ಓಟಿಟಿಗೆ ಬಂದ 'ಡೇರ್ ಡೆವಿಲ್ ಮುಸ್ತಾಫಾ'; ಜೂನ್ 16ರಂದು ಓಟಿಟಿ ಪ್ರವೇಶಿಸಿದ ಚಿತ್ರಗಳ ಸಂಪೂರ್ಣ ಪಟ್ಟಿ
ಡೇರ್ ಡೆವಿಲ್ ಮುಸ್ತಾಫಾ.. ಇಂಡಿಯನ್ ಪ್ರೀಮಿಯರ್ ಲೀಗ್ ಹಾವಳಿಯ ನಡುವೆಯೂ ಕರ್ನಾಟಕದಲ್ಲಿ ಸದ್ದು ಮಾಡಿದ ಚಿತ್ರ. ಖ್ಯಾತ ಬರಹಗಾರ ಪೂರ್ಣ ಚಂದ್ರ ತೇಜಸ್ವಿ ಅವರ 'ಅಬಚೂರಿನ ಪೋಸ್ಟಾಫೀಸು' ಪುಸ್ತಕವನ್ನು ಆಧರಿಸಿದ್ದ ಈ ಚಿತ್ರಕ್ಕೆ ಶಶಾಂಕ್ ಸೋಗಾಲ್ ಆಕ್ಷನ್ ಕಟ್ ಹೇಳಿದ್ದಾರೆ.
ಚಿತ್ರ ಕಳೆದ ಮೇ 19ರಂದು ರಾಜ್ಯಾದ್ಯಂತ ಬಿಡುಗಡೆಗೊಂಡಿತ್ತು. ಪೂರ್ಣಚಂದ್ರ ತೇಜಸ್ವಿ ಅವರ 100 ಜನ ಅಭಿಮಾನಿಗಳು ಸೇರಿ ಚಿತ್ರವನ್ನು ನಿರ್ಮಿಸಿದ್ದರು. ಚಿತ್ರ ಉತ್ತಮ ಆರಂಭ ಪಡೆದುಕೊಳ್ಳುವುದರ ಜತೆಗೆ ಒಳ್ಳೆಯ ವಿಮರ್ಶೆಗಳನ್ನು ಪಡೆದುಕೊಂಡಿತ್ತು.

ಹೀಗೆ ಚಿತ್ರಮಂದಿರದಲ್ಲಿ ಮೂವತ್ತು ದಿನಗಳ ಪ್ರದರ್ಶನವನ್ನು ಯಶಸ್ವಿಯಾಗಿ ಪೂರೈಸಿರುವ ಡೇರ್ ಡೆವಿಲ್ ಮುಸ್ತಾಫಾ ಇದೀಗ ಓಟಿಟಿಗೆ ಲಗ್ಗೆ ಇಟ್ಟಿದೆ. ಇಂದು ( ಜೂನ್ 16 ) ಡೇರ್ ಡೆವಿಲ್ ಮುಸ್ತಾಫಾ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮ್ ಆಗುತ್ತಿದೆ.
ಈ ಚಿತ್ರದ ಜತೆಗೆ ವಿವಿಧ ಭಾಷೆಗಳ ಹಲವಾರು ಚಿತ್ರಗಳು ಹಾಗೂ ವೆಬ್ ಸರಣಿಗಳು ಇಂದು ಓಟಿಟಿಯಲ್ಲಿ ಬಿಡುಗಡೆಗೊಂಡಿದ್ದು, ಆ ಚಿತ್ರಗಳು ಹಾಗೂ ವೆಬ್ ಸರಣಿಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..
* ಎಕ್ಸ್ಟ್ರಾಕ್ಷನ್ 2 - ಇಂಗ್ಲಿಷ್, ತೆಲುಗು, ತಮಿಳು ಹಾಗೂ ಹಿಂದಿ - ನೆಟ್‌ಫ್ಲಿಕ್ಸ್
* ಬ್ಲಾಕ್ ಕವರ್ - ಜಪಾನಿಸ್ ಆನಿಮೇಟೆಡ್ ಚಿತ್ರ - ನೆಟ್‌ಫ್ಲಿಕ್ಸ್
* ದ ವಿಲೇಜ್ - ಜಪಾನೀಸ್ - ನೆಟ್‌ಫ್ಲಿಕ್ಸ್
* ದ ಫುಲ್ ಮಾಂಟಿ - ಇಂಗ್ಲಿಷ್, ವೆಬ್ ಸರಣಿ - ಹಾಟ್ ಸ್ಟಾರ್
* ಸ್ಟಾನ್ ಲೀ - ಇಂಗ್ಲಿಷ್, ಚಲನಚಿತ್ರ - ಹಾಟ್ ಸ್ಟಾರ್
* ಶೆವಾಲಿಯರ್ - ಇಂಗ್ಲಿಷ್, ಚಲನಚಿತ್ರ - ಹಾಟ್ ಸ್ಟಾರ್
* ಬಿಚ್ಚಗಾಡು 2 - ತಮಿಳು, ತೆಲುಗು, ಕನ್ನಡ, ಮಲಯಾಳಂ - ಹಾಟ್ ಸ್ಟಾರ್
* ಶೈತಾನ್ - ವೆಬ್ ಸರಣಿ, ಸೀರಿಸ್ 1 - ಹಾಟ್ ಸ್ಟಾರ್
* ತಮಿಳರಸನ್ - ತಮಿಳು ಚಲನಚಿತ್ರ - ಜೀ ಫೈವ್
* ಸಿಯಾ - ಹಿಂದಿ ಚಲನಚಿತ್ರ - ಜೀ ಫೈವ್
* ಕಂದಹಾರ್ - ಇಂಗ್ಲಿಷ್ ಚಲನಚಿತ್ರ - ಅಮೆಜಾನ್ ಪ್ರೈಮ್ ವಿಡಿಯೊ
* ರಾವಣ ಕೊಟ್ಟಂ - ತಮಿಳು ಚಲನಚಿತ್ರ - ಅಮೆಜಾನ್ ಪ್ರೈಮ್ ವಿಡಿಯೊ ಮತ್ತು ಆಹಾ ತಮಿಳು
* ಚಾರ್ಲ್ಸ್ ಎಂಟರ್‌ಪ್ರೈಸಸ್ - ಮಲಯಾಳಂ ಚಲನಚಿತ್ರ - ಅಮೆಜಾನ್ ಪ್ರೈಮ್ ವಿಡಿಯೊ
* ತಾರಂ ತೀರ್ಥ ಕೂಡರಮ್ - ಮಲಯಾಳಂ ಚಲನಚಿತ್ರ - ಅಮೆಜಾನ್ ಪ್ರೈಮ್ ವಿಡಿಯೊ
* ಜೀ ಕರ್ದ - ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ವೆಬ್ ಸರಣಿ, ಸೀಸನ್ 1 - ಅಮೆಜಾನ್ ಪ್ರೈಮ್ ವಿಡಿಯೊ
* ಟು ಸೋಲ್ಸ್ - ತೆಲುಗು ಚಲನಚಿತ್ರ - ಅಮೆಜಾನ್ ಪ್ರೈಮ್ ವಿಡಿಯೊ
* ಹೈವೇ ಲವ್ - ಹಿಂದಿ ವೆಬ್ ಸೀರಿಸ್ ಸೀಸನ್ 1 - ಅಮೆಜಾನ್ ಮಿನಿ ಟಿವಿ
* ಕನುಲು ತೆರಿಚಿನ ಕನುಲು ಮೂಸಿನ - ತೆಲುಗು, ಚಲನಚಿತ್ರ - ಈ ಟಿವಿ ವಿನ್
* ಐ ಲವ್ ಯೂ - ಹಿಂದಿ ಚಲನಚಿತ್ರ - ಜಿಯೊ ಸಿನಿಮಾ


Click it and Unblock the Notifications











