ಓಟಿಟಿಗೆ 'ಮಾನ್ಸೂನ್‌ ರಾಗ' ಯಾವಾಗ? ಎಲ್ಲಿ?

ಡಾಲಿ ಧನಂಜಯ್ ಹಾಗೂ ರಚಿತಾ ರಾಮ್ ನಟನೆಯ 'ಮಾನ್ಸೂನ್‌ ರಾಗ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣ್ತಿದೆ. ನಿರ್ದೇಶಕ ಎಸ್. ರವೀಂದ್ರನಾಥ್ ಒಂದು ವಿಭಿನ್ನ ಕಥೆಯನ್ನು ಹೇಳಿ ಗೆದ್ದಿದ್ದಾರೆ. 4 ಅನುರಾಗಗಳ ಗುಚ್ಛ ಪ್ರೇಕ್ಷಕರನ್ನು ಭಾವಲೋಕಕ್ಕೆ ಕರೆದುಕೊಂಡು ಹೋಗುತ್ತಿದೆ. ಇನ್ನು ರೆಸ್ಟ್ರೋ ಸ್ಟೈಲ್‌ನಲ್ಲಿ ಪ್ರತಿಫ್ರೇಮ್‌ ಅನ್ನು ಬಣ್ಣಗಳಲ್ಲಿ ಅದ್ದಿ ತೆಗೆದಂತೆ ಸಿನಿಮಾ ಮೂಡಿ ಬಂದಿದೆ.

ಟೀಸರ್‌, ಟ್ರೈಲರ್ ಹಾಗೂ ಹಾಡುಗಳಿಂದ ಬಿಡುಗಡೆಗೂ ಮೊದಲೇ 'ಮಾನ್ಸೂನ್‌ ರಾಗ' ಸಿನಿಮಾ ಭರವಸೆ ಮೂಡಿಸಿತ್ತು. ಪೇಯ್ಡ್ ಪ್ರೀಮಿಯರ್‌ ಶೋಗಳಿಗೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇನ್ನು ಸದ್ಯ ಥಿಯೇಟರ್‌ಗಳಲ್ಲಿ ಒಂದು ಫೀಲ್ ಗುಡ್ ಸಿನಿಮಾ ನೋಡಿ ಪ್ರೇಕ್ಷಕರು ಎಂಜಾಯ್ ಮಾಡ್ತಿದ್ದಾರೆ. ಅಂದ ಹಾಗೆ ಈ ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ರೈಟ್ಸ್ ಜೀ ಸಂಸ್ಥೆ ಕೊಂಡುಕೊಂಡಿದೆ. ಸಿನಿಮಾ ರಿಲೀಸ್ ಆಗಿ 7 ವಾರಗಳ ನಂತರ ಓಟಿಟಿ ಸ್ಕ್ರೀಮಿಂಗ್‌ಗೆ ಒಪ್ಪಂದ ಆಗಿದೆ. ಹಾಗಾಗಿ ನವೆಂಬರ್ ಮೊದಲ ವಾರದಲ್ಲಿ ಸಿನಿಮಾ ಜೀ5 ಡಿಜಿಟಲ್ ಫ್ಲಾಟ್‌ಫಾರ್ಮ್‌ಗೆ ಬರುವ ಸಾಧ್ಯತೆ ಇದೆ. ಅದಕ್ಕಿಂತ ಮೊದಲೇ ಬಂದರೂ ಅಚ್ಚರಿ ಪಡಬೇಕಿಲ್ಲ.

'ಪುಷ್ಪಕ ವಿಮಾನ' ಸಿನಿಮಾ ಮಾಡಿದ್ದ ಅದೇ ತಂಡ 'ಮಾನ್ಸೂನ್‌ ರಾಗ'ಕ್ಕೂ ಕೆಲಸ ಮಾಡಿದೆ. ಚಿತ್ರದಲ್ಲಿ 4 ಪ್ರೇಮಕಥೆಗಳಿದ್ದು ಎಲ್ಲವೂ ಒಂದು ಕಡೆ ಬಂದು ಸೇರುತ್ತವೆ. ಪ್ರೇಮಕಕ್ಕೆ ವಯಸ್ಸಿನ ಹಂಗಿಲ್ಲ ಅನ್ನುವುದನ್ನು ಚಿತ್ರದಲ್ಲಿ ಹೇಳಲಾಗಿದೆ. ಜೊತೆಗೆ ಜಾತಿ-ಧರ್ಮ, ಮನುಷ್ಯ ಹಾಗೂ ದೇವರ ಸಂಬಂಧದ ಮಂಥನ ನಡೆದಿದೆ. ದಕ್ಷಿಣ ಕನ್ನಡ ಭಾಗದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ನಡೆಯುವ ಕಥೆಯನ್ನು ಹೇಳಲಾಗಿದೆ. 4 ವರ್ಷಗಳ ಹಿಂದೆ ತೆಲುಗಿನಲ್ಲಿ ರಿಲೀಶ್ ಆಗಿ ಸದ್ದು ಮಾಡಿದ್ದ 'C/o ಕಂಚರಪಲೆಂ' ಸಿನಿಮಾದಿಂದ ಪ್ರೇರಣೆಗೊಂಡು ಈ ಚಿತ್ರವನ್ನ ಮಾಡಿದ್ದಾರೆ.

Dhananjay and Rachita Ram Starrer Monsoon Raaga Lock it OTT Release Date Details Inside

ಅನೂಪ್ ಸಿಳೀನ್ ಸಂಗೀತ, ಎಸ್‌. ಕೆ ರಾವ್ ಛಾಯಾಗ್ರಹಣ, ಗುರು ಕಶ್ಯಪ್ ಸಂಭಾಷಣೆ ಚಿತ್ರದ ಹೈಲೆಟ್. ಕಟ್ಟೆ ಪಾತ್ರದಲ್ಲಿ ಡಾಲಿ ಧನಂಜಯ್, ಆತನ ಪ್ರೇಯಸಿ ವೇಶ್ಯೆ ಆಸ್ಮಾ ಪಾತ್ರದಲ್ಲಿ ರಚಿತಾ ರಾಮ್ ಸೊಗಸಾಗಿ ಅಭಿನಯಿಸಿದ್ದಾರೆ. ವೇಶ್ಯೆ ಪಾತ್ರವಾದರೂ ಅದನ್ನು ಬಹಳ ಸೂಕ್ಷ್ಮವಾಗಿ ಯಾವುದೇ ಅಶ್ಲೀಲತೆ ತೋರಿಸಲಾಗಿದೆ. ಆ ಪಾತ್ರದಲ್ಲಿ ರಚಿತಾ ರಾಮ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಇನ್ನು ಡಾಲಿ ನಟನೆಯ ಬಗ್ಗೆ ಬಿಡಿಸಿ ಹೇಳುವುದೇ ಬೇಡ. ಕಟ್ಟೆ ಪಾತ್ರವೇ ತಾವಾಗಿಬಿಟ್ಟಿದ್ದಾರೆ.

Dhananjay and Rachita Ram Starrer Monsoon Raaga Lock it OTT Release Date Details Inside

ಡಾಲಿ, ರಚಿತಾ ರಾಮ್‌ ಅಷ್ಟೇ ಅಂಕ ಗಳಿಸುವುದು ಅಚ್ಯುತ್ ಕುಮಾರ್ ಹಾಗೂ ಸುಹಾಸಿನಿ. ಇವರಿಬ್ಬರ ಅನುಭವದ ನಟನೆಯ ಚಿತ್ರದ ತೂಕವನ್ನು ಹೆಚ್ಚಿಸಿದೆ. ಇನ್ನು ಸ್ಕೂಲ್ ಲವ್ ಸ್ಟೋರಿ ಎಪಿಸೋಡ್ ಕೂಡ ಸೊಗಸಾಗಿದೆ. ಶೋಭರಾಜ್, 'ಸಿದ್ಲಿಂಗು' ಶ್ರೀಧರ್, ಶಶಿಧರ್, ಕೆ.ಎಂ., ರಘು ಗೌಡ, ಬ್ರೋ ಗೌಡ ಹೀಗೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇನ್ನು ಮಳೆಯಲ್ಲೇ ಬಹುತೇಕ ಕಥೆ ಸಾಗುವುದು ನೋಡಲು ಆಹ್ಲಾದಕರ ಅನುಭವ ನೀಡುತ್ತದೆ.

More from Filmibeat

English summary
Dhananjay and Rachita Ram Starrer Monsoon Raaga Lock it OTT Release Date Details Inside. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X