For Quick Alerts
  ALLOW NOTIFICATIONS  
  For Daily Alerts

  ಶ್ರೀರಾಮನಾಗಿ ದಿಗಂತ್, ಸದ್ದಿಲ್ಲದೆ ಬಿಡುಗಡೆ ಆಯ್ತು ವೆಬ್ ಸೀರೀಸ್

  |

  ನಟ ದಿಗಂತ್ ಅಭಿನಯಿಸಿರುವ ರಾಮಾಯಣ ಆಧರಿತ 'ರಾಮ್ ಯುಗ್' ವೆಬ್ ಸರಣಿಯು ಮೇ 6 ರಂದು ಎಂಎಕ್ಸ್ ಪ್ಲೇಯರ್‌ನಲ್ಲಿ ಬಿಡುಗಡೆ ಆಗಿದೆ.

  ಕನ್ನಡದ ನಟ ದಿಗಂತ್ ಮಂಚಾಲೆ, ಅಕ್ಷಯ್ ದೊಗ್ರ, ಐಶ್ವರ್ಯಾ ಒಜಾ, ವಿವಾನ್ ಭಾತೆನಾ, ಅನುಪ್ ಸೋನಿ, ಕಬೀರ್ ದುಹಾನ್ ಸಿಂಗ್ ಅಭಿನಯದ 'ರಾಮ್ ಯುಗ್' ವೆಬ್ ಸಿರೀಸ್‌ ಎಂಎಕ್ಸ್ ಪ್ಲೇಯರ್‌ನಲ್ಲಿ ಪ್ರಸಾರವಾಗುತ್ತಿದೆ.

  ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಈ ವೆಬ್ ಸರಣಿ ನಿರ್ಮಾಣ ಮಾಡಲಾಗಿದೆ. ವೆಬ್ ಸರಣಿಯ ನಿರ್ದೇಶನ ಮಾಡಿರುವುದು ಕುನಾಲ್ ಕೊಹ್ಲಿ. ವೆಬ್ ಸರಣಿಯು ಎಂಟು ಎಪಿಸೋಡ್‌ಗಳಲ್ಲಿ ಬಿಡುಗಡೆ ಆಗಿದೆ.

  'ರಾಮ್ ಯುಗ್' ವೆಬ್ ಸರಣಿಯ ಬಗ್ಗೆ ಮಿಶ್ರ ರೀತಿಯ ವಿಮರ್ಶೆ ವ್ಯಕ್ತವಾಗಿದೆ. ದಿಗಂತ್ ಮಂಚಾಲೆ ನಟನೆ ಮೆಚ್ಚುಗೆ ವ್ಯಕ್ತವಾಗಿದೆ ಆದರೆ ಧಾರಾವಾಹಿ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ ಮತ್ತು ಚಿತ್ರಕತೆ ಹಾಗೂ ಸಂಭಾಷಣೆ ಸಡಿಲವಾಗಿದೆ ಎನ್ನಲಾಗಿದೆ.

  ವೆಬ್ ಸರಣಿಯ ಬಹುತೇಕ ಚಿತ್ರೀಕರಣವನ್ನು ಮಾರಿಷಸ್‌ನಲ್ಲಿ ಮಾಡಲಾಗಿದೆ. ಕಳಪೆ ಗುಣಮಟ್ಟದ ಗ್ರಾಫಿಕ್ಸ್ ಮತ್ತು ಪಾತ್ರಗಳನ್ನು ಅತಿರಂಜಿತಗೊಳಿಸಿ ಪ್ರೆಸೆಂಟ್ ಮಾಡಿರುವುದು ವೆಬ್ ಸರಣಿಯ ಟ್ರೇಲರ್‌ನಲ್ಲಿಯೇ ತಿಳಿದು ಬರುತ್ತಿದೆ.

  ಶಕೀಲಾ ಬಾಳಲ್ಲಿ 15 ಜನ ಪುರುಷರು ಬಂದು ಹೋದರು,ಆದ್ರೆ... | Filmibeat Kannada

  ಕಳೆದ ವರ್ಷದ ಲಾಕ್‌ಡೌನ್‌ ಅವಧಿಯಲ್ಲಿ ರಮಾನಂದ ಸಾಗರ್ ಅವರ ಹಳೆಯ ರಾಮಾಯಣ ಬಿಡುಗಡೆ ಆಗಿ ಭಾರಿ ಜನಮನ್ನಣೆ ಗಳಿಸಿತ್ತು, ರಾಮಾಯಣದ ಕತೆಗೆ ಇನ್ನೂ ಬೇಡಿಕೆ ಇರುವುದು ಮನಗಂಡು ಆತುರದಲ್ಲಿ ನಿರ್ಮಾಣ ಮಾಡಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

  English summary
  Kannada actor Diganth Manchale's 'Ram Yug' web series released on MX player. Diganth played Sri Ram's character.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X