ತಮಿಳು ಚಿತ್ರರಂಗ: ಸೂರ್ಯ ಒಂದು ದಾರಿ, ಧನುಶ್-ವಿಜಯ್ ಮತ್ತೊಂದು ದಾರಿ

ಚಿತ್ರಮಂದಿರಗಳು ಬಂದ್ ಆಗಿ ಸುಮಾರು 45 ಕ್ಕೂ ಮೇಲಾಯಿತು. ನಿರ್ಮಾಣವಾಗಿ ಚಿತ್ರಮಂದಿರಕ್ಕೆ ಬರಲು ತಯಾರಾಗಿದ್ದ ಸಿನಿಮಾಗಳು ಡಬ್ಬದಲ್ಲೇ ಕೊಳೆಯುವಂತಾಗಿದೆ. ನಿರ್ಮಾಪಕ ಮಾಡಿದ್ದ ಸಾಲ ಏರುತ್ತಲೇ ಇದೆ.

Recommended Video

Anushka Shetty Speaks On Casting Couch In Tollywood | Casting Couch | Me Too | Oneindia kannada

ಈ ಸ್ಥಿತಿಗೆ ಪರ್ಯಾಯವಾಗಿ ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಬದಲಾಗಿ ನೇರವಾಗಿ ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್‌ ನಂಥಹಾ ಓಟಿಟಿಗಳಿಗೆ ಬಿಡುಗಡೆಗೆ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ.

ತಮಿಳಿನ ನಟ ಸೂರ್ಯ ತಮ್ಮದೇ ಪ್ರೊಡಕ್ಷನ್ ಹೌಸ್‌ನಲ್ಲಿ ನಿರ್ಮಿಸಲಾಗಿರುವ ತಮ್ಮ ಮಡದಿ, ನಟಿ ಜ್ಯೋತಿಕಾ ಅಭಿನಯದ 'ಪೊನ್ಮಗಳ್ ವಂದಾಳ್' ಸಿನಿಮಾವನ್ನು ನೇರವಾಗಿ ಅಮೆಜಾನ್‌ ಪ್ರೈಂ ನಲ್ಲಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಇದರ ಬಗ್ಗೆ ಪರ ವಿರೋಧ ಚರ್ಚೆ ಜಾರಿಯಲ್ಲಿದೆ.

ಆದರೆ ಇದೇ ಸಮಯದಲ್ಲಿ ತಮಿಳಿನ ಮತ್ತಿಬ್ಬರು ಸ್ಟಾರ್ ನಟರಾದ ಧನುಶ್ ಮತ್ತು ವಿಜಯ್ ಬೇರೆ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಓಟಿಟಿಗೆ ನೇರ ಬಿಡುಗಡೆ ಮಾಡುವುದಿಲ್ಲ: ಧನುಶ್-ವಿಜಯ್

ಓಟಿಟಿಗೆ ನೇರ ಬಿಡುಗಡೆ ಮಾಡುವುದಿಲ್ಲ: ಧನುಶ್-ವಿಜಯ್

ಧನುಶ್ ಮತ್ತು ವಿಜಯ್ ಅವರುಗಳು ತಮ್ಮ ಸಿನಿಮಾಗಳನ್ನು ಓಟಿಟಿಗೆ ಬಿಡುಗಡೆ ಮಾಡುವುದಕ್ಕಿಂತಲೂ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುಕ್ಕೆ ನಮ್ಮ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ. ಆ ಮೂಲಕ ತಮ್ಮ ಸಿನಿಮಾವನ್ನು ಓಟಿಟಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜಗಮೇ ತಾಂಡಿರಮ್, ಮಾಸ್ಟರ್ ಬಿಡುಗಡೆಗೆ ತಯಾರು

ಜಗಮೇ ತಾಂಡಿರಮ್, ಮಾಸ್ಟರ್ ಬಿಡುಗಡೆಗೆ ತಯಾರು

ಧನುಶ್ ಅಭಿನಯದ ಜಗಮೇ ತಾಂಡಿರಮ್ ಮತ್ತು ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿವೆ. ಎರಡೂ ಸಿನಿಮಾಗಳ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಎಲ್ಲವೂ ಮುಗಿದಿದ್ದು, ಬಿಡುಗಡೆ ಒಂದೇ ಬಾಕಿ ಇದೆ. ಲಾಕ್‌ಡೌನ್ ಮುಗಿದ ನಂತರ ಸಿನಿಮಾ ಬಿಡುಗಡೆ ಆಗಲಿವೆ.

ಸೂರ್ಯ ಸಿನಿಮಾಗಳಿಗೆ ನಿಷೇಧ ಹೇರಿದ ಸಂಘ

ಸೂರ್ಯ ಸಿನಿಮಾಗಳಿಗೆ ನಿಷೇಧ ಹೇರಿದ ಸಂಘ

ಸೂರ್ಯ ತಮ್ಮ ನಿರ್ಮಾಣದ ಸಿನಿಮಾವನ್ನು ಅಮೆಜಾನ್ ಪ್ರೈಂ ಗೆ ಮಾರಾಟ ಮಾಡಿದ್ದಕ್ಕೆ ತಮಿಳುನಾಡು ರಾಜ್ಯ ಚಿತ್ರಮಂದಿರ ಹಾಗೂ ಮಲ್ಟಿಫ್ಲೆಕ್ಸ್ ಸಂಘಗಳು ವಿರೋಧ ವ್ಯಕ್ತಪಡಿಸಿದ್ದು, ಸೂರ್ಯ ನಡೆಯನ್ನು ಖಂಡಿಸಿರುವುದಲ್ಲದೆ, ಸೂರ್ಯ ಸಿನಿಮಾಗಳನ್ನು ಪ್ರದರ್ಶಿಸುವುದಿಲ್ಲವೆಂದು ನಿಷೇಧ ಸಹ ಹೇರಿವೆ.

ಕೆಲವು ನಿರ್ಮಾಪಕರಿಂದ ಬೆಂಬಲವೂ ದೊರೆತಿದೆ

ಕೆಲವು ನಿರ್ಮಾಪಕರಿಂದ ಬೆಂಬಲವೂ ದೊರೆತಿದೆ

ಆದರೆ ಅದೇ ಸಮಯದಲ್ಲಿ ನಿರ್ಮಾಪಕರ ಸಂಘವು ಸೂರ್ಯ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಸೂರ್ಯ ಮಾಡಿದ್ದು ಸರಿಯಾಗಿದೆ ಎಂದಿದ್ದಾರೆ. ಈಗ ಧನುಶ್ ಮತ್ತು ವಿಜಯ್ ಬೇರೆ ದಾರಿ ಹಿಡಿದಿರುವ ಕಾರಣ ಮತ್ತೆ ಸೂರ್ಯ ಒಬ್ಬಂಟಿಯಾಗಿದ್ದಾರೆ.

More from Filmibeat

English summary
Tamil actors Dhanush and Vijay said they will not prefer to release their movies directly in OTT other than theaters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X