'ಬಿಗ್‌ ಬಾಸ್‌' ಮನೆಗೆ ತೆರಳಲು ಬಟ್ಟೆ ಬರೆ ಪ್ಯಾಕ್ ಮಾಡಿಕೊಂಡ ಈ ಚೆಲುವೆಯ ಹಿನ್ನೆಲೆ ಗೊತ್ತಾ..?

ಯಾರಿಗೆ ಎಲ್ಲಿ, ಹೇಗೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ಯಾರಿಂದನೂ ಊಹಿಸಲು ಸಾಧ್ಯ ಇಲ್ಲ. ಕುರಿಕಾಯುತ್ತಾ ತನಗಿಷ್ಟ ಬಂದಂತೆ ಹಾಡುತ್ತಿದ್ದ ಹನುಮಂತ ಸರಿಗಮಪ ಸೀಜನ್ 15ರ ರನ್ನರ್ ಅಪ್ ಆಗುತ್ತಾನೆಂದರೆ ತಮಾಷೆಯ ಮಾತೇ.? ಇನ್ನೂ ಕೇವಲ ಕಣ್ಸನ್ನೆಯಿಂದ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ಪ್ರಿಯಾ ವಾರಿಯರ್ ಅವರದ್ದು ಅದೃಷ್ಟವಲ್ಲದೇ ಮತ್ತೇನು..? ಇಷ್ಟೇ ಯಾಕೆ..ರೈಲ್ವೆ ಸ್ಟೇಷನ್ನಿನಲ್ಲಿ ಹಾಡುತ್ತಿದ್ದ ರಾಣು ಮಂಡಾಲ್ ರಾತ್ರೋ ರಾತ್ರಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದು ಕೂಡ ಇದೇ ಅದೃಷ್ಟದಿಂದ ಅಲ್ಲವೇ..? ಈ ಸಾಲಿಗೆ ಈಗ ದೆಹಲಿಯ ಚಂದ್ರಿಕಾ ದೀಕ್ಷಿತ್ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ಹೌದು, ಚಂದ್ರಿಕಾ ದೀಕ್ಷಿತ್ .. ಬದುಕಿನ ಬಂಡಿಯನ್ನ ಎಳೆಯಲು ಕಳೆದ ನಾಲ್ಕು ವರ್ಷದಿಂದ ಹರ ಸಾಹಸ ಮಾಡುತ್ತಿದ್ದ ಹೆಣ್ಣು. ಪರಿಸ್ಥಿತಿಯ ಹೊಡೆತಕ್ಕೆ ಸಿಲುಕಿ, ಕುಟುಂಬ ನಿರ್ವಹಣೆಗೆ ದೆಹಲಿ ಬೀದಿ ಬದಿಯಲ್ಲಿ ವಡಾ-ಪಾವ ಮಾರುತ್ತಿದ್ದ ಚಂದ್ರಿಕಾ ದೀಕ್ಷಿತ್ ಹಣೆಬರಹ ಬದಲಿಸಿದ್ದು ಇದೇ ಸೋಶಿಯಲ್ ಮೀಡಿಯಾ.

Delhi s Viral Vada Pav Girl Aka Chandrika Gera Dixit Confirmed As The First Contestant Of Bigg Boss OTT 3

ಚಂದ್ರಿಕಾ ವಡಾ-ಪಾವ ಮಾರುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಹಂಚಿಕೊಂಡಿದ್ದೇ ತಡ, ಚಂದ್ರಿಕಾ ಅವರ ತಳ್ಳುವ ಗಾಡಿಯ ಮುಂದೆ ಕಣ್ಣಾಯಿಸಿದ ಕಡೆಯೆಲ್ಲ ಜನ ಕಂಡು ಬಂದರು. ದಿನಕ್ಕೊಬ್ಬರು ವಡಾ ಪಾವ್ ಮತ್ತು ಚಂದ್ರಿಕಾ ಅವರ ವಿಡಿಯೋಗಳನ್ನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳತೊಡಗಿದರು. ನೋಡ .. ನೋಡುತ್ತಾ.. ಸಾಮಾಜಿಕ ಜಾಲತಾಣದಲ್ಲಿ ಇವರ ಹಿಂಬಾಲಕರ ಸಂಖ್ಯೆ ಹೆಚ್ಚಾಯಿತು. 70 ಲಕ್ಷ ಬೆಲೆ ಬಾಳುವ ಪೋರ್ಡ್ ಮಸ್ಟಾಂಗ್ ಕಾರು ಕೂಡ ಚಂದ್ರಿಕಾ ಅವರನ್ನ ಅರಸಿಕೊಂಡು ಬಂತು.

ಹೀಗೆ ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ, ವಡಾ ಪಾವ್ ಹುಡುಗಿ ಎಂದೇ ಜನಜನಿತವಾದ ಚಂದ್ರಿಕಾ ದೀಕ್ಷಿತ್ ಈಗ ಬೀದಿಯಿಂದ ಬಿಗ್ ಬಾಸ್‌ ಮನೆಗೆ ಬಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನೂ ಹುಟ್ಟು ಹಾಕಿದ್ದಾರೆ.

Delhi s Viral Vada Pav Girl Aka Chandrika Gera Dixit Confirmed As The First Contestant Of Bigg Boss OTT 3

ಹೌದು, ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಬಿಗ್ ಬಾಸ್ ಕಾರ್ಯಕ್ರಮ ಇದೇ ಜೂನ್ 21ರಿಂದ ಹಿಂದಿಯಲ್ಲಿ ಪ್ರಸಾರವಾಗಲಿದೆ. ಸಲ್ಮಾನ್ ಖಾನ್ ಸಾರಥ್ಯದಲ್ಲಿ ಬಾರದೇ ಅನಿಲ್ ಕಪೂರ್ ಅವರ ಮುಂದಾಳತ್ವದಲ್ಲಿ ಶುರುವಾಗಲಿರುವ ಈ ಸಲದ ಬಿಗ್ ಬಾಸ್‌ ಓಟಿಟಿ ಸೀಸನ್‌ 03ಕ್ಕೆ ಇದೇ ಚಂದ್ರಿಕಾ ದೀಕ್ಷಿತ್ ಅಲಿಯಾಸ್ ವಡಾ ಪಾವ್ ಗರ್ಲ್ ಆಯ್ಕೆಯಾಗಿದ್ದಾರೆ.

ನಿಜಾ..ಬಂದ ಕಷ್ಟಗಳಿಗೆ ಬೆದರದೆ, ವಡಾ ಪಾವ್ ಮಾರಿ ಬದುಕು ಕಟ್ಟಿಕೊಂಡ ಚಂದ್ರಿಕಾ ದೀಕ್ಷಿತ್ ಅವರ ಸಾಧನೆ ಮೆಚ್ಚುವಂತಹದ್ದೇ. ಆದರೆ.. ಅದ್ಯಾವಾಗ ಬೆಳಗಾಗುವುದರೊಳಗೆ ಈಕೆಯ ವಡಾ ಪಾವ್ ಪ್ರಚಾರ ಗಗನಕ್ಕೆ ತಲುಪಿತು, ಅಲ್ಲಿಂದಾಚೆ .. ಜನಪ್ರಿಯತೆ ಎಂಬ ಭ್ರಮೆಯಲ್ಲಿ ಚಂದ್ರಿಕಾ ಬದುಕಲು ಆರಂಭ ಮಾಡಿದ್ದರು.

Delhi s Viral Vada Pav Girl Aka Chandrika Gera Dixit Confirmed As The First Contestant Of Bigg Boss OTT 3

ಇದಕ್ಕೆ ಪೂರಕವಾಗಿ ಮೊದಲೆಲ್ಲಾ ಗ್ರಾಹಕರೇ ದೇವರು ಎನ್ನುತ್ತಿದ್ದ ಚಂದ್ರಿಕಾ ಅದೇ ಗ್ರಾಹಕರ ಜೊತೆ ಬೀದಿಯಲ್ಲಿ ನಿಂತು ಗಲಾಟೆ ಮಾಡಿಕೊಂಡರು. ದೆಹಲಿ ಕಾರ್ಪೋರೇಷನ್ ಲಂಚ ಕೇಳ್ತಿದೆ ಎಂಬ ಆರೋಪ ಮಾಡಿದರು. ಒಂದರ್ಥದಲ್ಲಿ ವಡಾ ಪಾವ್ ಮಾರಿದ್ದಕ್ಕಿಂತ ಚಂದ್ರಿಕಾ ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು.

ಇಂಥ ಚಂದ್ರಿಕಾ ದೀಕ್ಷಿತ್ ಅವರನ್ನ ಈಗ ಅನಿಲ್ ಕಪೂರ್‌ ತಮ್ಮ ಬಿಗ್ ಬಾಸ್‌ ಮನೆಗೆ ಕರೆಸಿಕೊಂಡಿದ್ದಾರೆ. ಹೀಗಾಗಿಯೇ ಕೆರಳಿ ಕೆಂಡವಾದ ಅನೇಕರು.. ಬಿಗ್ ಬಾಸ್‌ ಮನೆಗೆ ಬರುವಂತಹ ಸಾಧನೆಯನ್ನ ಈಕೆ ಮಾಡಿದ್ದಾರೂ ಏನು ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಬಿಗ್ ಬಾಸ್‌ ಮನೆಗೆ ತೆರಳಲು ಒಂದು ಮಾನದಂಡ ಬೇಡ್ವಾ ಮಾನಗೆಟ್ಟವರೇ ಎಂದು ಕಿಡಿ ಕಾರುತ್ತಿದ್ದಾರೆ.

ಒಟ್ನಲ್ಲಿ ತನ್ನ ಕೆಲಸವನ್ನ ಕಡೆಗಣಿಸಿ ಕ್ಯಾತೆ ತೆಗೆಯುವ ಮೂಲಕನೇ ಸದ್ದು ಮಾಡುತ್ತಾ ಸುದ್ದಿಯಾಗುತ್ತಾ ಬಂದ ಚಂದ್ರಿಕಾ ದೀಕ್ಷಿತ್ ಸದ್ಯಕ್ಕೆ ಬಿಗ್ ಬಾಸ್ ಮನೆಗೆ ತೆರಳಲು ಬಟ್ಟೆ ಬರೆಯನ್ನೆಲ್ಲ ಪ್ಯಾಕ್ ಮಾಡಿಕೊಂಡಿದ್ದಾರೆ. ಅಲ್ಲಿ ಏನೆಲ್ಲ ಗದ್ದಲ-ಗಲಾಟೆಯನ್ನ ಇವರು ಮಾಡ್ತಾರೆ ಅನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

English summary
Chandrika Gera Dixit, popularly known as the 'Vada Pao girl', is set to appear on Bigg Boss OTT 3. She gained fame after a viral video showed her selling vada paos at a stall in Delhi's Sainik Vihar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X