'ಗೆಹ್ರಾಹಿಯಾ' ಟ್ರೇಲರ್: ಅಕ್ರಮ ಸಂಬಂಧದ ಕತೆಯಲ್ಲಿ ಹಾಟ್ ದೀಪಿಕಾ, ಮುತ್ತಿನ ಸುರಿಮಳೆ

ದೀಪಿಕಾ ಪಡುಕೋಣೆ ನಟನೆಯ 'ಗೆಹ್ರಾಹಿಯಾ' ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ಸಿನಿಮಾವು ಅಕ್ರಮ ಸಂಬಂಧದ ಕತೆಯನ್ನು ಹೊಂದಿರುವುದು ಟ್ರೇಲರ್‌ನಿಂದ ಗೊತ್ತಾಗುತ್ತಿದೆ.

ದೀಪಿಕಾ ಪಡುಕೋಣೆ ಸಖತ್ ಹಾಟ್ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಸಹ ನಟನ ಮೇಲೆ ಮುತ್ತಿನ ಸುರಿಮಳೆಯನ್ನೇ ಸುರಿಸಿದ್ದಾರೆ.

ದೀಪಿಕಾ ಪಡುಕೋಣೆ ಹಾಗೂ ಧೈರ್ಯಾ ಕರ್ವಾ ಪರಸ್ಪರ ಪ್ರೀತಿಸುತ್ತಿದ್ದಾರೆ. ಆದರೆ ಅವರ ಸಂಬಂಧದಲ್ಲಿ ದೀಪಿಕಾಗೆ ತೃಪ್ತಿಯಿಲ್ಲ. ಬಾಯ್‌ಫ್ರೆಂಡ್‌ನ ವರ್ತನೆಗಳು, ವ್ಯಕ್ತಿತ್ವದ ಬಗ್ಗೆ ದೀಪಿಕಾಗೆ ಅಸಮಾಧಾನ. ಮತ್ತೊಂದೆಡೆ ಅನನ್ಯಾ ಪಾಂಡೆ ಹಾಗೂ ಸಿದ್ಧಾಂತ್ ಚತುರ್ವೇದಿ ಸಹ ಪ್ರೇಮಿಗಳು ಸಿದ್ಧಾಂತ್‌, ದೀಪಿಕಾ ಕಡೆಗೆ ಆಕರ್ಷಿತನಾಗುತ್ತಾನೆ, ಅಂತೆಯೇ ದೀಪಿಕಾ ಸಹ ತನಗಿಂತ ಕಿರಿಯನಾದ ಸಿದ್ಧಾಂತ್ ಕಡೆಗೆ ವಾಲುತ್ತಾಳೆ ಇಬ್ಬರ ನಡುವೆ 'ಅಕ್ರಮ ಸಂಬಂಧ' ಶುರುವಾಗುತ್ತದೆ. ಇದು ಸ್ವತಃ ದೀಪಿಕಾ-ಸಿದ್ಧಾಂತ್ ಹಾಗೂ ಇತರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು 'ಗೆಹ್ರಾಹಿಯಾ' ಸಿನಿಮಾದ ಕತೆ.

Deepika Padukone Starrer Gehraiyaan Movie Trailer Released

'ಗೆಹ್ರಾಹಿಯಾ' ಸಿನಿಮಾವು ವಿವಾಹ, ಗಂಡು-ಹೆಣ್ಣು ಸಂಬಂಧ, ವಿವಾಹೇತರ ಸಂಬಂಧಗಳ ಕತೆಯನ್ನು ಹೊಂದಿದ್ದು, ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಯುವ ನಟ ಸಿದ್ಧಾಂತ್ ಚತುರ್ವೇದಿ, ನಟಿ ಅನನ್ಯಾ ಪಾಂಡೆ, ಧೈರ್ಯಾ ಕರ್ವಾ, ನಾಸಿರುದ್ಧೀನ್ ಶಾ, ರಜತ್ ಕಪೂರ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಶಕುನ್ ಭಾಟ್ರಾ ನಿರ್ದೇಶನ ಮಾಡಿದ್ದಾರೆ.

ಟ್ರೇಲರ್‌ನಲ್ಲಿ ಸಿನಿಮಾದ ಕತೆಯ ಎಳೆಯನ್ನು ಬಿಟ್ಟುಕೊಡಲಾಗಿದ್ದು, ಒಟ್ಟಾರೆ ಸಿನಿಮಾವನ್ನು ಕೆಲವೇ ನಿಮಿಷಗಳಲ್ಲಿ ಕಟ್ಟಿಕೊಡುವ ಯತ್ನ ಮಾಡಲಾಗಿದೆ. ಜೊತೆಗೆ ಟ್ರೇಲರ್‌ನಲ್ಲಿ ಸಾಕಷ್ಟು ಹಸಿ-ಬಿಸಿ ದೃಶ್ಯಗಳು, ಸಾಕಷ್ಟು ಲಿಪ್ ಲಾಕ್ ದೃಶ್ಯಗಳು ಸಹ ಇವೆ. ದೀಪಿಕಾ ಪಡುಕೋಣೆ ಮತ್ತೊಮ್ಮೆ ಮೈ ಚಳಿ ಬಿಟ್ಟು ನಟಿಸಿದ್ದಾರೆ ಈ ಸಿನಿಮಾದಲ್ಲಿ. ದೀಪಿಕಾಗೆ ತೆರೆ ಮೇಲೆ ಮುತ್ತಿನ ಮಳೆ ಸುರಿಸುವುದು ಹೊಸದೇನೂ ಅಲ್ಲ. 'ರಾಮ್‌ ಲೀಲಾ' ಸಿನಿಮಾದಲ್ಲಿಯೂ ರಣ್ವೀರ್-ದೀಪಿಕಾ ನಡುವೆ ಲಿಪ್‌ ಲಾಕ್ ದೃಶ್ಯಗಳು ಸಂಚಲನ ಮೂಡಿಸಿದ್ದವು.

'ಗೆಹ್ರಾಹಿಯಾ' ಸಿನಿಮಾವು ನೇರವಾಗಿ ಅಮೆಜಾನ್ ಪ್ರೈಂನಲ್ಲಿ ಫೆಬ್ರವರಿ 11 ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾದ ಹೊರತಾಗಿ ಇನ್ನೂ ಮೂರು ಸಿನಿಮಾಗಳು ದೀಪಿಕಾ ಪಡುಕೋಣೆ ಕೈಯಲ್ಲಿವೆ. ಶಾರುಖ್ ಖಾನ್ ಜೊತೆಗೆ 'ಪಠಾಣ್' ಸಿನಿಮಾದಲ್ಲಿ ದೀಪಿಕಾ ನಟಿಸಿದ್ದಾರೆ. ಅದರ ಬಳಿಕ ಪ್ರಭಾಸ್ ಜೊತೆಗೆ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೃತಿಕ್ ರೋಷನ್ ನಟನೆಯ ಆಕ್ಷನ್ ಸಿನಿಮಾದಲ್ಲಿ ದೀಪಿಕಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ರಣ್ವೀರ್ ಸಿಂಗ್ ನಟಿಸಿರುವ 'ಸರ್ಕಸ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿಯೂ ದೀಪಿಕಾ ನಟಿಸಿದ್ದಾರೆ.

More from Filmibeat

English summary
Deepika Padukone starrer Gehraiyaan movie trailer released. Movie is about relationship, movie will directly release on Amazon Prime on February 11.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X