Love Birds OTT : ತೆರೆಕಂಡ 22 ದಿನಕ್ಕೆ ಓಟಿಟಿಗೆ ಬಂತು ಲವ್ ಬರ್ಡ್ಸ್; ಮಾರ್ಚ್ 10ರಂದು ಓಟಿಟಿಗೆ ಬಂದ ಚಿತ್ರಗಳ ಪಟ್ಟಿ
ಸದ್ಯ ನಾವೆಲ್ಲರೂ ಓಟಿಟಿ ಯುಗದಲ್ಲಿದ್ದೇವೆ. ಈ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರಗಳು ಐವತ್ತು ದಿನ ಪೂರೈಸಿದ್ವಾ, ನೂರು ದಿನ ಓಡಿದ್ವಾ ಎಂದು ಗೆಲುವನ್ನು ಲೆಕ್ಕಾಚಾರ ಹಾಕಲಾಗುತ್ತಿದ್ದ ದಿನಗಳು ಈಗಿಲ್ಲ. ಚಿತ್ರ ಚಿತ್ರಮಂದಿರದಲ್ಲಿ ಎಷ್ಟು ದಿನ ಇತ್ತು ಎಂಬುದನ್ನು ಈಗ ಯಾರೂ ಸಹ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಈಗೇನಿದ್ದರೂ ಚಿತ್ರ ಎಷ್ಟು ಗಳಿಸಿತು, ಎಷ್ಟು ಲಾಭ ಸಂಪಾದಿಸಿತು ಎಂಬುದಷ್ಟೇ ಮುಖ್ಯ.
ಈ ಹಿಂದೆ ಚಿತ್ರಮಂದಿರಗಳಿಗೆ ಹಾಜರಾಗಿ ಚಿತ್ರವನ್ನು ನೋಡುತ್ತಿದ್ದ ಅದೆಷ್ಟೋ ಸಿನಿ ರಸಿಕರು ಹೊಸ ಚಿತ್ರಗಳು ಬಿಡುಗಡೆಯಾದಾಗ ಓಟಿಟಿಗೆ ಬಂದಮೇಲೆ ನೋಡಿದರಾಯಿತು ಎಂಬ ಮನೋಭಾವನೆ ಹೊಂದಿದ್ದಾರೆ. ಇನ್ನು ಚಿತ್ರಗಳ ಓಟಿಟಿ ಹಕ್ಕು ಮಾರಾಟವಾದಾಗ ಇಂತಿಷ್ಟು ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವಾದ ಬಳಿಕ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಬಹುದು ಎಂಬ ಒಪ್ಪಂದವೂ ಸಹ ಇರುತ್ತದೆ.

ಕೆಲ ಚಿತ್ರಗಳು ಬೇಗನೆ ಪುಟ್ಟ ಪರದೆಗೆ ಬಂದರೆ, ಇನ್ನೂ ಕೆಲ ಸಿನಿಮಾಗಳು ತುಸು ತಡವಾಗಿ ಓಟಿಟಿಗೆ ಬರುತ್ತವೆ ಹಾಗೂ ಇನ್ನೂ ಕೆಲ ಸಿನಿಮಾಗಳು ಓಟಿಟಿಗೆ ಬಂದ ನಂತರವೂ ಚಿತ್ರಮಂದಿರಗಳಲ್ಲಿ ಶತದಿನೋತ್ಸವವನ್ನು ಆಚರಿಸುತ್ತವೆ. ಹೌದು, ಕೆಲ ಚಿತ್ರಗಳು ಚಿತ್ರಮಂದಿರಗಳಲ್ಲಿ ಚೆನ್ನಾಗಿ ಪ್ರದರ್ಶನವಾಗುತ್ತಿರುವಾಗಲೇ ಓಟಿಟಿಗೆ ಲಗ್ಗೆ ಇಡುತ್ತವೆ. ಈ ಸಾಲಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಚಿತ್ರ ಲವ್ ಬರ್ಡ್ಸ್.
ಹೌದು, ಲವ್ ಮಾಕ್‌ಟೇಲ್ ರೀತಿಯ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಿದ್ದ ಕ್ಯೂಟ್ ಕಪಲ್ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ನಟಿಸಿರುವ ಮತ್ತೊಂದು ಚಿತ್ರ ಲವ್ ಬರ್ಡ್ಸ್ ಇಂದು ( ಮಾರ್ಚ್ 10 ) ಓಟಿಟಿಗೆ ಬಂದಿದೆ. ಅಮೆಜಾನ್ ಪ್ರೈಮ್ ವಿಡಿಯೊ ಅಪ್ಲಿಕೇಶನ್‌ನಲ್ಲಿ ಈ ಚಿತ್ರ ಪ್ರಸಾರವಾಗುತ್ತಿದೆ. ಇಂದಿಗೆ ಚಿತ್ರ ಬಿಡುಗಡೆಯಾಗಿ 22 ದಿನಗಳಾಗಿದ್ದು, ಇಂದಿಗೂ ಬೆಂಗಳೂರಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಪ್ರದರ್ಶನಗಳು ಹಾಗೂ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಪ್ರದರ್ಶನಗಳನ್ನು ಕಾಣುತ್ತಿದೆ.
ಒಟ್ಟಿನಲ್ಲಿ ಲವ್ ಬರ್ಡ್ಸ್ ಪುಟ್ಟ ಪರದೆ ಹಾಗೂ ದೊಡ್ಡ ಪರದೆ ಎರಡೂ ಕಡೆ ಲಭ್ಯವಿದ್ದು, ಈ ಚಿತ್ರವನ್ನು ಇನ್ನೂ ನೋಡದವರು ಥಿಯೇಟರ್‌ನಲ್ಲಾದರೂ ವೀಕ್ಷಿಸಬಹುದು ಅಥವಾ ಓಟಿಟಿಯಲ್ಲಾದರೂ ಚಿತ್ರವನ್ನು ವೀಕ್ಷಿಸಬಹುದು. ಇನ್ನು ಲವ್ ಬರ್ಡ್ಸ್ ಜತೆಗೆ ಇಂದು ( ಮಾರ್ಚ್ 10 ) ಓಟಿಟಿಯಲ್ಲಿ ಬಿಡುಗಡೆಯಾಗಿರುವ ಇತರೆ ಚಿತ್ರಗಳು ಯಾವುವು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..
* ರನ್ ಬೇಬಿ ರನ್ ( ತಮಿಳು, ತೆಲುಗು, ಕನ್ನಡ , ಮಲಯಾಳಂ ಹಾಗೂ ಹಿಂದಿ - ಚಲನಚಿತ್ರ - ಡಿಸ್ನೆ ಪ್ಲಸ್ ಹಾಟ್‌ಸ್ಟಾರ್ )
* ಚಂದ್ ಕ್ಯಾನ್ ಡಂಕ್ ( ಇಂಗ್ಲಿಷ್ - ಚಲನಚಿತ್ರ - ಹಾಟ್‌ಸ್ಟಾರ್ )
* ಕ್ರಿಸ್ಟ್ರಿ ( ಮಲಯಾಳಂ - ಚಲನಚಿತ್ರ - ಸೋನಿ ಲಿವ್ )
* ಡಾಡಾ ( ತಮಿಳು - ಚಲನಚಿತ್ರ - ಅಮೆಜಾನ್ ಪ್ರೈಮ್ ವಿಡಿಯೊ )
* ವಾರಿಸು ( ಹಿಂದಿ - ಚಲನಚಿತ್ರ - ಅಮೆಜಾನ್ ಪ್ರೈಮ್ ವಿಡಿಯೊ)
* ಕ್ರಿಸ್ಟೋಫರ್ ( ಮಲಯಾಳಂ, ತೆಲುಗು, ಹಿಂದಿ ಹಾಗೂ ತಮಿಳು - ಚಲನಚಿತ್ರ - ಅಮೆಜಾನ್ ಪ್ರೈಮ್ ವಿಡಿಯೊ )
* ರೇಖಾ ( ಮಲಯಾಳಂ - ಚಲನಚಿತ್ರ - ನೆಟ್‌ಫ್ಲಿಕ್ಸ್ )
* ಲೂಥರ್ - ದ ಫಾಲೆನ್ ಸನ್ ( ಇಂಗ್ಲಿಷ್ - ಚಲನಚಿತ್ರ - ನೆಟ್‌ಫ್ಲಿಕ್ಸ್ )
* ರೇಮೊ ( ಕನ್ನಡ - ಚಲನಚಿತ್ರ - ಜೀ ಫೈವ್ )
* ಬೊಮ್ಮಾಯಿ ನಾಯಕಿ ( ತಮಿಳು - ಚಲನಚಿತ್ರ - ಜೀ ಫೈವ್ )
* ಮಿಡಲ್ ಕ್ಲಾಸ್ ಲವ್ (ಹಿಂದಿ - ಚಲನಚಿತ್ರ - ಜೀ ಫೈವ್ )
* ಬೌಡಿ ಕ್ಯಾಂಟೀನ್ ( ಬೆಂಗಾಲಿ - ಚಲನಚಿತ್ರ - ಜೀ ಫೈವ್ )


Click it and Unblock the Notifications











