ದಾಖಲೆ ಬರೆಯಲು ಸಜ್ಜಾದ ಧನುಷ್ ನಟನೆಯ ಹೊಸ ಸಿನಿಮಾ

ನಟ ಧನುಷ್ ತಮಿಳು ಸಿನಿಮಾರಂಗದ ನಟ ಮಾತ್ರ ಅಲ್ಲ ಆತ ಹಾಲಿವುಡ್ ನಟ ಸಹ. ಈಗಾಗಲೇ ಒಂದು ಹಾಲಿವುಡ್ ಸಿನಿಮಾದಲ್ಲಿ ನಟಿಸಿರುವ ಧನುಷ್ ತನ್ನ ಎರಡನೇ ಹಾಲಿವುಡ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಮೆರಿಕದಲ್ಲಿ ಚಿತ್ರೀಕರಣ ಜಾರಿಯಲ್ಲಿದೆ.

ಈ ನಡುವೆ ಧನುಷ್ ನಟಿಸಿರುವ 'ಜಗಮೇ ತಂದಿರಮ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾವು ವಿಶಿಷ್ಟ ದಾಖಲೆ ಬರೆಯುತ್ತಿದೆ.

'ಜಗಮೇ ತಂದಿರಮ್' ಸಿನಿಮಾ ಒಟ್ಟು 17 ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ! ಭಾರತದ ಇನ್ಯಾವುದೇ ಸಿನಿಮಾ ಇಷ್ಟೊಂದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿಲ್ಲ.

Dhanushs Jagame Thandhiram To Release In 17 Languages

'ಜಗಮೇ ತಂದಿರಮ್' ಸಿನಿಮಾವು 17 ಭಾಷೆಗಳಲ್ಲಿ 190 ದೇಶಗಳಲ್ಲಿ ಬಿಡುಗಡೆ ಆಗುತ್ತಿದೆ. ಇಷ್ಟೋಂದು ರಾಷ್ಟ್ರಗಳಲ್ಲಿ ಬಿಡುಗಡೆ ಆಗುತ್ತಿರುವ ಭಾರತದ ಮೊದಲ ಸಿನಿಮಾ ಸಹ ಜಗಮೇ ತಂದಿರಮ್ ಆಗಿದೆ.

'ಜಗಮೇ ತಂದಿರಮ್' ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುವುದು ಧನುಷ್‌ಗೆ ಇಷ್ಟವಿರಲಿಲ್ಲ. ಆದರೆ ಈಗ 190 ದೇಶಗಳಲ್ಲಿ ತಮ್ಮ ಸಿನಿಮಾ ಪ್ರದರ್ಶನವಾಗುತ್ತಿರುವುದು ಸಹಜವಾಗಿಯೇ ಧನುಷ್‌ಗೆ ಖುಷಿ ತಂದಿರಲಿಕ್ಕೆ ಸಾಕು.

ಕಾರ್ತಿಕ್ ಸುಬ್ಬರಾಜು ನಿರ್ದೇಶಿಸಿರುವ 'ಜಗಮೇ ತಂದಿರಮ್' ಸಿನಿಮಾವು ಜೂನ್ 18 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವು ತಮಿಳುನಾಡಿನ ವ್ಯಕ್ತಿಯೊಬ್ಬ ಲಂಡನ್‌ನಲ್ಲಿ ಮಾಫಿಯಾ ದೊರೆಯಾಗುವ ಕತೆಯನ್ನು ಹೊಂದಿದೆ.

'ಜಗಮೇ ತಂದಿರಮ್' ಸಿನಿಮಾವು 2020ರಲ್ಲಿಯೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಕಾರಣಕ್ಕೆ ಎರಡು ಬಾರಿ ಬಿಡುಗಡೆ ಮುಂದೂಡಲಾಯಿತು. ಕೊನೆಗೆ ಧನುಷ್ ವಿರೋಧದ ನಡುವೆಯೂ ಸಿನಿಮಾವನ್ನು ನಿರ್ಮಾಪಕರಾದ ಎಸ್‌.ಶಶಿಕಾಂತ್ ಮತ್ತು ಚಕ್ರವರ್ತಿ ರಾಮಸ್ವಾಮಿ ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಿದರು.

Recommended Video

ಪ್ರಶಾಂತ್ ಸಂಬರಗಿ ಯಾರು ಅನ್ನೋದೇ ಗೊತ್ತಿಲ್ಲ ಅವರ ಪರಿಚಯವೇ ಇಲ್ಲ ಎಂದ ರಾಗಿಣಿ | Filmibeat Kannada

ಧನುಷ್‌ ಪ್ರಸ್ತುತ ಹಾಲಿವುಡ್‌ ಸಿನಿಮಾ 'ದಿ ಗ್ರೇ ಮ್ಯಾನ್‌'ನಲ್ಲಿ ನಟಿಸುತ್ತಿದ್ದು ಆ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ ನಿರ್ಮಾಣ ಮಾಡುತ್ತಿದೆ. 'ಅವೇಂಜರ್ಸ್' ಸಿನಿಮಾ ಖ್ಯಾತಿಯ ಆಂಥೋನಿ ರೊಸ್ಸೊ, ಜೋ ರೊಸ್ಸೊ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಧನುಷ್ ಜೊತೆಗೆ 'ಕ್ಯಾಪ್ಟನ್ ಅಮೆರಿಕಾ' ಖ್ಯಾತಿಯ ಕ್ರಿಸ್ ಇವಾನ್ಸ್, ಗೋಲ್ಡನ್ ಗ್ಲೋಬ್ ವಿಜೇತ ನಟ ರ್ಯಾನ್ ಗಾಸ್ಲಿಂಗ್ ನಟಿಸುತ್ತಿದ್ದಾರೆ.

More from Filmibeat

English summary
Dhanush starer 'Jagame Thandhiram' movie to be released in 17 languages in 190 countries. Movie will be released on Netflix on June 18.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X