Devara OTT Release Date: ಜ್ಯೂ. ಎನ್‌ಟಿಆರ್ 'ದೇವರ' ಓಟಿಟಿ ರಿಲೀಸ್ ಡೇಟ್ ಘೋಷಣೆ

ಕೊರಟಾಲ ನಿರ್ದೇಶನದ 'ದೇವರ' ಸಿನಿಮಾ ತಿಂಗಳ ಹಿಂದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಿತ್ತು. ಮಿಶ್ರ ಪ್ರತಿಕ್ರಿಯೆ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಜ್ಯೂ. ಎನ್‌ಟಿಆರ್ ಆರ್ಭಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಯಾವಾಗ ಎಂದು ಕೆಲವರು ಕಾಯುತ್ತಿದ್ದರು.

ಫಸ್ಟ್ ವೀಕೆಂಡ್‌ನಲ್ಲೇ 'ದೇವರ' ಸಿನಿಮಾ 304 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಘೋಷಿಸಿತ್ತು. ಬಳಿಕ ಲಾಂಗ್ ವೀಕೆಂಡ್ ಚಿತ್ರಕ್ಕೆ ಪ್ಲಸ್ ಆಗಿತ್ತು. ಇನ್ನು ದಸರಾ ವೀಕೆಂಡ್ ಕೂಡ ಚಿತ್ರಕ್ಕೆ ಪೂರಕವಾಗಬೇಕಿತ್ತು. ಆದರೆ ಅಷ್ಟರಲ್ಲಿ ಸಿನಿಮಾ ಗಳಿಕೆ ಡಲ್ಲಾಗಿತ್ತು.

Devara OTT Release Date When and Where to Watch jr ntr s Action thriller

ತಂದೆ ಹಾಗೂ ಮಗನಾಗಿ ತಾರಕ್ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಒಂದು ಕಾಲ್ಪನಿಕ ಪ್ರಪಂಚದಲ್ಲಿ 'ದೇವರ'ನ ಏಳುಬೀಳಿನ ಕಥೆಯನ್ನು ಕೊರಟಾಲ ಶಿವ ಕಟ್ಟಿಕೊಟ್ಟಿದ್ದಾರೆ. ಒಳ್ಳೆಯದು - ಕೆಟ್ಟದು, ಯಾವುದು ಸರಿ? ಯಾವುದು ತಪ್ಪು? ದುರಾಸೆ, ಸೇಡು ಹೀಗೆ ಸಿನಿಮಾ ಕಥೆ ಸಾಗುತ್ತದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಕೆಲವರು ಒಳ್ಳೆ ಕಮರ್ಷಿಯಲ್ ಸಿನಿಮಾ ಅಂದರೆ ಸಾಕಷ್ಟು ಜನ ಸಿನಿಮಾ ಚೆನ್ನಾಗಿಲ್ಲ ಎನ್ನುತ್ತಿದ್ದಾರೆ.

ಸಮುದ್ರವನ್ನು ನಂಬಿಕೊಂಡ 4 ಊರುಗಳು. ಆ ಊರುಗಳ ಆಚಾರ, ವಿಚಾರ ಸಂಪ್ರದಾಯ. ಜೀವನೋಪಾಯಕ್ಕಾಗಿ ಸಮುದ್ರವನ್ನೇ ನಂಬಿಕೊಂಡ ಅಲ್ಲಿನ ಜನ. ಅಕ್ರಮವಾಗಿ ಸರಕು ಸಾಗಾಣಿಕೆಗೆ ಹೋದರೆ ಒಳ್ಳೆ ಹಣ ಸಿಗುತ್ತದೆ. ಊರಿನ ಜನರಿಗೆ ಸಹಾಯವಾಗುತ್ತದೆ ಎಂದು ಆರಂಭದಲ್ಲಿ 'ದೇವರ' ಕೂಡ ಇದರಲ್ಲಿ ಶಾಮೀಲಾಗಿರುತ್ತಾನೆ. ಅದು ತಪ್ಪು ಎಂದು ಗೊತ್ತಾದಾಗ ಅದರ ವಿರುದ್ಧ ನಿಲ್ಲುತ್ತಾನೆ.

ಹಣದ ಆಸೆಗೆ ಬಿದ್ದ ಭೈರ ಮತ್ತವನ ತಂಡ ದೇವರ ಮಾತು ಕೇಳಲ್ಲ. ತಪ್ಪು ಮಾಡಲು ಮುಂದಾಗುವವರಿಗೆ ಪಾಠ ಕಲಿಸಲು ಶಪಥ ಮಾಡುತ್ತಾನೆ. ಮುಂದೇನು ಎನ್ನುವುದು ದೇವರ ಕಥೆ. ಹಾಗೆ ನೋಡಿದರೆ ಕಥೆಯಲ್ಲಿ ಹೊಸತನವಿಲ್ಲ. ಆಕ್ಷನ್ ಸನ್ನಿವೇಶಗಳು ಹಾಗೂ ಅನಿರುದ್ದ್ ಬಿಜಿಎಂ ಚಿತ್ರಕ್ಕೆ ಪ್ಲಸ್ ಆಗಿದೆ. ಜಾನ್ವಿ ಕಪೂರ್ ಚಿತ್ರದಲ್ಲಿ ಕೆಲ ನಿಮಿಷಗಳಿಗೆ ಸೀಮಿತ ಆಗಿಬಿಟ್ಟಿದ್ದಾರೆ. ಭೈರ ಆಗಿ ಬಾಲಿವುಡ್ ನಟ ಸೈಫ್ ಅಲಿಖಾನ್ ಅಬ್ಬರಿಸಿದ್ದಾರೆ.

'ದೇವರ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದ್ದಂತೆ ಕೆಲವರು ಓಟಿಟಿಯಲ್ಲಿ ನೋಡಲು ನಿರ್ಧರಿಸಿದ್ದರು. ಬೇಗ ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡಲು ಒಪ್ಪಂದ ಮಾಡಿಕೊಂಡರೆ ಹೆಚ್ಚು ಹಣ ಸಿಗುತ್ತದೆ ಎನ್ನುವುದು ಒಂದು ಲೆಕ್ಕಾಚಾರ. ಓಟಿಟಿಗೆ ತಡವಾಗಿ ಬಂದರೆ ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಾರೆ ಎನ್ನುವ ಆಲೋಚನೆ ಕೂಡ ಇತ್ತು. 'ದೇವರ' ಚಿತ್ರವನ್ನು ಏಳರಿಂದ ಎಂಟು ವಾರಗಳ ಬಳಿಕ ಓಟಿಟಿಗೆ ತರುವ ಬಗ್ಗೆ ಚಿತ್ರತಂಡ ಚಿಂತಿಸುತ್ತಿದೆ ಎನ್ನಲಾಗಿತ್ತು. ಸದ್ಯ 40 ದಿನಕ್ಕೆ ಸ್ಟ್ರೀಮಿಂಗ್ ಆಗುತ್ತಿದೆ.

ಭಾರೀ ಮೊತ್ತಕ್ಕೆ ನೆಟ್‌ಫ್ಲಿಕ್ಸ್ 'ದೇವರ' ಓಟಿಟಿ ರೈಟ್ಸ್ ಕೊಂಡುಕೊಂಡಿತ್ತು. ನವೆಂಬರ್ 8ಕ್ಕೆ ಸಿನಿಮಾ ಸ್ಟ್ರೀಮಿಂಗ್ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ನೆಟ್‌ಫ್ಲಿಕ್ಸ್ ಮಾಹಿತಿ ನೀಡಿದೆ. ಕನ್ನಡ ಸೇರಿದಂತೆ 4 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಎನ್‌ಟಿಆರ್ ಆರ್ಟ್ಸ್ ಹಾಗೂ ಯುವಸುಧಾ ಆರ್ಟ್ಸ್ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದವು.

ರಾಜಮೌಳಿ ಚಿತ್ರದಲ್ಲಿ ನಟಿಸಿದ ಬಳಿಕ ಆ ನಟನ ಸಿನಿಮಾ ಸೋಲುತ್ತದೆ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿದೆ. ಆದರೆ 'ದೇವರ' ಅದನ್ನು ಸುಳ್ಳಾಗಿಸಿ ಗೆದ್ದಿತ್ತು ಎಂದು ಕೆಲವರು ಹೇಳಿದ್ದರು. ಆದರೂ ಅಂದುಕೊಂಡಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. ಇದೀಗ ಓಟಿಟಿಗೆ ಬರ್ತಿದೆ.

More from Filmibeat

English summary
Jr NTR and Janhvi Kapoor starrer devara ott partner locked;
Read more about: ntr tollywood ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X