For Quick Alerts
  ALLOW NOTIFICATIONS  
  For Daily Alerts

  'ರತ್ನನ್ ಪ್ರಪಂಚ': ಅಕ್ಟೋಬರ್ 22ಕ್ಕೆ ರತ್ನಾಕರನ ಜೀವನ ಕತೆ ಅನಾವರಣ

  By ಫಿಲ್ಮಿಬೀಟ್ ಡೆಸ್ಕ್
  |

  ಡಾಲಿ ಧನಂಜಯ್ ನಟಿಸಿರುವ ಹಾಸ್ಯಮಯ ಟ್ರಾವೆಲ್ ಸಿನಿಮಾ 'ರತ್ನನ್ ಪ್ರಪಂಚ' ಅಕ್ಟೋಬರ್ 22ರಂದು ಅಮೆಜಾನ್ ಪ್ರೈಂನಲ್ಲಿ ನೇರವಾಗಿ ಬಿಡಗುಡೆ ಆಗಲಿದೆ.

  ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾದಲ್ಲಿ ಡಾಲಿ ಧನಂಜಯ್‌ರ ಪಾತ್ರ ರತ್ನಾಕರನ ಜೀವನ, ಪಯಣದ ಬಗ್ಗೆ ಸೂಕ್ಷ್ಮ ನೋಟವನ್ನು ನೀಡುತ್ತಿದೆ. ಡಾಲಿ ಧನಂಜಯ್ ಜೊತೆಗೆ ರೆಬಾ ಮೋನಿಕಾ ಜಾನ್, ಉಮಾಶ್ರೀ, ರವಿಶಂಕರ್, ಅನು ಪ್ರಭಾಕರ್, ಪ್ರಮೋದ್, ವೈನಿಧಿ ಜಗದೀಶ್, ಅಚ್ಯುತ್ ಕುಮಾರ್ ಮತ್ತು ಶ್ರುತಿ ಕೃಷ್ಣ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ.

  ಸಿನಿಮಾದಲ್ಲಿ ರತ್ನಾಕರ ತನ್ನ ಪ್ರಸ್ತುತ ಜೀವನದ ಅಪಾಯಗಳನ್ನು ದಾಟುವಾಗ ತನ್ನ ಬೇರುಗಳನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಾರೆ. ಈ ಚಿತ್ರವು ಒಂದು ಅನನ್ಯ ಕಥೆಯನ್ನು ಬಿಚ್ಚಿಡುತ್ತದೆ ಮತ್ತು ರತ್ನಾಕರನ ಸಂತೋಷದ ಅನ್ವೇಷಣೆಯಲ್ಲಿ, ಆತನು ತನ್ನ ಜಗತ್ತನ್ನು ಮರುಶೋಧಿಸುವಾಗ ಉಂಟಾಗುವ ಆಘಾತ, ನಗು ಮತ್ತು ಸಂದಿಗ್ಧತೆಗಳಿಂದ ತುಂಬಿದ ಸವಾರಿಯಲ್ಲಿ ಆತ ಸಾಗುತ್ತಾನೆ. ಈ ಪ್ರಯಾಣದಲ್ಲಿ, ಆತನ ಜೊತೆಯಲ್ಲಿ ಹಿಂದೆಂದೂ ಕಂಡು ಕೇಳರಿಯದ ಕಥೆಯನ್ನು ಬ್ರೇಕ್ ಮಾಡಲು ಪತ್ರಕರ್ತೆ ಮಯೂರಿ ಜೊತೆಯಾಗುತ್ತಾರೆ.

  "ರತ್ನನ್ ಪ್ರಪಂಚ ಬಹಳ ಸಾಪೇಕ್ಷವಾದ ಸನ್ನಿವೇಶದ ಸುತ್ತ ಸುತ್ತುತ್ತದೆ. ಈ ಕಥೆಯ ಸರಳತೆ ನನ್ನನ್ನು ಸೆಳೆಯುತ್ತದೆ ಮತ್ತು ಪ್ರೈಮ್ ವಿಡಿಯೋ ಮೂಲಕ ರತ್ನಾಕರನ ಈ ಕಥೆ ಭಾರತೀಯ ಮತ್ತು ಜಾಗತಿಕ ಪ್ರೇಕ್ಷಕರನ್ನು ತಲುಪುತ್ತದೆ ಎಂದು ನಾನು ತುಂಬಾ ಉತ್ಸುಕನಾಗಿದ್ದೇನೆ. ಏಕೆಂದರೆ ನೀವು ಎಲ್ಲಿಯವರೇ ಆಗಿದ್ದರೂ, ನೀವು ಈ ಮನುಷ್ಯನ ಪ್ರಯಾಣಕ್ಕೆ ನೀವೂ ಸಂಬಂಧವನ್ನು ಹೊಂದುತ್ತೀರಿ. ನಟ ಧನಂಜಯ್ ಹೇಳುವಂತೆ, "ಈ ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನು ಹೇಗೆ ಸ್ವಯಂ ಅನ್ವೇಷಣೆಯ ಪ್ರಯಾಣದಲ್ಲಿದ್ದಾನೆ ಮತ್ತು ಅಂತಿಮ ಸಂತೋಷವನ್ನು ಕಂಡುಕೊಳ್ಳುತ್ತಾನೆ ಎಂಬ ವಾಸ್ತವವನ್ನು ಚಿತ್ರವು ಅನ್ವೇಷಿಸುತ್ತದೆ. ರತ್ನಾಕರನ ಪ್ರಯಾಣವು ಎತ್ತರ, ತಗ್ಗು ಮತ್ತು ಗುಂಡಿಗಳ ರಸ್ತೆಗಳಿಂದ ತುಂಬಿದೆ. ಅವನು ತನ್ನ ಜೀವನಕ್ಕಾಗಿ ಒಂದು ಯೋಜನೆಯನ್ನು ಹೊಂದಿದ್ದಾನೆ ಮತ್ತು ಜೀವನವು ಅವನಿಗೆ ಹೇಗೆ ವಿಭಿನ್ನ ಪಥವನ್ನು ತೋರಿಸಿದೆ ಎಂಬುದನ್ನು ಚಿತ್ರದಲ್ಲಿ ಸುಂದರವಾಗಿ ಪ್ರದರ್ಶಿಸಲಾಗಿದೆ.

  "ಶ್ರೇಷ್ಠ ಕಥೆಗಳು ಯಾವುದೇ ಗಡಿಗಳನ್ನು ಹೊಂದಿಲ್ಲ. ಮತ್ತು 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಹರಡಿರುವ ಪ್ರೈಮ್ ವೀಡಿಯೋ ಗ್ರಾಹಕರೊಂದಿಗೆ, ನಾವು ಉತ್ತಮವಾದ ಸ್ಥಳೀಯ ಕಥೆಗಳನ್ನು 'ರತ್ನನ್ ಪ್ರಪಂಚ' ಮೂಲಕ ಒದಗಿಸಲು ನಮಗೆ ಸಾಧ್ಯವಾಗುತ್ತಿದೆ ಎಂದು ಸುಶಾಂತ್ ಶ್ರೀರಾಮ್, ಡೈರೆಕ್ಟರ್ - ಮಾರ್ಕೆಟಿಂಗ್, ಇಂಡಿಯಾ, ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾ ಹೇಳಿದ್ದಾರೆ. ಅಲ್ಲದೆ, "ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ, ಸೃಜನಶೀಲ ಮತ್ತು ಆಕರ್ಷಕ ಕಥೆಗಳು ಮತ್ತು ಕಥೆಗಾರರನ್ನು ಪೋಷಿಸುವುದು ನಮ್ಮ ನಿರಂತರ ಪ್ರಯತ್ನವಾಗಿದೆ, ಪ್ರಪಂಚದಾದ್ಯಂತ ನಮ್ಮ ಪ್ರೇಕ್ಷಕರಿಗೆ ಕೆಲವು ಅತ್ಯುತ್ತಮ ಕಥೆಗಳನ್ನು ತರುವ ಉದ್ದೇಶವನ್ನು ನಾವು ಹೊಂದಿದ್ದೇವೆ. 'ರತ್ನನ್ ಪ್ರಪಂಚ' ಅಂತಹ ಒಂದು ಕಥೆಯು ಸಾರ್ವತ್ರಿಕ ಆಕರ್ಷಣೆಯನ್ನು ಹೊಂದಿರುವುದಲ್ಲದೆ, ನಮ್ಮ ದೇಶದ ಅದ್ಭುತ ಸ್ಥಳೀಯ ಪ್ರತಿಭೆಯನ್ನು ಪ್ರದರ್ಶಿಸುತ್ತದೆ.

  Daali Dhananjay Starer Rathnan Prapancha Movie Releasing On October 22

  ಈ ರೀತಿಯ ಚಲನಚಿತ್ರವು ಸಾರ್ವತ್ರಿಕ ಆಕರ್ಷಣೆಯನ್ನು ಹೊಂದಿದೆ ಮತ್ತು ಇದು ಭಾರತೀಯ ಮತ್ತು ಜಾಗತಿಕ ಪ್ರೇಕ್ಷಕರೊಂದಿಗೆ ಸಂವಾದ ನಡೆಸುತ್ತದೆ. ಇದು ನಾವು ಅಮೆಜಾನ್ ಪ್ರೈಮ್ ವೀಡಿಯೊದೊಂದಿಗೆ ಒಗಡೂಡಲು ನಿರ್ಧರಿಸಿದ ಒಂದು ಮುಖ್ಯ ಕಾರಣವೂ ಆಗಿದೆ. ಒಂದೇ ದಿನದಲ್ಲಿ 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡುವುದರಿಂದ, ಈ ಕಥೆಯನ್ನು ಕನ್ನಡ ಚಲನಚಿತ್ರೋದ್ಯಮದಿಂದ ಜಾಗತಿಕ ಪ್ರೇಕ್ಷಕರಿಗೆ ಕೊಂಡೊಯ್ಯಲು ಸಹಾಯವಾಗುತ್ತದೆ ಮತ್ತು ಇದು ನಮ್ಮ ಮೊದಲ ನಿರ್ಮಾಣದ ಒಂದು ಸಾಧನೆಯಾಗಿದೆ" ಎಂದು ನಿರ್ದೇಶಕ ರೋಹಿತ್ ಪದಕಿ ಹೇಳಿದ್ದಾರೆ.

  "ಒಂದು ಕಥೆಯಾಗಿ ರತ್ನನ್ ಪ್ರಪಂಚ ಹಿಂದೆಂದೂ ಕೇಳಿರದಂಥದ್ದು. ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ವಿಶ್ವಾದ್ಯಂತ ಪ್ರೇಕ್ಷಕರಿಗೆ ಈ ಕಥೆಯನ್ನು ಒದಗಿಸುವಲ್ಲಿ ನಾನು ತುಂಬಾ ಉತ್ಸುಕನಾಗಿದ್ದೇನೆ'' ಎಂದು ಉತ್ಸಾಹಿತರಾಗಿ ಹೇಳಿದ್ದಾರೆ ನಿರ್ದೇಶಕ. 'ರತ್ನನ್ ಪ್ರಪಂಚ' ಅಕ್ಟೋಬರ್ 22 ರಂದು ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಮತ್ತು ಜಾಗತಿಕವಾಗಿ ಪ್ರದರ್ಶನಗೊಳ್ಳಲಿದೆ.

  English summary
  Daali Dhananjay starer Rathnan Prapancha movie releasing on October 22 on Amazon prime. Movie's trailer released already and appreciated by movie people.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X