Devil OTT Release Date: ದರ್ಶನ್ 'ಡೆವಿಲ್' ಓಟಿಟಿ ರಿಲೀಸ್ ಡೇಟ್; ಅಭಿಮಾನಿಗಳಿಗೆ ಸರ್‌ಪ್ರೈಸ್
ದರ್ಶನ್ ನಟನೆಯ 'ಡೆವಿಲ್' ಸಿನಿಮಾ 7ನೇ ವಾರ ಯಶಸ್ವಿ ಪ್ರದರ್ಶನ ಕಾಣ್ತಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಅಭಿಮಾನಿಗಳೇ ಚಿತ್ರವನ್ನು ಅದ್ಧೂರಿಯಾಗಿ ಸ್ವಾಗತಿಸಿ ಮೆರೆಸಿದ್ದರು. ತಿಂಗಳ ಹಿಂದೆ ತೆರೆಕಂಡಿದ್ದ '45' ಹಾಗೂ 'ಮಾರ್ಕ್' ಚಿತ್ರಗಳು ಓಟಿಟಿಗೆ ಬಂದರೂ 'ಡೆವಿಲ್' ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿಲ್ಲ.
ಡಿಸೆಂಬರ್ 11ರಂದು ತೆರೆಗೆ ಬಂದಿದ್ದ 'ಡೆವಿಲ್' ಸಿನಿಮಾ ಫಸ್ಟ್ ವೀಕೆಂಡ್ ಸಖತ್ ಸದ್ದು ಮಾಡಿತ್ತು. ಆದರೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಡಲ್ಲಾಗಿತ್ತು. 2ನೇ ವಾರದಲ್ಲಿ ಸಿನಿಮಾ ಕಲೆಕ್ಷನ್ ಇಳಿಕೆಯಾಗಿತ್ತು. '45' ಹಾಗೂ 'ಮಾರ್ಕ್' ಸಿನಿಮಾಗಳು ಬಿಡುಗಡೆಯಾಗಿ 'ಡೆವಿಲ್' ಚಿತ್ರಕ್ಕೆ ಮತ್ತಷ್ಟು ಹಿನ್ನಡೆ ಆಯಿತು. ಆದರೂ ದರ್ಶನ್ ಅಭಿಮಾನಿಗಳು ಸಿನಿಮಾವನ್ನು ಕೈಬಿಡಲಿಲ್ಲ.

'ಡೆವಿಲ್' ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ದರ್ಶನ್ ಹುಟ್ಟುಹಬ್ಬಕ್ಕೆ ಅಂದರೆ ಫೆಬ್ರವರಿ 16ರಂದು ಸಿನಿಮಾ ಓಟಿಟಿಗೆ ಬರಬಹುದು ಎನ್ನುವ ಊಹಾಪೋಹ ಶುರುವಾಗಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯಕ್ಕೆ ಬಿಡುಗಡೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ ಇದೇ ಮೊದಲ ಬಾರಿಗೆ ನೆಚ್ಚಿನ ನಟನ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸುವಂತಾಗಿದೆ. ಆದರೆ ಇದೇ ಸಂಭ್ರಮದಲ್ಲಿ 'ಡೆವಿಲ್' ಸಿನಿಮಾ ಸರ್‌ಪ್ರೈಸ್ ಆಗಿ ಓಟಿಟಿಗೆ ಬರುವ ನಿರೀಕ್ಷೆಯಿದೆ.
ಪ್ರಕಾಶ್ ನಿರ್ಮಿಸಿ ನಿರ್ದೇಶನ ಮಾಡಿರುವ 'ಡೆವಿಲ್' ಚಿತ್ರದಲ್ಲಿ ದರ್ಶನ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ರಚನಾ ರೈ ನಾಯಕಿಯಾಗಿ ಮಿಂಚಿದ್ದು ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸುಧಾಕರ್ ರಾಜ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ.

'ಡೆವಿಲ್' ಚಿತ್ರದ ಕಥೆ
ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ. ಕರುನಾಡ ಪ್ರಜಾಪಕ್ಷದ ನಾಯಕ ರಾಜಶೇಖರ್(ಮಹೇಶ್ ಮಂಜ್ರೇಕರ್) ಸಿಎಂ ಆಗಿರುತ್ತಾನೆ. ಭ್ರಷ್ಟಾಚಾರ ಆರೋಪದಲ್ಲಿ ಆತ ಜೈಲು ಸೇರಿದಾಗ ಮತ್ತೆ ಚುನಾವಣೆ ಎದುರಾಗುತ್ತದೆ. ತನ್ನ ಮಗ ಧನುಷ್(ದರ್ಶನ್)ನನ್ನು ಸಿಎಂ ಮಾಡಬೇಕು ಎನ್ನುವುದು ಆತನ ಕನಸು. ಆ ಜವಾಬ್ದಾರಿಯನ್ನು ಅನಂತ್ ನಂಬಿಯಾರ್(ಅಚ್ಯುತ್ ಕುಮಾರ್)ಗೆ ವಹಿಸುತ್ತಾನೆ. ಆದರೆ ಧನುಷ್ ಬದಲು ಅವನಂತೆ ಇರುವ ಕೃಷ್ಣ(ದರ್ಶನ್)ನನ್ನು ಚುನಾವಣೆಗೆ ನಿಲ್ಲಿಸುತ್ತಾನೆ. ನಿಜವಾದ ಧನುಷ್ ಅಖಾಡಕ್ಕೆ ಇಳಿದ ಬಳಿಕ ಏನಾಗುತ್ತದೆ? ಮುಂದೆ ಡೆವಿಲ್ ಆರ್ಭಟ ಹೇಗಿರುತ್ತದೆ? ಎನ್ನುವುದು ಇನ್ನುಳಿದ ಕಥೆ.
'ಡೆವಿಲ್' ಬಾಕ್ಸಾಫೀಸ್
ಫಸ್ಟ್ ವೀಕೆಂಡ್‌ನಲ್ಲಿ 'ಡೆವಿಲ್' ಸಿನಿಮಾ ಒಳ್ಳೆ ಕಲೆಕ್ಷನ್ ಮಾಡಿತ್ತು. ಒಟ್ಟಾರೆ 25 ದಿನಕ್ಕೆ 48 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದ ಸಿನಿಮಾ ನಿರ್ಮಾಪಕರಿಗೆ 30 ಕೋಟಿ ರೂ. ತಂದುಕೊಟ್ಟಿರುವುದಾಗಿ ಊಹಾಪೋಹ ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.
ಪೈರಸಿ ಸಮಸ್ಯೆ
'ಡೆವಿಲ್' ಚಿತ್ರಕ್ಕೆ ಪೈರಸಿ ಸಮಸ್ಯೆ ಎದುರಾಗಿತ್ತು. ಅದನ್ನು ಚಿತ್ರತಂಡ ಯಶಸ್ವಿಯಾಗಿ ನಿಭಾಯಿಸಿತ್ತು. ಸಾವಿರಾರು ಪೈರಸಿ ಲಿಂಕ್‌ಗಳನ್ನು ಚಿತ್ರತಂಡ ಡಿಲೀಟ್ ಮಾಡಿಸಿತ್ತು. ಬುಕ್‌ಮೈ ಶೋನಲ್ಲಿ ಯಾವುದೇ ರಿವ್ಯೂ, ರೇಟಿಂಗ್ ಕೊಡದಂತೆ ನ್ಯಾಯಾಲಯದಿಂದ ಆದೇಶ ತಂದಿತ್ತು.
ವಿಜಯಲಕ್ಷ್ಮಿ ದರ್ಶನ್ ಬೆಂಬಲ
ದರ್ಶನ್ ಜೈಲಿನಲ್ಲಿ ಇದ್ದರೂ ಯಾವುದೇ ಸಮಸ್ಯೆ ಇಲ್ಲದೇ 'ಡೆವಿಲ್' ಸಿನಿಮಾ ಬಿಡುಗಡೆ ಆಗಿತ್ತು. ದರ್ಶನ್ ಗೈರಿನಲ್ಲಿ ಪತ್ನಿ ವಿಜಯಲಕ್ಷ್ಮಿ ದರ್ಶನ್ ತಂಡದ ಬೆಂಬಲಕ್ಕೆ ನಿಂತರು. ಸಿನಿಮಾ ಪ್ರಚಾರ ನಡೆಸಿದ್ದು ಮಾತ್ರವಲ್ಲ. ಮೊದಲ ದಿನ ಅಭಿಮಾನಿಗಳ ಜೊತೆ ಕೂತು ಸಿನಿಮಾ ವೀಕ್ಷಿಸಿದರು. ಕೆಲ ಜಿಲ್ಲೆಗಳಿಗೆ ಭೇಟಿ ನೀಡಿ ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು.
ವಿಶೇಷ ಸೂಚನೆ: 'ಡೆವಿಲ್' ಸಿನಿಮಾ ಓಟಿಟಿ ರಿಲೀಸ್ ಡೇಟ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಂದಿಲ್ಲ. ಫೆಬ್ರವರಿ 16ರಂದು ಸ್ಟ್ರೀಮಿಂಗ್ ಆಗಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.


Click it and Unblock the Notifications











