For Quick Alerts
  ALLOW NOTIFICATIONS  
  For Daily Alerts

  25 ದಿನಕ್ಕೆ 100 ಕೋಟಿ ಬಾಚಿದ್ದ ಧನುಷ್ ಬ್ಲಾಕ್‌ಬಸ್ಟರ್ ಸಿನಿಮಾದ ಓಟಿಟಿ ಬಿಡುಗಡೆ ದಿನಾಂಕ ಘೋಷಣೆ

  |

  ನಟ ಧನುಷ್ ಅಭಿನಯದ ಒಟ್ಟು ಐದು ಸಿನಿಮಾಗಳು ಈ ವರ್ಷ ಬಿಡುಗಡೆಯಾಗುವುದ ಖಚಿತ. ಇದೇ ತಿಂಗಳ ಅಂತಿಮ ವಾರದಲ್ಲಿ ನಾನೆ ವರುವೆನ್ ಬಿಡುಗಡೆಯಾದರೆ, ಡಿಸೆಂಬರ್ ಮೊದಲ ವಾರದಲ್ಲಿ ವಾತಿ ಚಿತ್ರ ಬಿಡುಗಡೆಯಾಗಲಿದೆ. ಇನ್ನು ಈ ವರ್ಷ ಈಗಾಗಲೇ ಧನುಷ್ ಅಭಿನಯದ ಮೂರು ಚಿತ್ರಗಳು ಬಿಡುಗಡೆಗೊಂಡಿವೆ. ಮೊದಲಿಗೆ ನೇರವಾಗಿ ಓಟಿಟಿಯಲ್ಲಿ ಧನುಷ್ ಅಭಿನಯದ ಮಾರನ್ ಬಿಡುಗಡೆಗೊಂಡು ನೀರಸ ಪ್ರತಿಕ್ರಿಯೆ ಪಡೆದುಕೊಂಡಿತ್ತು. ನಂತರ ಧನುಷ್ ಅಭಿನಯದ ಹಾಲಿವುಡ್ ಚಿತ್ರ ದ ಗ್ರೇ ಮ್ಯಾನ್ ತೆರೆಕಂಡು ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತ್ತು.

  ಇನ್ನು ಕಳೆದ ಆಗಸ್ಟ್ 18ರಂದು ಧನುಷ್ ಅಭಿನಯದ 'ತಿರುಚಿತ್ರಾಂಬಲಂ' ಸಿನಿಮಾ ತೆರೆಕಂಡಿತ್ತು. ಸಾಮಾನ್ಯ ಓಪನಿಂಗ್ ಪಡೆದುಕೊಂಡಿದ್ದ ಈ ಚಿತ್ರ ಅತಿವೇಗವಾಗಿ ಮಾತಿನ ಪ್ರಚಾರದಿಂದ ಬ್ಲಾಕ್ ಬಸ್ಟರ್ ಪಟ್ಟಿ ಸೇರಿತ್ತು. ಒಳ್ಳೆಯ ಫ್ಯಾಮಿಲಿ ಹಾಗೂ ಲವ್ ಟ್ರ್ಯಾಕ್ ಕತೆಯನ್ನು ಹೊಂದಿದ್ದ ಈ ಚಿತ್ರದಲ್ಲಿ ಧನುಷ್ ಫುಡ್ ಡೆಲಿವರಿ ಬಾಯ್ ಆಗಿ ಅಭಿನಯಿಸಿದರೆ, ನಿತ್ಯ ಮೆನನ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಹಾಗೂ ಪ್ರಕಾರ್ ರಾಜ್ ಧನುಷ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  ಇನ್ನು 30 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿತ್ತು. ಕೇವಲ 25 ದಿನಕ್ಕೆ 100 ಕೋಟಿ ಬಾಚಿತ್ತು. ಈ ಚಿತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಲು ಕಾರಣ ಚಿತ್ರದ ಕತೆ ಹಾಗೂ ಹಾಡುಗಳು. ಈ ಚಿತ್ರ ವೀಕ್ಷಕರಿಗೆ ವಿಐಪಿ ಚಿತ್ರದ ಫೀಲ್ ಕೊಟ್ಟದ್ದು ನಿಜ ಎಂದರೆ ತಪ್ಪಾಗಲಾರದು. ಇದೀಗ ಈ ಚಿತ್ರದ ಓಟಿಟಿ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದು, ಸನ್ ಪಿಕ್ಚರ್ಸ್ ಬಂಡವಾಳ ಹೂಡಿದ್ದ ಈ ಸಿನಿಮಾ ಸನ್ ನೆಕ್ಸ್ಟ್ ಓಟಿಟಿಯಲ್ಲಿ ಇದೇ ತಿಂಗಳ 23ರಂದು ಬಿಡುಗಡೆಗೊಳ್ಳಲಿದೆ.

  ಚಿತ್ರದ ಕತೆಯೇನು?: ಪಳಮ್ ಪಾತ್ರದ ನಾಯಕ ಧನುಷ್ ಓರ್ವ ಸಾಮಾನ್ಯ ಫುಡ್ ಡೆಲಿವರಿ ಬಾಯ್. ಆದರೆ ಆತನ ತಂದೆ ಪ್ರಕಾಶ್ ರಾಜ್ ಪೊಲೀಸ್. ಅಪ್ಪ ಮಗ ಇಬ್ಬರಿಗೂ ಸಹ ಅಷ್ಟಕ್ಕಷ್ಟೇ ಇಬ್ಬರೂ ಈ ಹಿಂದೆ ನಡೆದಿದ್ದ ಘಟನೆಯೊಂದರಿಂದ ಮಾತು ಬಿಟ್ಟು ಎಷ್ಟೋ ವರ್ಷ ಕಳೆದಿರುತ್ತದೆ. ಒಂದೇ ಮನೆಯಲ್ಲಿರುವ ಈ ಇಬ್ಬರಿಗೂ ಧನುಷ್ ತಾತ ಸೀನಿಯರ್ ಪಳಮ್ ಸಂಪರ್ಕದ ಸಾಧನ. ಇನ್ನು ನಾಯಕನ ಅಪಾರ್ಟ್‌ಮೆಂಟ್‌ನಲ್ಲಿರುವ ಶೋಭನ ಪಾತ್ರಧಾರಿ ನಿತ್ಯಾ ಮೆನನ್ ನಾಯಕನ ಬೆಸ್ಟ್ ಫ್ರೆಂಡ್. ಇನ್ನು ಧನುಷ್‌ಗೆ ಬೇರೆ ಹುಡುಗಿಯರ ಮೇಲೆ ಲವ್ ಆದಾಗಲೆಲ್ಲಾ ನಿತ್ಯಾ ಮೆನನ್ ಸಲಹೆ ನೀಡುವಷ್ಟು ಇಬ್ಬರ ನಡುವೆ ಗಟ್ಟಿಯಾದ ಸ್ನೇಹ. ಧನುಷ್‌ಗೆ ಸಿಟಿ ಬೆಡಗಿ ರಾಶಿ ಖನ್ನಾ ಮೇಲೂ ಹಾಗೂ ಹಳ್ಳಿ ಹುಡುಗಿ ಪ್ರಿಯಾ ಭವಾನಿ ಶಂಕರ್ ಮೇಲೂ ಲವ್ ಆಗುತ್ತೆ. ಹೀಗೆ ಈ ಇಬ್ಬರಲ್ಲಿ ಧನುಷ್ ಯಾರನ್ನು ವಿವಾಹವಾಗ್ತಾರೆ ಎಂಬುದೇ ಚಿತ್ರದ ಕ್ಲೈಮ್ಯಾಕ್ಸ್ ಹಾಗೂ ತನ್ನ ತಂದೆಯ ವಿರುದ್ಧ ಊಟ ಮಾಡುವ ತಟ್ಟೆಯನ್ನೇ ಎಸೆದು ಕೂಗಾಡುವಷ್ಟು ಕೋಪಕ್ಕೆ ಕಾರಣವೇನು ಎಂಬುದೇ ಚಿತ್ರದ ಮಧ್ಯಂತರ. ಹೀಗೆ ಚಿತ್ರದುದ್ದಕ್ಕೂ ಸಿಕ್ಕಾಪಟ್ಟೆ ಕಾಮಿಡಿ ಹಾಗೂ ಮನ ಮುಟ್ಟುವ ಸೆಂಟಿಮೆಂಟ್ ದೃಶ್ಯಗಳ ಒಂದೊಳ್ಳೆ ಕತೆಯನ್ನು ಹೊಂದಿರುವ ಈ ತಿರುಚಿತ್ರಾಂಬಲಂ ಚಿತ್ರವನ್ನು ಫೀಲ್ ಗುಡ್ ಸಿನಿಮಾಗಳನ್ನು ಇಷ್ಟಪಡುವ ವೀಕ್ಷಕರು ನೋಡಲೇಬೇಕು.

  English summary
  Dhanush and Nithya Menen starrer 100 crores grossed movie Thiruchitrambalam OTT release date announced. Read on
  Monday, September 19, 2022, 14:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X