ಬಾಕ್ಸಾಫೀಸ್‌ನಲ್ಲಿ 100 ಕೋಟಿ ಬಾಚಿದ ಧನುಷ್ 'ವಾತಿ' ಸಿನಿಮಾ ಓಟಿಟಿ ರಿಲೀಸ್ ಡೇಟ್ ಘೋಷಣೆ

ತಮಿಳು ನಟ ಧನುಷ್ ಅಭಿನಯದ 'ವಾತಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ತಮಿಳು, ತೆಲುಗಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ರಿಲೀಸ್ ಆಗಿತ್ತು. ಚಿತ್ರದ ನಟ ಧನುಷ್ ಕಾಲೇಜು ಲೆಕ್ಚರರ್ ಪಾತ್ರದಲ್ಲಿ ನಟಿಸಿದ್ದಾರೆ. ಎಜುಕೇಶನ್ ಮಾಫಿಯಾ ಸುತ್ತಾ ಸುತ್ತುವ ಸಿನಿಮಾ ಕಥೆ ಪ್ರೇಕ್ಷಕರ ಮನಗೆದ್ದಿತ್ತು. ತೆಲುಗು, ತೆಲುಗು ಎರಡೂ ಭಾಷೆಗಳಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು.

ಬಾಕ್ಸಾಫೀಸ್‌ನಲ್ಲಿ 100 ಕೋಟಿ ಕಲೆಕ್ಷನ್ ಮಾಡಿದ 'ವಾತಿ' ಸಿನಿಮಾ ಓಟಿಟಿ ರಿಲೀಸ್ ಡೇಟ್ ಘೋಷಣೆ ಆಗಿದೆ. ಮಾರ್ಚ್ 17ಕ್ಕೆ ನೆಟ್‌ಫ್ಲಿಕ್ಸ್ ಸೌತ್‌ ಇಂಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ವಿಚಾರವನ್ನು ಸ್ವತಃ ನೆಟ್‌ಫ್ಲಿಕ್ಸ್ ಘೋಷಣೆ ಮಾಡಿದೆ. ವೆಂಕಿ ಅಟ್ಲೂರಿ ಈ ಪೀರಿಯಡ್ ಆಕ್ಷನ್ ಡ್ರಾಮಾ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ಸಂಯುಕ್ತಾ ಮೆನನ್ ನಾಯಕಿಯಾಗಿ ಮಿಂಚಿದ್ದಾರೆ. ಸಮುದ್ರಖನಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಸಾಯಿಕುಮಾರ್, ತನಿಕೇಲ ಭರಣಿ ಸೇರಿದಂತೆ ದೊಡ್ಡ ತಾರಾಗಣ 'ವಾತಿ' ಚಿತ್ರದಲ್ಲಿದೆ.

Dhanush Starrer Vaathi movie going to stream from March 17th on Netflix

90ರ ದಶಕದಲ್ಲಿ ಈ ಸಿನಿಮಾ ಕಥೆ ಸಾಗುತ್ತದೆ. ಇಂಜಿನಿಯರ್ ಪದವಿಗೆ ಬೇಡಿಕೆ ಹೆಚ್ಚಾದಾಗ ಕೆಲವರು ಇದನ್ನು ವಿದ್ಯೆಯನ್ನು ವ್ಯಾಪಾರ ಮಾಡಿಕೊಳ್ಳುತ್ತಾರೆ. ಇದರಿಂದ ಬಡವರು ಅವಕಾಶ ವಂಚಿತರಾಗುತ್ತಾರೆ. ತ್ರಿಪಾಠಿ ಎಂಬ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುವ ಪ್ರಾಧ್ಯಾಪಕರನ್ನು ಹೆಚ್ಚಿನ ಸಂಬಳ ಕೊಟ್ಟು ತನ್ನ ಕಾಲೇಜಿಗೆ ಸೇರಿಸಿಕೊಳ್ಳುತ್ತಾನೆ. ಇದರಿಂದ ಸರ್ಕಾರಿ ಕಾಲೇಜುಗಳು ಮುಚ್ಚುವ ಪರಿಸ್ಥಿತಿ ಉಂಟಾಗುತ್ತದೆ.

ತ್ರಿಪಾಠಿ ಮುಂದೆ ಸರ್ಕಾರಿ ಕಾಲೇಜುಗಳನ್ನು ದತ್ತು ತೆಗೆದುಕೊಳ್ಳುವ ನಾಟಕ ಮಾಡುತ್ತಾನೆ. ಸರ್ಕಾರಿ ಕಾಲೇಜುಗಳಲ್ಲಿ ಸರಿಯಾಗಿ ಶಿಕ್ಷಣ ಸಿಗಲ್ಲ ಎಂದು ಸಾಬೀತು ಮಾಡಲು ಮುಂದಾಗುತ್ತಾನೆ. ಸರ್ಕಾರಿ ಕಾಲೇಜಿಗೆ ಬಾಲು ಸಾರ್ ಬರುವ ನಾಯಕ ಹೇಗೆ ತ್ರಿಪಾಠಿಗೆ ಸಿಂಹಸ್ವಪ್ನನಾಗುತ್ತಾನೆ ಎನ್ನುವುದು 'ವಾತಿ' ಸಿನಿಮಾ ಕಥೆ. ಬಾಲು ಸಾರ್ ಪಾತ್ರದಲ್ಲಿ ಧನುಷ್ ನಟಿಸಿದ್ದಾರೆ. ಒಂದು ಹಾಡನ್ನು ತೆಲುಗು ಹಾಗೂ ತಮಿಳಿನಲ್ಲಿ ಹಾಡಿ ಸೈ ಎನಿಸಿಕೊಂಡಿದ್ದಾರೆ.

Dhanush Starrer Vaathi movie going to stream from March 17th on Netflix

ಒಟ್ನಲ್ಲಿ 'ವಾತಿ' ಸಿನಿಮಾ ಓಟಿಟಿಗೆ ಬರ್ತಿರೋದು ಸಿನಿರಸಿಕರಿಗೆ ಸಂತಸ ತಂದಿದೆ. ಫೆಬ್ರವರಿ 17ಕ್ಕೆ ರಿಲೀಸ್ ಆಗಿದ್ದ ಸಿನಿಮಾ ಸರಿಯಾಗಿ ಒಂದು ತಿಂಗಳಿಗೆ ಓಟಿಟಿಗೆ ಎಂಟ್ರಿ ಕೊಡುತ್ತಿದೆ. ಜಿ. ವಿ ಪ್ರಕಾಶ್‌ ಕುಮಾರ್ ಸಂಗೀತ, ಜೆ. ಯುವರಾಜ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

More from Filmibeat

English summary
Dhanush Starrer Vaathi movie going to stream from March 17th on Netflix. movie surpassed ₹100 crores at the global box office. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X