ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಓಟಿಟಿ ರಿಲೀಸ್ ಡೇಟ್ ಘೋಷಣೆ; ಚಿತ್ರ ಗಳಿಸಿದ್ದೆಷ್ಟು?

ಕಳೆದ ವರ್ಷ ಬಿಡುಗಡೆಗೊಂಡ ನಟ ಡಾಲಿ ಧನಂಜಯ್ ನಟನೆಯ ಐದಾರು ಸಿನಿಮಾಗಳ ಪೈಕಿ ಚಿತ್ರ ನೋಡಿದ ಸಿನಿ ರಸಿಕರಿಂದ ಶೇಕಡಾವಾರು ಹೆಚ್ಚು ಪಾಸಿಟಿವ್ ವಿಮರ್ಶೆ ಪಡೆದುಕೊಂಡ ಚಿತ್ರವೆಂದರೆ ಅದು ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಚಿತ್ರ. ಹೌದು ಧನಂಜಯ್ ನಟನೆಯ ಟ್ವೆಂಟಿ ಒನ್ ಅವರ್ಸ್, ಬೈರಾಗಿ, ಮಾನ್ಸೂನ್ ರಾಗ, ಹೆಡ್ ಬುಷ್, ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಹಾಗೂ ತೋತಾಪುರಿ ( ಅತಿಥಿ ಪಾತ್ರ ) ಈ ಆರು ಚಿತ್ರಗಳು ಕಳೆದ ವರ್ಷದಲ್ಲಿಯೇ ಬಿಡುಗಡೆಯಾಗಿದ್ದವು.

ಈ ಮೇಲಿನ ಚಿತ್ರಗಳ ಪೈಕಿ ಹೆಡ್ ಬುಷ್ ಒಳ್ಳೆಯ ಓಪನಿಂಗ್ ಪಡೆದುಕೊಂಡಿತಾದರೂ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು ಸಾಧಾರಣ ಸಿನಿಮಾ ಎನಿಸಿಕೊಂಡಿತು. ಚಿತ್ರದ ವಿವಾದಗಳೇ ಚಿತ್ರಕ್ಕೆ ಕಂಟಕವಾಗಿದ್ದವು ಎನ್ನಬಹುದು. ಇನ್ನುಳಿದಂತೆ ಟ್ವೆಂಟಿ ಒನ್ ಅವರ್ಸ್, ಬೈರಾಗಿ, ಮಾನ್ಸೂನ್ ರಾಗ ಹಾಗೂ ತೋತಾಪುರಿ ಸಿನಿಮಾಗಳು ಗೆಲುವು ಕಾಣಲಿಲ್ಲ.

Dhananjay starrer Once Upon a time in Jamaligudda streaming on OTT from March 17

ಹೀಗೆ ವರ್ಷ ಪೂರ್ತಿ ಸಾಧಾರಣ ಫಲಿತಾಂಶವನ್ನು ಪಡೆದು ಹಿನ್ನಡೆ ಅನುಭವಿಸಿದ್ದ ಧನಂಜಯ್ ಡಿಸೆಂಬರ್ 30ರಂದು ಬಿಡುಗಡೆಗೊಂಡ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಮೂಲಕ ಕಮ್ ಬ್ಯಾಕ್ ಮಾಡಬಹುದಾ ಎಂಬ ನಿರೀಕ್ಷೆ ಇತ್ತು. ಬಿಡುಗಡೆಯ ದಿನ ಹೆಚ್ಚೇನೂ ಸಿನಿ ರಸಿಕರು ಚಿತ್ರಮಂದಿರದತ್ತ ಬರಲಿಲ್ಲ. ಒಂದೇ ವರ್ಷ ಧನಂಜಯ್ ನಟನೆಯ ಆರು ಸಾಲು ಸಾಲು ಚಿತ್ರಗಳು ಬಿಡುಗಡೆಯಾಗಿದ್ದು ಇದಕ್ಕೆ ಕಾರಣ ಎನ್ನಬಹುದು.

ಧನಂಜಯ್ ಹಾಗೂ ಯಶ್ ಶೆಟ್ಟಿ ಹಿರೋಶಿಮಾ ಹಾಗೂ ನಾಗಸಾಕಿ ಪಾತ್ರಗಳಲ್ಲಿ ಮಿಂಚಿದ್ರು ಹಾಗೂ ನಾಯಕಿಯಾಗಿ ಅದಿತಿ ಪ್ರಭುದೇವ ಬಣ್ಣ ಹಚ್ಚಿದ್ರು. ಚಿತ್ರ ನೋಡಿ ಹೊರಬಂದ ಸಿನಿ ರಸಿಕ ಒಳ್ಳೆಯ ಫೀಲ್ ಗುಡ್ ಸಿನಿಮಾ ಯಾರೂ ಮಿಸ್ ಮಾಡಿಕೊಳ್ಳಬೇಡಿ ಎಂದೇ ಹೆಚ್ಚಾಗಿ ರಿವ್ಯೂ ನೀಡಿದ್ದರು. ಆದರೆ ಚಿತ್ರಕ್ಕೆ ದೊಡ್ಡ ಓಪನಿಂಗ್ ಸಿಗಲಿಲ್ಲ.

ಮುಖ್ಯ ಚಿತ್ರಮಂದಿರದಿಂದ ಹಾಗೂ ಉಳಿದ ಚಿತ್ರಮಂದಿರಗಳಿಂದ ಬಹು ಬೇಗನೆ ಮಾಯವಾದ ಈ ಚಿತ್ರ ಇದೀಗ ಓಟಿಟಿಗೆ ಕಾಲಿಡುತ್ತಿದೆ. ಇದೇ ತಿಂಗಳ 17ರಂದು ಸನ್ ನೆಕ್ಸ್ಟ್ ಓಟಿಟಿ ಅಪ್ಲಿಕೇಶನ್‌ನಲ್ಲಿ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ವೀಕ್ಷಿಸಲು ಲಭ್ಯವಿರಲಿದೆ.

ಇನ್ನು ಚಿತ್ರ ಎಷ್ಟು ಗಳಿಸಿತು ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಚಿತ್ರಗಳು ಎಷ್ಟು ಗಳಿಸಿವೆ ಎಂಬ ಲೆಕ್ಕಾಚಾರವನ್ನು ಸಿನಿ ರಸಿಕರಿಗೆ ತಿಳಿಸುವ ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ವೆಬ್ ತಾಣಗಳು ಮಾತ್ರ ಚಿತ್ರ ಇಷ್ಟನ್ನೇ ಗಳಿಸಿತು ಎಂಬ ಲೆಕ್ಕ ನೀಡಿವೆ. ಚಿತ್ರ ಮೊದಲ ಏಳು ದಿನಗಳಲ್ಲಿ ಅಂದರೆ ಒಂದು ವಾರಕ್ಕೆ 2 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತು ಎಂದು ವೆಬ್‌ಸೈಟ್‌ಗಳು ತಿಳಿಸಿವೆ. ವಾರ ಕಳೆದ ಬಳಿಕ ಚಿತ್ರ ಬಹುತೇಕ ಕಡೆ ಚಿತ್ರಮಂದಿರಗಳಿಂದ ತೆಗೆಯಲ್ಪಟ್ಟ ಕಾರಣ ನಂತರದ ದಿನಗಳಲ್ಲಿ ಚಿತ್ರ ಎಷ್ಟು ಗಳಿಸಿತು ಎಂಬುದನ್ನು ಈ ವೆಬ್‌ಸೈಟ್‌ಗಳೂ ಪ್ರಕಟಿಸಿಲ್ಲ.

More from Filmibeat

English summary
Dhananjay starrer Once Upon a time in Jamaligudda streaming on OTT from March 17. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X