14 ತಿಂಗಳ ಕಾಯುವಿಕೆ ಅಂತ್ಯ ; ಸದ್ದಿಲ್ಲದೇ ಓಟಿಟಿಗೆ ಬಂತು ಸನ್ನಿ ಲಿಯೋನ್ ಅಭಿನಯದ ಸಿನಿಮಾ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರ ನೋಡಲು ನೆಟ್‌ಫ್ಲಿಕ್ಸ್ , ಅಮೆಜಾನ್, ಜೀ 5, ಜೀಯೋ ಹಾಟ್ ಸ್ಟಾರ್ ಹೀಗೆ ಹತ್ತು ಹಲವು ಓಟಿಟಿ ವೇದಿಕೆಗಳಿವೆ.

ಹಾಗಂಥ ಈ ವೇದಿಕೆಗಳು ಕಣ್ಣಿಗೆ ಕಂಡ ಸಿನಿಮಾಗಳಿಗೆಲ್ಲಾ ಮಣೆ ಹಾಕುವುದಿಲ್ಲ. ಸೂಪರ್ ಸ್ಟಾರ್ ಗಳ ಚಿತ್ರಗಳನ್ನು ಹೊರತು ಪಡಿಸಿದರೆ ಬೇರೆ ಚಿತ್ರಗಳನ್ನು ಅಳೆದು ತೂಗಿ ಈ ಸಂಸ್ಥೆಗಳು ಆಯ್ಕೆ ಮಾಡುತ್ತವೆ. ಈ ಮಾತು ಕೇವಲ ಸೌತ್ ಸಿನಿಮಾಗಳಿಗಷ್ಟೇ ಅನ್ವಯ ಆಗುವುದಿಲ್ಲ. ಬಾಲಿವುಡ್ ಗೆ ಕೂಡ ಈ ಮಾತು ಅನ್ವಯವಾಗುತ್ತೆ. "ಬ್ಯಾಡಾಸ್ ರವಿಕುಮಾರ್" ಇದಕ್ಕೆ ಸದ್ಯದ ಉದಾಹರಣೆ.

digital-exile-ends-himesh-reshammiya-s-badass-ravi-kumar-invades-jiohotstar

ಹೌದು, ''ಬ್ಯಾಡಾಸ್ ರವಿಕುಮಾರ್''.. ಬಾಲಿವುಡ್ ನ ಮಾಂತ್ರಿಕ .. ಗಾಯಕ.. ನಾಯಕ.. ಹಿಮೇಶ್ ರೇಶಮಿಯಾ ಅಭಿನಯದ ಸಿನಿಮಾ. ಕಳೆದ ವರ್ಷ ಫೆಬ್ರವರಿಯಲ್ಲಿ ತೆರೆಗೆ ಬಂದ ಸಿನಿಮಾ ಇದು.

"ಅನಿಮಲ್" ನೆರಳಿನಲ್ಲೇ ಜನ್ಮ ಪಡೆದ ಚಿತ್ರ ಇದು ಎನ್ನುವ ಚರ್ಚೆಗಳ ನಡುವೆ 20 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಹತ್ ಹತ್ರ ₹11.17 ಕೋಟಿಯನ್ನು ಗಳಿಸಿತ್ತು. ಈ ಮಾತನ್ನು ನಾವಲ್ಲ, ಬದಲಿಗೆ ಬಾಕ್ಸಾಫೀಸ್ ಅಂಕಿ ಅಂಶ ಹಂಚಿಕೊಳ್ಳುವ ''ಸ್ಯಾಕ್ನಿಲ್"ನಲ್ಲಿ ಉಲ್ಲೇಖವಾದ ವಿವರ ಇದು.

ಆದರೂ ಕೂಡ ಅದ್ಯಾಕೋ ಈ ''ಬ್ಯಾಡಾಸ್ ರವಿಕುಮಾರ್'' ಚಿತ್ರಕ್ಕೆ ಇಲ್ಲಿಯವರೆಗೆ ಓಟಿಟಿಯಲ್ಲಿ ಬಿಡುಗಡೆಯ ಭಾಗ್ಯ ಸಿಕ್ಕಿರಲಿಲ್ಲ. ಇದಕ್ಕೆ ಹಿಮೇಶ್ ರೇಶಮಿಯಾ ಮತ್ತು ಓಟಿಟಿ ವೇದಿಕೆಗಳ ಜೊತೆಗಿನ ಭಿನ್ನಾಭಿಪ್ರಾಯ ಕಾರಣ ಎಂದು ಹೇಳಲಾಗುತ್ತಿದೆಯಾದರೂ ಹಿಮೇಶ್ ರೇಶಮಿಯಾ ಅಭಿಮಾನಿಗಳು ಮಾತ್ರ "ಬ್ಯಾಡಾಸ್ ರವಿಕುಮಾರ್" ನ ತಮ್ಮ ಮನೆಯ ಲಿವಿಂಗ್ ರೂಮ್ ನಲ್ಲಿ ಮಿಸ್ ಮಾಡಿಕೊಳ್ಳುತ್ತಲೇ ಇದ್ದರು.

ಆದರೆ ಈಗ ಹಾಗಿಲ್ಲ. ಸಂದರ್ಭ- ಸನ್ನಿವೇಶ ಬದಲಾಗಿದೆ. "ಬ್ಯಾಡಾಸ್ ರವಿಕುಮಾರ್ " ಓಟಿಟಿಯ ಅಂಗಳಕ್ಕೆ ಬಂದಿದೆ. ಮೊನ್ನೆ ಏಪ್ರಿಲ್ 18ರಿಂದ ಪ್ರಸಾರವಾಗುತ್ತಿದೆ.

digital-exile-ends-himesh-reshammiya-s-badass-ravi-kumar-invades-jiohotstar

ತಾರಾಬಳಗ

ಹಿಮೇಶ್ ರೇಶಮಿಯಾ, ಪ್ರಭುದೇವ, ಕೀರ್ತಿ ಕುಲ್ಹಾರಿ, ಸನ್ನಿ ಲಿಯೋನ್, ಸಂಜಯ್ ಮಿಶ್ರಾ, ಜಾನಿ ಲಿವರ್, ಮೋಹನ್ ಜೋಶಿ, ರಜಾ ಮುರಾದ್, ಸಿಮೋನಾ ಜೆ, ಸೌರಭ್ ಸಚ್ದೇವ, ಪವನ್ ಮಲ್ಹೋತ್ರಾ, ನವ್ನೀತ್ ನಿಶಾನ್, ಮನೀಶ್ ವಾಧ್ವಾ, ರಾಜೇಶ್ ಶರ್ಮಾ, ಪ್ರಶಾಂತ್ ನಾರಾಯಣನ್ ಮುಂತಾದವರು.

ನಿರ್ದೇಶನ: ಕೀತ್ ಗೋಮ್ಸ್

ಲೇಖಕರು: ಕುಶಾಲ್ ವೇದ್ ಬಕ್ಷಿ

ಸಂಭಾಷಣೆ: ಬಂಟಿ ರಾಥೋಡ್

ಛಾಯಾಗ್ರಹಣ: ಮನೋಜ್ ಸೋನಿ

ಸಂಕಲನ: ರಾಮೇಶ್ವರ್ ಎಸ್. ಭಗತ್

ನಿರ್ಮಾಣ ; ಹಿಮೇಶ್ ರೇಶಮಿಯಾ

ಎಲ್ಲಿ ನೋಡಬಹುದು ?

ಬಹುತಾರಾಗಣವನ್ನು ಹೊಂದಿರುವ ''ಬ್ಯಾಡಾಸ್ ರವಿಕುಮಾರ್'' ಚಿತ್ರವನ್ನು ನೀವು ಜಿಯೋ ಹಾಟ್‌ಸ್ಟಾರ್‌ ನಲ್ಲಿ ಸದ್ಯ ನೋಡಬಹುದು. ಈಗಾಗಲೇ ಚಿತ್ರಮಂದಿರದಲ್ಲಿ ನೋಡಿದವರು ಈ ಚಿತ್ರವನ್ನು ಜಿಯೋ ಹಾಟ್‌ ಸ್ಟಾರ್ ನಲ್ಲಿ ಮತ್ತೊಮ್ಮೆ ನೋಡುವ ಉತ್ಸುಕತೆ ತೋರಿಸುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಓಟಿಟಿ ವೇದಿಕೆಯಲ್ಲಿ ಈ ಚಿತ್ರ ಸದ್ಯ ಟ್ರೆಂಡಿಂಗ್‌ನಲ್ಲಿದೆ.

ಅಂದ್ಹಾಗೇ 2 ಗಂಟೆ 26 ನಿಮಿಷ ಅವಧಿಯ ''ಬ್ಯಾಡಾಸ್ ರವಿಕುಮಾರ್'' ಚಿತ್ರಕ್ಕೆ ಐಎಂಡಿಬಿಯಲ್ಲಿ 10ಕ್ಕೆ 6.7 ರೇಟಿಂಗ್ ನೀಡಲಾಗಿದೆ. ಬಾಲಿವುಡ್‌ನ ಪ್ರಖ್ಯಾತ ವಿಮರ್ಷಕ ತರಣ್ ಆದರ್ಶ್ ಈ ಚಿತ್ರಕ್ಕೆ 5ಕ್ಕೆ 3.5 ಸ್ಟಾರ್ ನೀಡಿದ್ದರೆ ''ಟೈಮ್ಸ್ ಆಫ್ ಇಂಡಿಯಾ'' ಕೇವಲ 1.5 ಸ್ಟಾರ್ ಗಳನ್ನು ನೀಡಿದೆ. ಇನ್ನೂ ಏಪ್ರಿಲ್ 18ರಿಂದ ಜೀಯೋ ಹಾಟ್‌ ಸ್ಟಾರ್ ನಲ್ಲಿ ಪ್ರಸಾರವಾಗುತ್ತಿರುವ ಈ ಚಿತ್ರ ಇಂದು (ಏಪ್ರಿಲ್ 19) ಇದೇ ಮೊದಲ ಬಾರಿ ಟಿವಿಯಲ್ಲಿ ಕೂಡ ಪ್ರಸಾರವಾಗಿದೆ. ''ಸ್ಟಾರ್ ಗೋಲ್ಡ್'' ಈ ಚಿತ್ರದ ಸ್ಯಾಟ್‌ಲೈಟ್‌ ಹಕ್ಕುಗಳನ್ನು ಖರೀದಿ ಮಾಡಿದೆ. ಆಸಕ್ತರು ನೋಡಬಹುದು.

English summary
Brace yourself for pure Himesh-ism! Badass Ravi Kumar ends its 14-month digital exile. From viral dialogues to over-the-top action, stream the most talked-about Hindi film on JioHotstar from April 18.`
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X