಂದಿದೆ; ಈಗ್ಲೇ ನೋಡಿ

ನೈಜ ಘಟನೆಗಳನ್ನು ಆಧರಿಸಿ ಸಾಕಷ್ಟು ಸಿನಿಮಾಗಳು ಬಂದಿದೆ. ಆದರೆ ಲವ್ ಸ್ಟೋರಿ ಸಿನಿಮಾಗಳು ಕಮ್ಮಿ. ಸೊಲ್ಲಾಪುರದ ಆಕಾಶ್ ನಾರಾಯಣ್ಕರ್ ಮತ್ತು ಅಂಜಲಿ ಬಾಯಿ ಶಿಂಧೆ ದಂಪತಿ ಕಥೆ ಸಾಕಷ್ಟು ಜನಕ್ಕೆ ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಬಹಳ ಗಮನ ಸೆಳೆಯುತ್ತದೆ.

ಆಕಾಶ್ ಹಾಗೂ ಅಂಜಲಿ ಜೋಡಿಯ ಪ್ರೇಮ, ತ್ಯಾಗ ಮತ್ತು ಸ್ಫೂರ್ತಿದಾಯಕ ಜೀವನದ ಕಥೆ 'ಲವ್ ಯೂ ಮುದ್ದು' ಹೆಸರಿನಲ್ಲಿ ಸಿನಿಮಾ ರೂಪ ಪಡೆದಿತ್ತು. ತಿಂಗಳ ಹಿಂದೆ ತೆರೆಕಂಡಿದ್ದ ಈ ಸಿನಿಮಾ ಇದೀಗ ಓಟಿಟಿಗೆ ಬಂದಿದೆ. ಕುಮಾರ್ ನಿರ್ದೇಶನದ ಚಿತ್ರದಲ್ಲಿ ಸಿದ್ದು ಮೂಲಿಮನಿ ಹಾಗೂ ರೇಷ್ಮಾ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಎಷ್ಟೇ ಕಷ್ಟ ಬಂದರೂ ಪ್ರೀತಿಸಿದವರ ಕೈಬಿಡಬಾರದು ಎನ್ನುವ ಸಂದೇಶ ಈ ಚಿತ್ರದಲ್ಲಿದೆ.

Critically acclaimed Latest Kannada film now streaming in ott

ಆಕಾಶ್ ಹಾಗೂ ಅಂಜಲಿ ಕಥೆ ಚಿತ್ರದಲ್ಲಿ ಕರ್ಣ(ಸಿದ್ದು ಮೂಲಿಮನಿ) ಹಾಗೂ ಸುಮತಿ(ರೇಷ್ಮಾ) ಪ್ರೇಮಕಥೆಯಾಗಿ ಮೂಡಿ ಬಂದಿದೆ. ಆಕಸ್ಮಿಕವಾಗಿ ಶುರುವಾಗುವ ಇಬ್ಬರ ಪ್ರೀತಿಗೆ ಬಳಿಕ ಸಾಕಷ್ಟು ತಿರುವು ಸಿಗುತ್ತದೆ. ಅಪಘಾತದಲ್ಲಿ ಸುಮತಿ ಕೋಮಾ ಸ್ಥಿತಿಗೆ ಹೋಗುತ್ತಾಳೆ. ಆಕೆಯನ್ನು ಕರ್ಣ ಮಗುವಿನ ರೀತಿ ಆರೈಕೆ ಮಾಡುತ್ತಾನೆ. ಆಕೆಯನ್ನು ಬಿಟ್ಟು ಬೇರೆ ಪ್ರಪಂಚ ಇಲ್ಲ ಎನ್ನುವಂತೆ ಬದುಕುತ್ತಾನೆ. ಮುಂದೆ ಕತೆ ಏನಾಗುತ್ತದೆ ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು.

ಸದ್ಯ 'ಲವ್ ಯೂ ಮುದ್ದು' ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಕ್ರಿಸ್‌ಮಸ್ ವೀಕೆಂಡ್‌ ರಜೆಯಲ್ಲಿ ಮನೆಯಲ್ಲೇ ಸಿನಿಮಾ ನೋಡಬಹುದು. ಲವ್ ಸ್ಟೋರಿ ಸಿನಿಮಾಗಳನ್ನು ಇಷ್ಟಪಡುವವರು ಈ ಸಿನಿಮಾ ನೋಡಬಹುದು. ಹೆಚ್ಚು ಬಿಲ್ಡಪ್ ಇಲ್ಲದೇ ನಮ್ಮ ನಡುವೆ ನಡೆಯುವ ಕಥೆ ಎನ್ನುವಂತೆ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಕಥೆ ಸ್ಫೂರ್ತಿ ಆಗಿದ್ದ ನಿಜ ಜೀವನದ ನಾಯಕ, ನಾಯಕಿಯನ್ನು ಚಿತ್ರತಂಡ ಪರಿಚಯಿಸಿತ್ತು.

Critically acclaimed Latest Kannada film now streaming in ott

ಬೆಂಗಳೂರು, ಕಾರ್ಕಳ ಸುತ್ತಾಮುತ್ತಾ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ರಾಜೇಶ್ ನಟರಂಗ, ತಬಲಾ ನಾಣಿ ಕೂಡ 'ಲವ್ ಯು ಮುದ್ದು' ಚಿತ್ರದಲ್ಲಿ ನಟಿಸಿದ್ದಾರೆ. ಅನಿರುದ್ಧ್ ಶಾಸ್ತ್ರೀ ಸಂಗೀತ ಚಿತ್ರಕ್ಕಿದೆ. ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದ್ದ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲಿಲ್ಲ. ಈಗ ಮನೆಯಲ್ಲೇ ಕೂತು ಸಿನಿಮಾ ವೀಕ್ಷಿಸುವ ಅವಕಾಶ ಸಿಕ್ಕಿದೆ.

ಕಿಶನ್ ಟಿ. ಎನ್ ನಿರ್ಮಾಣದ ರೊಮ್ಯಾಂಟಿಕ್ ಚಿತ್ರವನ್ನು ಛಾಯಾಗ್ರಾಹಕ ಕಿಶನ್ ದೀಪಕ್ ಸೆರೆ ಹಿಡಿದಿದ್ದಾರೆ. ನವೆಂಬರ್ 27ರಂದು 'ಲವ್ ಯೂ ಮುದ್ದು' ಸಿನಿಮಾ ಬಿಡುಗಡೆ ಆಗಿತ್ತು. ಕಿರುತೆರೆ ನಟ ಸಿದ್ದು ಮೂಲಿಮನಿ ನಿಧಾನವಾಗಿ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿದ್ದಾರೆ. ಸಣ್ಣಪುಟ್ಟ ಪಾತ್ರಗಳ ಮೂಲಕ ಪರಿಚಿತರಾಗಿದ್ದ ಸಿದ್ದು ಈಗ ಹೀರೊ ಆಗಿ ನಟಿಸಲು ಆರಂಭಿಸಿದ್ದಾರೆ.

'ಅಜ್ಞಾತವಾಸಿ' ಚಿತ್ರದಲ್ಲಿ ಕೂಡ ಸಿದ್ದು ನಟಿಸಿ ಗಮನ ಸೆಳೆದಿದ್ದರು. 'ಕೋಲ್ಡ್ ಕಾಲ್' ಎಂಬ ತಮಿಳು ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಮುಂದೆ 'ಸೀಟ್ ಎಡ್ಜ್' ಎಂಬ ಮತ್ತೊಂದು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಗಿರಿಧರ್ .ಟಿ ನಿರ್ಮಾಣದ ಈ ಸಿನಿಮಾ ಕೂಡ ನಿರೀಕ್ಷೆ ಹುಟ್ಟಾಕ್ಕಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ. 10 ವರ್ಷಗಳ ಹಿಂದೆ 'ರಂಗಿತರಂಗ' ಚಿತ್ರದಲ್ಲಿ ಮೊದಲ ಬಾರಿಗೆ ಸಿದ್ದು ಬಣ್ಣ ಹಚ್ಚಿದ್ದರು.

More from Filmibeat

Read more about: sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X