ಇದೇ ತಿಂಗಳು ಓಟಿಟಿಗೆ ಬರ್ತಿದ್ದಾನೆ 'ಬಡವ ರಾಸ್ಕಲ್'!

'ಡಾಲಿ' ಧನಂಜಯ್ ಮೊದಲ ಬಾರಿಗೆ ನಿರ್ಮಾಣ ಮಾಡಿದ್ದ 'ಬಡವ ರಾಸ್ಕಲ್‌'. ಬಡವ ರಾಸ್ಕಲ್ ಚಿತ್ರ ಬಿಡುಗಡೆ ಆದಾಗಿನಿಂದಲೂ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಲೆಕ್ಷನ್ ವಿಚಾರದಲ್ಲೂ ಸದ್ದು ಮಾಡಿರುವ ಈ ಚಿತ್ರ ಡಿ.24ರಂದು ತೆರೆಕಂಡಿತ್ತು. ಬಡವ ರಾಸ್ಕಲ್ ಚಿತ್ರ ಧನಂಜಯ್ ಕರಿಯರ್‌ಗೆ ದೊಡ್ಡ ಬ್ರೇಕ್ ನೀಡಿರೋದು ಅಲ್ಲದೇ, ಹೆಸರು ಮತ್ತು ಲಾಭವನ್ನು ಲಾಭವನ್ನೂ ತಂದುಕೊಟ್ಟಿದೆ. ಮಿಡಲ್ ಕ್ಲಾಸ್ ಹುಡುಗನ ಪಾಡು ಹೇಗಿರುತ್ತದೆ ಎಂದು ಸಿನಿಮಾದಲ್ಲಿ ಸೂಪರ್ ಆಗಿ ತೋರಿಸಲಾಗಿದೆ. ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿರುವ ಈ ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳು ಇದೆ. ಹೀಗಾಗಿ ಸಾಕಷ್ಟು ವೀಕ್ಷಕರಿಗೆ ಈ ಸಿನಿಮಾ ಹಿಡಿಸಿತ್ತು.

ಚಿತ್ರ ಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡ ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ಜನವರಿ 26ರಂದು ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗುತ್ತಿದೆ. ಶಂಕರ್ ಗುರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಇವರು ಡಾಲಿ ಧನಂಜಯ್ ಸ್ನೇಹಿತ ಮತ್ತು ಈವರೆಗೂ ಸಹಾಯಕ ನಿರ್ದೇಶಕರಾಗಿದ್ದ ಶಂಕರ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಗುಜ್ಜಾಲ್ ಪುರಷೋತ್ತಮ ಜೊತೆ ಧನಂಜಯ್ ಡಾಲಿ ಪಿಕ್ಷರ್ಸ್ ಬ್ಯಾನರ್ ಅಡಿಯಲ್ಲಿ ಸಹ ನಿರ್ಮಾಣ ಮಾಡಿದ್ದಾರೆ.

ಶ್ರೀಮಂತ ರಾಜಕಾರಣಿಯ ಮಗಳು ಸಂಗೀತಾ ಮತ್ತು ಮಧ್ಯಮ ವರ್ಗ ಕುಟುಂಬದ ಶಂಕರ್ ನಡುವೆ ಪ್ರೇಮ ಬೆಳೆದು ಹಲವು ತಿರುವು ಪಡೆದು ಇವರಿಬ್ಬರು ಒಂದಾಗಲಿದ್ದಾರೆಯೇ ಎಂಬ ಪ್ರೇಮ ಕತೆ ಹಾಗೂ ಜೀವನದ ಕುರಿತು ಹಲವು ಹೊಂದಿರುವ ಈ ಚಿತ್ರವೂ ಈಗಾಗಲೇ ಯಶಸ್ವಿ ಪ್ರದರ್ಶನ ಕಂಡು ಜನರಿಂದ ಮೆಚ್ಚುಗೆ ಪಡೆದಿದೆ. ಇದೀಗ ಪ್ರತಿಯೊಬ್ಬರ ಮನೆಬಾಗಿಲಿಗೆ ಈ ಸಿನಿಮಾ ಬರುತ್ತಿದ್ದು, ಇದೇ ಗಣರಾಜ್ಯೋತ್ಸವದ ದಿನದಂದು ಚಿತ್ರವನ್ನು ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಮಾಡಲಾಗುವುದು.

Dhananjay Starrer Badava Rascal Movie Will Premiere in OTT
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದ ನಟ ಡಾಲಿ ಧನಂಜಯ್, ಈ ಚಿತ್ರ ನನಗೆ ಎರಡು ಕಾರಣಗಳಿಂದ ಬಹಳ ಹತ್ತಿರವೆನಿಸುತ್ತದೆ. ಒಂದು, ಚಿತ್ರ ತಂಡ, ಮತ್ತೊಂದು, ಈ ಚಿತ್ರದಲ್ಲಿನ ಕತೆ. ಬಡತನದ ಸೂಕ್ಷ್ಮತೆಯಿಂದ ಈ ಚಿತ್ರ ತಂಡ ತೋರಿಸುವಲ್ಲಿ ಯಶಸ್ವಿಯಾಗಿದೆ. ಒಬ್ಬ ಸಾಮಾನ್ಯ ಮನುಷ್ಯ ತನ್ನ ಕನಸುಗಳನ್ನು ಹೇಗೆ ಬೆನ್ನಟ್ಟಿ ಯಶಸ್ವಿಯಾಗುತ್ತಾನೆ, ಜೊತೆಗೆ ಪ್ರೀತಿಯನ್ನೂ ಬಿಟ್ಟುಕೊಡದೇ ಹೇಗೆಲ್ಲಾ ಕಷ್ಟ ಪಡುತ್ತಾನೇ ಎಂಬುದನ್ನು ಅತಿ ಭಾವನಾತ್ಮಕವಾಗಿ ತೋರಿಸಲಾಗಿದೆ. ಹಾಗೇ ಕೋರೊನಾ ಹಾವಳಿಯಿಂದಾಗಿ ಸಾಕಷ್ಟು ಜನರು ಥಿಯೇಟರ್‌ಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ನಮ್ಮ ಚಿತ್ರವೇ ನಿಮ್ಮ ಮನೆಗೆ ಬರಲು ಸಿದ್ಧವಾಗಿದೆ. ಪ್ರತಿಯೊಬ್ಬರು ಓಟಿಟಿ ಯಲ್ಲಿ ಚಿತ್ರವನ್ನು ವೀಕ್ಷಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಬಡವ ರಾಸ್ಕಲ್ ಚಿತ್ರವು ರೊಮ್ಯಾಂಟಿಕ್ ಡ್ರಾಮ ಜಾನರ್‌ನಲ್ಲಿ ಮೂಡಿ ಬಂದಿದ್ದು, ದಲ್ಲಿ ಧನಂಜಯ್, ಅಮೃತ ಅಯ್ಯಂಗಾರ್, ರಂಗಾಯಣ ರಘು ಹಾಗೂ ತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ವರ್ಶ ರೇಖಾ, ನಾಗಭೂಷಣ್, ಪೂರ್ಣ ಚಂದ್ರ ಮತ್ತು ಮಾಸ್ತಿ ಮಂಜು ಕೂಡ ಬಣ್ಣಹಚ್ಚಿದ್ದಾರೆ.

More from Filmibeat

English summary
Dhananjay produced Badava Rascal Movie to be premier on January 26.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X