Martin OTT Streaming Now: ಅಂತೂ ಓಟಿಟಿಗೆ ಬಂದೇಬಿಟ್ಟ 'ಮಾರ್ಟಿನ್'; ಎಲ್ಲಿ ನೋಡಬಹುದು ಅಂದ್ರೆ..

ಈ ವರ್ಷ ಬಹಳ ನಿರೀಕ್ಷೆ ಹುಟ್ಟಾಕ್ಕಿದ್ದ ಕನ್ನಡ ಸಿನಿಮಾ 'ಮಾರ್ಟಿನ್'. ದಸರಾ ಸಂಭ್ರಮದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಎಪಿ ಅರ್ಜುನ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಆಕ್ಷನ್ ಧಮಾಕ ಕೆಲವರಿಗೆ ಇಷ್ಟವಾಗಿತ್ತು. ಇನ್ನು ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಸಿನಿಮಾ ಓಟಿಟಿಗೆ ಬಂದಿದೆ.

ಅಂದಾಜು 80 ಕೋಟಿ ರೂ. ಬಜೆಟ್‌ನಲ್ಲಿ 'ಮಾರ್ಟಿನ್' ಸಿನಿಮಾ ನಿರ್ಮಾಣವಾಗಿತ್ತು. ಉದಯ್ ಕೆ ಮೆಹ್ತಾ ಚಿತ್ರಕ್ಕೆ ಹಣ ಹೂಡಿದ್ದರು. 240 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆದಿತ್ತು. ದೇಶ ವಿದೇಶದ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಪ್ರಯತ್ನ ನಡೆದಿತ್ತು. ಆದರೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಕೆಲವರು ಚಿತ್ರವನ್ನು ಟೀಕಿಸಿ ಟ್ರೋಲ್ ಮಾಡಿದ್ದರು.

Dhruva sarja s Martin movie is now available for rent on prime video in the US and UK

ಧ್ರುವ ಸರ್ಜಾ ನಟನೆಯ 5ನೇ ಸಿನಿಮಾ ಇದು. ಬಹಳ ಹಿಂದೆ ಶುರುವಾಗಿದ್ದ 'ಮಾರ್ಟಿನ್' ಸಿನಿಮಾ ಕಾರಣಾಂತರಗಳಿಂದ ತಡವಾಗಿ ತೆರೆಗೆ ಬಂದಿತ್ತು. ಅಕ್ಟೋಬರ್ 11ಕ್ಕೆ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ 40 ದಿನಗಳ ಬಳಿಕ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿದೆ. ಚಿತ್ರದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಥೆ ಬರೆದಿದ್ದು. ಎಪಿ ಅರ್ಜುನ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು.

ಭಾರೀ ಹೈಪ್ ಕ್ರಿಯೇಟ್ ಮಾಡಿದ್ದ 'ಮಾರ್ಟಿನ್' ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದ್ದು ಸುಳ್ಳಲ್ಲ. ಚಿತ್ರದಲ್ಲಿ ನಟ ಧ್ರುವ ಸರ್ಜಾ ದ್ವಿಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ. ವೈಭವಿ ಶಾಂಡಿಲ್ಯ ನಾಯಕಿಯಾಗಿ ಮಿಂಚಿದ್ದರು. ಇನ್ನುಳಿದಂತೆ ಅಚ್ಯುತ್ ಕುಮಾರ್, ಅನ್ವೇಷಿ ಜೈನ್, ಚಿಕ್ಕಣ್ಣ, ಸುಕೃತಾ ವಾಗ್ಲೆ, ನವಾಬ್ ಶಾ, ಮಾಳವಿಕಾ ಅವಿನಾಶ್ ತಾರಾಗಣದಲ್ಲಿದ್ದಾರೆ.

Dhruva sarja s Martin movie is now available for rent on prime video in the US and UK

ಮೊದಲ 2 ವಾರಕ್ಕೆ 'ಮಾರ್ಟಿನ್' ಸಿನಿಮಾ ಅಂದಾಜು 24 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಕರ್ನಾಟಕ ಬಿಟ್ಟು ಹೊರ ರಾಜ್ಯಗಳಲ್ಲಿ ಕೂಡ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಹಳ ಬೇಗ ಸಿನಿಮಾ ಚಿತ್ರಮಂದಿರಗಳಿಂದ ಕಣ್ಮರೆ ಆಗಿತ್ತು. ಆದರೂ ಸಾಕಷ್ಟು ಜನ ಚಿತ್ರವನ್ನು ಓಟಿಟಿಯಲ್ಲಿ ವೀಕ್ಷಿಸಲು ಕಾಯುತ್ತಿದ್ದಾರೆ.

'ಮಾರ್ಟಿನ್' ಸಿನಿಮಾ ಸದ್ದಿಲ್ಲದೇ ಓಟಿಟಿಗೆ ಬಂದಿದೆ. ಇದೀಗ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡ ಜೊತೆಗೆ ತೆಲುಗು, ತಮಿಳು, ಮಲಯಾಳಂ ವರ್ಷನ್‌ಗಳಲ್ಲಿ ರಿಲೀಸ್ ಆಗಿದೆ. ಮೊದಲಿಗೆ ಯುಎಸ್‌, ಯುಕೆಯಲ್ಲಿ ಮಾತ್ರ ವೀಕ್ಷಣೆಗೆ ಲಭ್ಯವಿತ್ತು. ಇದೀಗ ಭಾರತದಲ್ಲಿ ಕೂಡ ಸ್ಟ್ರೀಮಿಂಗ್ ಆರಂಭಿಸಿದೆ.

'ಮಾರ್ಟಿನ್' ಚಿತ್ರದ ಬಗ್ಗೆ ಹೇಳುವುದಾದರೆ ಪಾಕಿಸ್ತಾನದಲ್ಲಿ ಭಾರತೀಯನೊಬ್ಬ(ಧ್ರುವ ಸರ್ಜಾ) ಸಿಕ್ಕಿಕೊಳ್ಳುವ ಕಥೆ ಇಲ್ಲಿದೆ. ಆದರೆ ಹಳೆಯದನ್ನೆಲ್ಲಾ ಮರೆತ ಆತನಿಗೆ ತಾನು ಯಾರು? ಹಿನ್ನೆಲೆ ಏನು? ಎನ್ನುವುದನ್ನು ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿ ಆಗುತ್ತದೆ. ಹಾದಿಯಲ್ಲಿ ಏನೆಲ್ಲಾ ನಡೆಯುತ್ತದೆ? ಅರ್ಜುನ್ ಯಾರು? ಮಾರ್ಟಿನ್ ಯಾರು? ಎನ್ನುವ ಗೊಂದಲದ ನಡುವೆ ಸಿನಿಮಾ ಕಥೆ ಸಾಗುತ್ತದೆ.

ಬಹಳ ಅದ್ಧೂರಿಯಾಗಿ 'ಮಾರ್ಟಿನ್' ಸಿನಿಮಾ ತೆರೆಗೆ ಬಂದಿತ್ತು. ಕೋಟಿ ಕೋಟಿ ಸುರಿದು ಸಿನಿಮಾ ಕಟ್ಟಿಕೊಡಲಾಗಿತ್ತು. ಶೇಖರ್ ಚಂದ್ರ ಛಾಯಾಗ್ರಹಣ, ರವಿ ಬಸ್ರೂರು ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಮಣಿಶರ್ಮ ಚಿತ್ರದ ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ. ಇನ್ನು ಭಾರತದಲ್ಲಿ ಓಟಿಟಿಗೆ ಬರೋಕು ಮುನ್ನ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು.

More from Filmibeat

English summary
Dhruva sarja starrer Martin movie ott Release details;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X