ಸದ್ದಿಲ್ಲದೇ ಓಟಿಟಿಗೆ ಬಂತು ಅಮಿತಾಬ್ ಬಚ್ಚನ್ ಮೊಮ್ಮಗನ ಮೊದಲ ಮತ್ತು ಧರ್ಮೇಂದ್ರ ಕೊನೆಯ ಸಿನಿಮಾ 'ಇಕ್ಕೀಸ್' ; ಆದರೆ.!

ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಚಿತ್ರಮಂದಿರ ಮತ್ತು ಓಟಿಟಿಯ ನಡುವೆ ಚಿತ್ರರಂಗ ಸಿಲುಕಿಕೊಂಡಿದೆ. ಚಿತ್ರಮಂದಿರಕ್ಕೆ ಓಟಿಟಿ ತೀವೃವಾದ ಸ್ಪರ್ಧೆಯನ್ನೊಡ್ಡುತ್ತಿದೆ. ಚಿತ್ರಮಂದಿರದಲ್ಲಿ ಕುಳಿತು ಚಿತ್ರ ನೋಡುವ ಮಜಾ ಬೇರೆಯದ್ದೇ ಆದರೂ ಕೂಡ ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ಸಮಯದಲ್ಲಿ ತಮ್ಮ ಇಷ್ಟದ ಚಿತ್ರವನ್ನು ನೋಡುವ ಪ್ರೇಕ್ಷಕರ ವರ್ಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಮಲ್ಟಿಪ್ಲೆಕ್ಸ್‌ಗೆ ತೆರಳಿ ಜೇಬಿಗೆ ಕತ್ತರಿ ಹಾಕಿಸಿಕೊಳ್ಳುವ ಬದಲು ಕೆಲ ವಾರಗಳ ನಂತರ ಮೊಬೈಲ್ ಅಥವಾ ಟಿವಿಯಲ್ಲಿ ಚಿತ್ರವನ್ನು ನೋಡುವುದೇ ಹಲವರ ಪಾಲಿಗೆ ಈಗ ನೆಚ್ಚಿನ ಹವ್ಯಾಸವಾಗಿದೆ. ಪ್ರೇಕ್ಷಕ ಮಹಾಪ್ರಭುವಿನ ಈ ''ವೇಯ್ಟಿಂಗ್ ಪಾಲಿಸಿ''ಯಿಂದಾಗಿ ಹಲವು ಚಿಕ್ಕ-ಪುಟ್ಟ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ನೆಲಕಚ್ಚುತ್ತಿವೆ. ಅದರಲ್ಲಿಯೂ ಹೊಸಬರದ್ದು ಕಥೆ ಅಲ್ಲ ಬದಲಿಗೆ ವ್ಯಥೆ. ವಿಮರ್ಷಕರು ಚಿತ್ರವನ್ನು ಮೆಚ್ಚಿಕೊಂಡರು, ಚಿತ್ರದ ಕಥೆ ಚೆನ್ನಾಗಿದ್ದರು ಕೂಡ ಹೊಸಬರಲ್ಲಿ ಬಹುತೇಕರು ಪ್ರೇಕ್ಷಕರ ಬರ ಎದುರಿಸುತ್ತಿದ್ದಾರೆ.

dharmendra-s-final-salute-ikkis-arrives-on-prime-video-with-a-massive-release-twist-you-can-t-mis

ಹೀಗೆ ಪ್ರೇಕ್ಷಕರ ಕೊರತೆಯಿಂದ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯಾ ನಂದ ಅಭಿನಯದ ಮೊದಲ ಚಿತ್ರ ''ಇಕ್ಕೀಸ್'' ಕೂಡ ಒಂದು. ಸದ್ಯ ಈ ಚಿತ್ರ ಸದ್ದಿಲ್ಲದೇ ಓಟಿಟಿಗೆ ಬಂದಿದೆ.

ಹೌದು, ಇಕ್ಕೀಸ್.. ಅಗಸ್ತ್ಯಾ ನಂದಾ ಮತ್ತು ಅಕ್ಷಯ್ ಕುಮಾರ್ ಅವರ ಅಕ್ಕನ ಮಗಳು ಸಿಮರ್ ಭಾಟಿಯಾ ಅಭಿನಯದ ಮೊದಲ ಸಿನಿಮಾ. ಬಾಲಿವುಡ್‌ನ ದಂತಕತೆ ಧಮೇಂದ್ರ ಅಭಿನಯದ ಕೊನೆಯ ಸಿನಿಮಾ. ಶ್ರೀರಾಮ್ ರಾಘವನ್ ನಿರ್ದೇಶನದ ಈ ಚಿತ್ರ ಭಾರತದ ಅತ್ಯಂತ ಕಿರಿಯ ವಯಸ್ಸಿನ ಎರಡನೇ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ ಅವರ ಸ್ಫೂರ್ತಿದಾಯಕ ಕಥೆಯನ್ನು ಒಳಗೊಂಡಿರುವ ಸಿನಿಮಾ.

ಹಾಗೇ ನೋಡಿದರೆ ''ಇಕ್ಕೀಸ್'' ಕಳೆದ ವರ್ಷಾಂತ್ಯದಲ್ಲಿ ಅಂದರೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತೆರೆಗೆ ಬರಬೇಕಿತ್ತು. ಆದರೆ.. ''ಧುರಂಧರ್'' ಅಬ್ಬರಕ್ಕೆ ಬೆದರಿದ ಚಿತ್ರತಂಡ ಒಂದು ವಾರ ಚಿತ್ರದ ಬಿಡುಗಡೆಯನ್ನು ಮುಂದೂಡಿತ್ತು. ಹೊಸ ವರುಷ.. ಹೊಸ ಹರುಷ ತರುತ್ತೆ.. ''ಧುರಂಧರ್'' ಕ್ರೇಜ್ ಕಡಿಮೆಯಾಗಿರುತ್ತೆ ಎಂಬ ಲೆಕ್ಕಾಚಾರದಲ್ಲಿ ಚಿತ್ರವನ್ನು ಜನವರಿ 1ರಂದು ಬಿಡುಗಡೆ ಮಾಡಲಾಗಿತ್ತು. ಆದರೂ ಕೂಡ ಲೆಕ್ಕಾಚಾರ ಕೂಡ ಬುಡಮೇಲಾಗಿತ್ತು. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಭಾರತದಲ್ಲಿ ಈ ಚಿತ್ರ ₹ 31.85 ಕೋಟಿಯನ್ನಷ್ಟೇ ಗಳಿಸಿತು. ಈ ಮೂಲಕ ವರ್ಷದ ಆರಂಭದಲ್ಲಿಯೇ ಬಾಲಿವುಡ್‌ ಸೋಲಿನ ಮೂಲಕ ಖಾತೆ ತೆರೆಯುವಂತಾಯ್ತು.

ಕಥಾಹಂದರ

ಹುತಾತ್ಮ ಲೆಫ್ಟಿನೆಂಟ್ ''ಅರುಣ್ ಖೇತ್ರಪಾಲ್'' ಅವರ ಜೀವನಾಧಾರಿತ ಚಿತ್ರ ''ಇಕ್ಕಿಸ್''.1971ರ ಇಂಡೋ-ಪಾಕ್ ಯುದ್ಧದ ''ಬಸಂತ‌ರ್'' ಕದನದಲ್ಲಿ 21ನೇ ವಯಸ್ಸಿನಲ್ಲಿ ಹುತಾತ್ಮರಾದ ಅರುಣ್ ಅತ್ಯುನ್ನತ ಗೌರವವಾದ ಪರಮ ವೀರ ಚಕ್ರ ಪಡೆದ ಅತ್ಯಂತ ಕಿರಿಯ ಅಧಿಕಾರಿ. ಇವರ ರಕ್ತದಲ್ಲಿಯೇ ದೇಶ ಸೇವೆ ಇತ್ತು. ಇವರ ಅಜ್ಜ ಮತ್ತು ಮುತ್ತಜ್ಜರೂ ಕೂಡ ಸೈನಿಕರಾಗಿದ್ದರು. ನಿವೃತ್ತ ಬ್ರಿಗೇಡಿಯರ್ ಎಂ.ಎಲ್.ಖೇತ್ರಪಾಲ್ ಅವರ ಮಗ ಆಗಿದ್ದರು ಅರುಣ್ ಖೇತ್ರಪಾಲ್. ಇಂಥಾ ಅರುಣ್ ಖೇತ್ರಪಾಲ್ ಅವರ ದೇಶ ಭಕ್ತಿಯ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ. ಹಾಗಂಥ ಇಲ್ಲಿ ಕೇವಲ ಯುದ್ಧದ ಸನ್ನಿವೇಶಗಳು ಮಾತ್ರ ಇಲ್ಲ. ಬದಲಿಗೆ ದೇಶಭಕ್ತಿಯ ಜೊತೆ ಭಾವುಕತೆ ಇದೆ.

Dharmendra s Final Salute Ikkis Arrives on Prime Video with a Massive Release Twist You Can t Miss

ಹೀಗೆ ಭಾವನಾತ್ಮಕವಾದ ಪ್ರಯಾಣದ ಕಥಾಹಂದರವನ್ನು ಹೊಂದಿರುವ ''ಇಕ್ಕೀಸ್'' ಸದ್ಯ ಓಟಿಟಿಗೆ ಬಂದಿದೆ. ಅಮೆಜಾನ್ ಪ್ರೈಂನಲ್ಲಿ ನಿನ್ನೆಯಿಂದ (ಫೆಬ್ರವರಿ 12) ಪ್ರಸಾರವೂ ಆಗುತ್ತಿದೆ. ಆದರೆ.. ನೀವು ಈ ಚಿತ್ರವನ್ನು ಚಂದಾದಾರರಾಗಿದ್ದರೂ ಕೂಡ ಫ್ರೀ ಆಗಿ ನೋಡಲು ಸಾಧ್ಯ ಇಲ್ಲ. 349 ರೂಪಾಯಿಗಳನ್ನು ನೀಡಿ ನೀವು ಈ ಚಿತ್ರವನ್ನು ನೋಡಬಹುದು. ಒಂದು ವೇಳೆ ಫ್ರೀ ನೋಡುವ ನಿರ್ಧಾರ ನಿಮ್ಮದಾಗಿದ್ದರೆ ಅದಕ್ಕೆ ಇನ್ನೆರಡು ವಾರ ಕಾಯಬೇಕು. ಫೆಬ್ರವರಿ 26ರ ನಂತರ ಈ ಚಿತ್ರ ಅಮೆಜಾನ್‌ನಲ್ಲಿ ಉಚಿತವಾಗಿ ವೀಕ್ಷಣೆಗೆ ಲಭ್ಯ ಇರಲಿದೆ. ಆಸಕ್ತ ಚಿತ್ರ ಪ್ರೇಮಿಗಳು ಈ ಚಿತ್ರವನ್ನು ಮನೆ ಮಂದಿ ಜೊತೆ ಕುಳಿತು ನೋಡಬಹುದು

ತಾರಾಬಳಗ- ಧರ್ಮೇಂದ್ರ, ಅಗಸ್ತ್ಯ ನಂದಾ, ಜೈದೀಪ್ ಅಹ್ಲಾವತ್, ಸಿಮರ್ ಭಾಟಿಯಾ, ರಾಹುಲ್ ದೇವ್, ಸಿಕಂದರ್ ಖೇರ್ ಮುಂತಾದವರು

ನಿರ್ದೇಶನ : ಶ್ರೀರಾಮ್ ರಾಘವನ್

More from Filmibeat

English summary
Dharmendra’s final film 'Ikkis' is now on Prime Video, but there’s a catch! See why fans are talking about the release twist and the shocking 1971 war climax.
Read more about: bollywood dharmendra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X