For Quick Alerts
  ALLOW NOTIFICATIONS  
  For Daily Alerts

  ಧನುಷ್ ನಟನೆಯ ಹೊಸ ಸಿನಿಮಾ 'ಕರ್ಣನ್' ಒಟಿಟಿಗೆ

  |

  ನಟ ಧನುಷ್ ನಟಿಸಿ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಸಿನಿಮಾ 'ಕರ್ಣನ್' ಈಗ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.

  'ಪರಿಯೇರುಮ್ ಪೆರುಮಾಳ್' ಸಿನಿಮಾ ನಿರ್ದೇಶಿಸಿ ಭರವಸೆ ಮೂಡಿಸಿದ್ದ ನಿರ್ದೇಶಕ ಮಾರಿ ಸೆಲ್ವರಾಜ್ ನಿರ್ದೇಶಿಸಿರುವ 'ಕರ್ಣನ್' ಸಿನಿಮಾ ಏಪ್ರಿಲ್ 09 ರಂದು ಚಿತ್ರಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿರುವಾಗಲೆ ಚಿತ್ರಮಂದಿರಗಳು ಕೋವಿಡ್ ಕಾರಣಕ್ಕೆ ಬಂದ್ ಆದವು.

  ಇದೀಗ 'ಕರ್ಣನ್' ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಅಮೆಜಾನ್ ಪ್ರೈಂನವರು 'ಕರ್ಣನ್' ಸಿನಿಮಾದ ಡಿಜಿಟಲ್ ಹಕ್ಕು ಖರೀದಿಸಿದ್ದಾರೆ. ಮೇ 14 ರಂದು ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.

  ಜಾತೀಯತೆ, ಗ್ರಾಮ್ಯಭಾರತ, ದಲಿತ ಹೋರಾಟ ಇನ್ನು ಹಲವು ವಿಷಯಗಳನ್ನು ಕತೆಯೊಳಗೆ ಅಡಕವಾಗಿಟ್ಟಿಸಿಕೊಂಡಿರುವ 'ಕರ್ಣನ್' ಸಿನಿಮಾ ಬಗ್ಗೆ ಸಾಕಷ್ಟು ಪ್ರಶಂಸೆಗಳು ಕೇಳಿಬಂದಿತ್ತು. ಅಮೆಜಾನ್ ಪ್ರೈಂ ಮೂಲಕ ಈ ಸಿನಿಮಾ ಹೆಚ್ಚಿನ ಜನರನ್ನು ತಲುಪಲಿದೆ.

  'ಕರ್ಣನ್' ಸಿನಿಮಾದಲ್ಲಿ ಧನುಷ್ ಎದುರಾಗಿ ಮಲಯಾಳಂ ನಟಿ ರಾಜಿಶಾ ವಿಜಯನ್ ನಟಿಸಿದ್ದಾರೆ. ಯೋಗಿ ಬಾಬು, ನಟರಾಜನ್ ಸುಬ್ರಮಣಿಯನ್, ಲಾಲ್ ಇನ್ನೂ ಹಲವರು ಸಿನಿಮಾದಲ್ಲಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಸಂತೋಶ್ ನಾರಾಯಣನ್. ನಿರ್ಮಾಣ ಮಾಡಿರುವುದು ಕಲೈಪುಲಿ ಎಸ್ ತನು.

  ಧನುಷ್ ನಟನೆಯ ಇನ್ನೂ ಬಿಡುಗಡೆ ಆಗದ ಸಿನಿಮಾ 'ಜಗಮೇ ತಾಂಡಿರಮ್' ಸಿನಿಮಾ ಸಹ ಒಮ್ಮೆಲೆ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ 'ಜಗಮೇ ತಾಂಡಿರಮ್' ಸಿನಿಮಾವನ್ನು ಖರೀದಿಸಿದ್ದು, ಜೂನ್ 18 ರಂದು ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

  ಶಂಖನಾದ ಅರವಿಂದ್ ಸಾವಿಗೆ ಭಾವುಕರಾದ ಪುನೀತ್ ರಾಜಕುಮಾರ್ | Filmibeat Kannada

  'ಜಗಮೇ ತಾಂಡಿರಮ್' ಸಿನಿಮಾವನ್ನು ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಐಶ್ವರ್ಯಾ ಲಕ್ಷ್ಮಿ ನಾಯಕಿ.

  English summary
  Dhanush starer new movie 'Karnan' will release on Amazon Prime On May 14. Movie is directed by Mari Selvaraju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X