ಒಟಿಟಿಯಲ್ಲಿ ಬರ್ತಿದೆ 'ದಿಯಾ' ನಿರ್ಮಾಪಕರ 'ಮನೆ ನಂ.13' ಸಿನಿಮಾ
ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡಿರುವ 'ದಿಯಾ' ಸಿನಿಮಾ ನಿರ್ಮಾಪಕರ ಮತ್ತೊಂದು ಸಿನಿಮಾ ಈಗ ಒಟಿಟಿಯಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಹೌದು, ನಿರ್ಮಾಪಕ ಡಿ ಕೃಷ್ಣ ಚೈತನ್ಯ ಅವರ ಮನೆ ನಂ 13 ಸಿನಿಮಾ ನೇರವಾಗಿ ಆನ್ ಲೈನ್ ನಲ್ಲಿ ಬಿಡುಗಡೆಯಾಗುತ್ತಿದೆ.
ನವೆಂಬರ್ 26ರಂದು ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗುತ್ತಿದೆ. ಚಿತ್ರಕ್ಕೆ ಕತಿರೆಸನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಸಂಜೀವ್, ಚೇತನ್ ಗಂಧರ್ವ, ಐಶ್ವರ್ಯ ಗೌಡ, ಪ್ರವೀಣ್ ಪ್ರೇಮ್ ಮತ್ತು ವರ್ಷಾ ಬೊಲ್ಲಮ್ಮ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಹಾರರ್ ಥ್ರಿಲ್ಲರ್ ಮನೆ ನಂ. 13 ಸಿನಿಮಾದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು, ನೋಡುಗರಿಗೆ ಭಯ ಹುಟ್ಟಿಸುತ್ತಿದೆ. ಇದೀಗ ಅಮೆಜಾನ್ ಪ್ರೈನ್ ನಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಈಗಾಗಲೇ ಒಟಿಟಿಯಲ್ಲಿ ಕನ್ನಡದ ಅನೇಕ ಸಿನಿಮಾಗಳು ರಿಲೀಸ್ ಆಗಿವೆ. ಇತ್ತೀಚಿಗಷ್ಟೆ ಫ್ರೆಂಚ್ ಬಿರಿಯಾನಿ ಸಿನಿಮಾ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ಬಳಿಕ ಭೀಮಸೇನ ನಳಮಹಾರಾಜ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಇದೀಗ ಮತ್ತೊಂದು ಸಿನಿಮಾ ಮನೆ ನಂ. 13 ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ.


Click it and Unblock the Notifications











